5 ಬ್ಯಾಟರ್ಸ್.. 150+ ಸ್ಟ್ರೈಕ್ ರೇಟ್ – RCB ಬ್ಯಾಟಿಂಗ್ ಗೆ ಭಸ್ಮವಾಗುತ್ತಾ LSG?
ಬೆಂಗಳೂರಿನ ಬೆನ್ನು ಮುರಿತಾರಾ ಮಯಾಂಕ್?

5 ಬ್ಯಾಟರ್ಸ್.. 150+ ಸ್ಟ್ರೈಕ್ ರೇಟ್ – RCB ಬ್ಯಾಟಿಂಗ್ ಗೆ ಭಸ್ಮವಾಗುತ್ತಾ LSG?ಬೆಂಗಳೂರಿನ ಬೆನ್ನು ಮುರಿತಾರಾ ಮಯಾಂಕ್?

2026ರ ಐಪಿಎಲ್​ ಸೀಸನ್​ನಲ್ಲಿ ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸಿರೋ ಟೀಂ ಅಂತಾ ಇದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ನಾಲ್ಕಕ್ಕೆ ನಾಲ್ಕೂ ಮ್ಯಾಚ್ 200+ ಸ್ಕೋರ್. ಚೆನ್ನೈ ವಿರುದ್ಧ 250, ಮುಂಬೈ ವಿರುದ್ಧ 240 ರನ್ಸ್.. ಈಗ ಮತ್ತೆ ಬ್ಯಾಟಿಂಗ್ ಫ್ರೆಂಡ್ಲಿ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಲಕ್ನೋ ವಿರುದ್ಧ ಅಖಾಡಕ್ಕಿಳಿಯೋಕೆ ರೆಡಿಯಾಗಿದ್ದಾರೆ. ಈ ಮ್ಯಾಚ್ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿರುತ್ತೆ.

ಇದನ್ನೂ ಓದಿ : LSG ಪಂದ್ಯಕ್ಕಿಲ್ವಾ ಕಿಂಗ್ ಕೊಹ್ಲಿ? – ಸುಯಾಶ್ & ರಸಿಕ್ ಫಾರ್ಮುಲಾ ಸಕ್ಸಸ್

ಆರ್​ಸಿಬಿ ಪಂದ್ಯಗಳಿಗೆ ಇರೋ ಗತ್ತೇ ಅಂಥಾದ್ದು. ಬೆಂಗಳೂರು ಮ್ಯಾಚಸ್ ಇದ್ರೆ ಅಂದ್ರೆ ಕ್ರಿಕೆಟ್ ಫ್ಯಾನ್ಸ್ ಎಲ್ರೂ ಅಲರ್ಟ್ ಆಗಿ ಬಿಡ್ತಾರೆ. ಈ ಸೀಸನ್​ನಲ್ಲಿ ಬೆಂಗಳೂರು ತಂಡ ಆಲ್ರೆಡಿ ನಾಲ್ಕು ಮ್ಯಾಚ್ ಆಡಿದ್ದು ಈ ನಾಲ್ಕು  ಪಂದ್ಯಗಳೇ ಜಿಯೋ ಹಾಟ್​ಸ್ಟಾರ್​ನಲ್ಲಿ ಹೈಯೆಸ್ಟ್ ವ್ಯೂವರ್​ಶಿಪ್ ಪಡೆದಿರೋ ಮ್ಯಾಚಸ್.. ಹೈದ್ರಾಬಾದ್ ವಿರುದ್ಧದ ಉದ್ಘಾಟನಾ ಮ್ಯಾಚ್ ನಂಬರ್ 1 ಪ್ಲೇಸ್​ನಲ್ಲಿದೆ. ಸೆಕೆಂಡ್ ರಾಜಸ್ಥಾನ ವಿರುದ್ಧ, ಮೂರನೇ ಮ್ಯಾಚ್ ಮುಂಬೈ ವಿರುದ್ಧ ಹಾಗೇ ನಾಲ್ಕನೇ ಪಂದ್ಯ ಚೆನ್ನೈ ವಿರುದ್ಧ ಆಡಿದ್ದನ್ನ ದಾಖಲೆ ಮಟ್ಟದಲ್ಲಿ ಫ್ಯಾನ್ಸ್ ನೋಡಿದ್ದಾರೆ. ಈಗ ಐದನೇ ಪಂದ್ಯ ಲಕ್ನೋ ವಿರುದ್ಧದ ಮ್ಯಾಚ್​ಗೂ ಸಿಕ್ಕಾಪಟ್ಟೆ ಕ್ರೇಜ್ ಇದೆ. ಯಾಕಂದ್ರೆ ಆಲ್ರೆಡಿ ಆರ್​ಸಿಬಿ ಪ್ಲೇಯರ್ಸ್ ಆ ಮಟ್ಟಿಗೆ ಸೆಟ್ ಮಾಡಿದ್ದಾರೆ. ಈ ಸೀಸನ್​ನಲ್ಲಿ ರಾಜಸ್ಥಾನ ಪರ ಸೂರ್ಯವಂಶಿ, ಜೈಸ್ವಾಲ್ ಅಬ್ಬರಿಸ್ತಿದ್ದಾರೆ. ಅತ್ತ ಪಂಜಾಬ್ ತಂಡದಲ್ಲಿ ಲೆಕ್ಕಾಚಾರ ಹಾಕಿಕೊಂಡೇ ವಿನ್ನಿಂಗ್ ಟ್ರ್ಯಾಕ್​ನಲ್ಲಿದ್ದಾರೆ. ಆದ್ರೆ ಆರ್​ಸಿಬಿ ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋ ಥರ ನುಗ್ತಾ ಇದೆ. ಎಲ್ಲರ ಕಡೆಯಿಂದಲೂ ಗೇಮ್ ವಿನ್ನಿಂಗ್ ಪರ್ಫಾಮೆನ್ಸ್ ಬರ್ತಿದೆ. ಅದ್ರಲ್ಲೂ ಟಾಪ್ 5 ಬ್ಯಾಟರ್​ಗಳ ಸ್ಟ್ರೈಕ್ ರೇಟ್ ಅಂತೂ ಬೆಂಕಿಯಾಗಿದೆ.

ಬೆಂಗಳೂರಲ್ಲಿ ಬೆಂಕಿ ಬ್ಯಾಟರ್ಸ್!

ಆಟಗಾರ                                 ರನ್ಸ್                          ಸ್ಟ್ರೈಕ್ ರೇಟ್

ವಿರಾಟ್ ಕೊಹ್ಲಿ                           179                           162.73

ಫಿಲ್ ಸಾಲ್ಟ್                             132                            178.38

ರಜತ್ ಪಾಟಿದಾರ್                       195                            214.29

ದೇವದತ್ ಪಡಿಕ್ಕಲ್                     125                           201.61

ಟಿಮ್ ಡೇವಿಡ್                          133                          221.67

ಈ ಐವರು ಬ್ಯಾಟರ್​ಗಳಲ್ಲಿ ಪಡಿಕ್ಕಲ್ ಮೂರು ಪಂದ್ಯಗಳಲ್ಲಿ ಮಾತ್ರ ಬ್ಯಾಟ್ ಬೀಸಿದ್ದಾರೆ. ಉಳಿದವ್ರೆಲ್ಲಾ ನಾಲ್ಕೂ ಪಂದ್ಯಗಳಲ್ಲೂ ಬ್ಯಾಟ್ ಬೀಸಿದ್ದು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಹಾಗೇ ಈ ಐವರು ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ ನಾಲ್ಕು ಪಂದ್ಯಗಳಲ್ಲಿ 52 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದು ಈ ಐಪಿಎಲ್ ಸೀಸನ್​ನಲ್ಲಿ ಯಾವುದೇ ತಂಡಕ್ಕಿಂತ ಹೈಯೆಸ್ಟ್ ಸಿಕ್ಸರ್​ಗಳಾಗಿದೆ. ಸೋ ಇದ್ರಲ್ಲೇ ಗೊತ್ತಾಗ್ತಿದೆ ಈ ಸೀಸನ್​ನ ರಿಯಲ್ ಒರಿಜಿನಲ್ ಗ್ಯಾಂಗ್​ಸ್ಟರ್ಸ್ ಯಾರು ಅನ್ನೋದು. ಇನ್ನು ಬೌಲಿಂಗ್​ನಲ್ಲಿ ಜೇಕಬ್ ಡಫಿ ಆಡಿಸಿದ್ರೆ ಬೆಟರ್ ಆಗ್ಬೋದು. ಲಾಸ್ಟ್ ಮುಂಬೈ ವಿರುದ್ಧ ಎಕ್ಸ್​ಪೆನ್ಸಿವ್ ಆಗಿದ್ದಾರೆ ನಿಜ. ಬಟ್ ಹೈದ್ರಾಬಾದ್ ಮತ್ತು ಚೆನ್ನೈ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲೇ ಪವರ್ ಪ್ಲೇನಲ್ಲೇ ಬಿಗ್ ಬ್ರೇಕ್ ಥ್ರ್ಯೂಗಳನ್ನ ತಂದುಕೊಟ್ಟಿದ್ರು. ಸೋ ಈಗ ಲಕ್ನೋ ವಿರುದ್ಧದ ಪಂದ್ಯವೂ ಚಿನ್ನಸ್ವಾಮಿಯಲ್ಲೇ ಇರೋದ್ರಿಂದ ಒಂದೊಳ್ಳೆ ಬ್ಯಾಟಲ್ ಆಗುತ್ತೆ. ಅಲ್ಲಿಗೆ ಆರ್​ಸಿಬಿ ಅಂತೂ ಸಾಲಿಡ್ ಫಾರ್ಮ್​ನಲ್ಲಿದೆ. ಅತ್ತ ಲಕ್ನೋಗೂ ಕೂಡ ಇವತ್ತಿನ ಮ್ಯಾಚಲ್ಲಿ ಆನೆಬಲ ಬರಲಿದೆ. ಅಂದ್ರೆ ಎಲ್​ಎಸ್​ಜಿ ಬೌಲಿಂಗ್​ನ ವೇಗಧೂತ ಮಯಾಂಕ್ ಯಾದವ್ ಈ ಮ್ಯಾಚ್ ಮೂಲಕವೇ ಕಂ ಬ್ಯಾಕ್ ಮಾಡ್ತಿದ್ದಾರೆ.

ಆರ್ ಸಿಬಿಗೆ ಮುಳ್ಳಾಗ್ತಾರಾ ಮಯಾಂಕ್?

ರಿಷಭ್ ಪಂತ್ 4 ಮ್ಯಾಚಲ್ಲಿ 130ರ ಸ್ಟ್ರೈಕ್​ ರೇಟ್ ​ನಲ್ಲಿ 103 ರನ್ಸ್ ಕಲೆ

ಸ್ಟಾರ್ ಆಟಗಾರರ ದಂಡೇ ಇದ್ರೂ ಪರ್ಫಾಮೆನ್ಸ್ ನಲ್ಲಿ ಸದ್ದು ಮಾಡ್ತಿಲ್ಲ

ಬೌಲಿಂಗ್ ನಲ್ಲಿಇಂಪ್ಯಾಕ್ಟ್ ಮಾಡ್ತಿರೋ ಬೌಲರ್ ಅಂದ್ರೆ ಮೊಹಮ್ಮದ್ ಶಮಿ

ಹೈದ್ರಾಬಾದ್ ವಿರುದ್ಧ ಬೌಂಡರಿ ಕೊಡದೆ ಕೇವಲ 9 ರನ್ಸ್ ನೀಡಿ 2 ವಿಕೆಟ್

ಫಸ್ಟ್ ಬಾಲಲ್ಲೇ 5 ಸಲ ವಿಕೆಟ್ ತೆಗೆದಿರೋ ಬೌಲರ್ ಶಮಿ ಮಾತ್ರನೇ

ಎಕಾನಮಿ ರೇಟ್ 6.25, ಬಾ ಲ್​ಗೆ 1 ರನ್ಸ್​ ನಂತೆ ಅಷ್ಟೇ ರನ್ಸ್ ಕೊಟ್ಟಿದ್ದಾರೆ

ಕೊಹ್ಲಿ ಮತ್ತು ಶಮಿ 12 ಟಿ-20 ಇನ್ನಿಂಗ್ಸ್‌ ಆಡಿದ್ದು ಐದು ಬಾರಿ ಔಟ್

ಪ್ರಿನ್ಸ್ ಯಾದವ್ ಮತ್ತು ದಿಗ್ವೇಶ್ ರಾಥಿ ಇಂಪ್ಯಾಕ್ಟ್ ಮಾಡಬಹುದು

ರಾಜಧಾನಿ ಎಕ್ಸ್​ಪ್ರೆಸ್ ಖ್ಯಾತಿಯ ಮಯಾಂಕ್ ಯಾದವ್ ಕಂ ಬ್ಯಾಕ್

ಆರ್​ಸಿಬಿ ವಿರುದ್ಧ ಆಡೋಕೆ ಫಿಟ್ & ಫೈನ್ ಎಂದಿರುವ ಟಾಮ್ ಮೂಡಿ

ಮಯಾಂಕ್ ಯಾದವ್ ಪ್ಲಸ್ ಪಾಯಿಂಟ್ ಅಂದ್ರೆ 150+ ಕಿ.ಮೀ ವೇಗದಲ್ಲಿ ಬೌಲಿಂಗ್

2024ರಲ್ಲಿ ಆರ್ ಸಿಬಿ ವಿರುದ್ಧ 4 ಓವರ್, 14 ರನ್ಸ್ ಹಾಗೇ 3 ವಿಕೆಟ್ ಬೇಟೆ

ಸದ್ಯ ಈ ಸೀಸನ್​ನಲ್ಲಿ 2 ಪಂದ್ಯ ಗೆದ್ದಿರೋ ಲಕ್ನೋ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು  ಆರ್​ಸಿಬಿ ಟೀಂ 3 ಪಂದ್ಯ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಪ್ಲೇಸ್​ನಲ್ಲಿದೆ. ಹಾಗೇ ಬೆಂಗಳೂರು ತಂಡ ಮುಂದಿನ ಸತತ ಮೂರು ಪಂದ್ಯಗಳನ್ನ  ಚಿನ್ನಸ್ವಾಮಿ ಮೈದಾನದಲ್ಲೇ ಆಡಲಿದೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯ.. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್  ತಂಡವನ್ನ ಏಪ್ರಿಲ್ 18 ರಂದು ಫೇಸ್ ಮಾಡಲಿದೆ. ಹಾಗೇ ಗುಜರಾತ್ ಟೈಟಾನ್ಸ್ ವಿರುದ್ಧ ಏಪ್ರಿಲ್ 24 ರಂದು ಕಣಕ್ಕಿಳಿಯಲಿದೆ. ಆ ನಂತ್ರ ಆರ್​ಸಿಬಿ ಬೆಂಗಳೂರು ಮೈದಾನದಲ್ಲಿ ಯಾವ ಪಂದ್ಯಗಳನ್ನ ಈ ಆಡಲ್ಲ. ಯಾಕಂದ್ರೆ ರಾಯ್ಪುರವನ್ನ ಎರಡನೇ ತವರು ಮೈದಾನ ಅಂತಾ ಘೋಷಣೆ ಮಾಡಿಕೊಂಡಿರೋದ್ರಿಂದ ಅಲ್ಲಿ ಉಳಿದ 2 ತವರು ಪಂದ್ಯಗಳನ್ನ ಆಡ್ತಾರೆ. ಹೀಗಾಗಿ ಚಿನ್ನಸ್ವಾಮಿಯಲ್ಲಿ ಉಳಿದಿರೋ ಮೂರೂ ಮ್ಯಾಚ್​ಗಳನ್ನ ಗೆಲ್ಲೋಕೇ ನೋಡ್ತಾ ಇರ್ತಾರೆ. ಲಕ್ನೋ ಇರೋ ಫಾರ್ಮ್ ನೋಡಿದ್ರೆ ಈ ಮ್ಯಾಚ್​ನಲ್ಲಿ ಆರ್​ಸಿಬಿ ಗೆದ್ದು ಬೀಗಬಹುದು.

Shantha Kumari