ಸೋಲೋದನ್ನೇ HABIT ಮಾಡ್ಕೊಂಡ KKR – ಅಯ್ಯರ್ ಜೊತೆ ಅದೃಷ್ಟವನ್ನೂ ಬಿಟ್ರಾ?
CSK ಅಸಲಿ ಖದರ್ ಶುರುವಾಯ್ತಾ?

ಒಂದ್ಕಡೆ ಸೋಲೋದನ್ನೇ ಹ್ಯಾಬಿಟ್ ಮಾಡ್ಕೊಂಡಿರೋ ಕೊಲ್ಕತ್ತಾ. ಇನ್ನೊಂದ್ಕಡೆ ಸೋಲಿನ ಸುಳಿಯಿಂದ ಎದ್ದು ಬ್ಯಾಕ್ ಟು ಬ್ಯಾಕ್ ಮ್ಯಾಚ್ ಗೆದ್ದ ಚೆನ್ನೈ. 19ನೇ ಸೀಸನ್ ಐಪಿಎಲ್ ಸ್ಟಾರ್ಟ್ ಆಗಿ 22 ಪಂದ್ಯಗಳು ಮುಗಿದಿವೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸೀಸನ್ನಲ್ಲಿ ಫಾರ್ ದಿ ಫಸ್ಟ್ ಟೈಂ 200ಕ್ಕಿಂತ ಕಡಿಮೆ ರನ್ಸ್ ಹೊಡೆದು ತಂಡವೊಂದು ಡಿಫೆನ್ಸ್ ಮಾಡಿಕೊಂಡಿರೋದು. ನಿನ್ನೆ ಮ್ಯಾಚಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 5 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ್ದ ಕೆಕೆಆರ್ ಒನ್ಸ್ ಅಗೇನ್ ಫೇಲ್ಯೂರ್ ಕಂಡಿದೆ. 7 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಚೆನ್ನೈ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದು ಮಿಂಚಿದ್ರು. ಈ ಮೂಲಕ ಚೆನ್ನೈ ಹ್ಯಾಟ್ರಿಕ್ ಸೋಲಿನ ಬಳಿಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಗೆದ್ದಿದೆ. ಅತ್ತ ಕೆಕೆಆರ್ ಈ ಸೀಸನ್ನಲ್ಲಿ ಇನ್ನೂ ಕೂಡ ಗೆಲುವಿನ ಖಾತೆಯನ್ನೇ ತೆರೆದಿಲ್ಲ.
ಗೆಲುವನ್ನೇ ಕಾಣ್ತಿಲ್ಲ ಕೆಕೆಆರ್!
ಚಾಂಪಿಯನ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ತಂಡದಿಂದ ರಿಲೀಸ್
ಅಜಿಂಕ್ಯ ರಹಾನೆ ನಾಯಕತ್ವ ಅಷ್ಟೊಂದು ಎಫೆಕ್ಟಿವ್ ಆಗಿಲ್ಲ
ರಿಂಕು ಸಿಂಗ್, ವರುಣ್, ನರೈನ್ ರಂಥ ಆಟಗಾರರಿಂದಲೂ ಫೇಲ್ಯೂರ್
25 ಕೋಟಿ ನೀಡಿದ್ದ ಕ್ಯಾಮರೂನ್ ಗ್ರೀನ್ 5 ಮ್ಯಾಚಲ್ಲಿ 66 ರನ್ಸ್ ಅಷ್ಟೇ
ಚೆನ್ನೈ ವಿರುದ್ಧದ ಪಂದ್ಯದಲ್ಲೂ ಚೇಸಿಂಗ್ ನಲ್ಲಿ ಕೈಹಿಡಿಯದ ಬ್ಯಾಟರ್ಸ್
ಬ್ಯಾಟಿಂಗ್ ಹಾಗೇ ಬೌಲಿಂಗ್ ನಲ್ಲಿ ಕಂಟ್ರೋಲ್ ಮಾಡಿದ ಚೆನ್ನೈ
ಐಪಿಎಲ್ ಚೆನ್ನೈ ಸತತ ಎರಡನೇ ಗೆಲುವು ಸಾಧಿಸಿತು. ಮೊದಲ ಮೂರು ಪಂದ್ಯಗಳಲ್ಲಿ ಸೋತ ನಂತರ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ವಿರುದ್ದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಚೆನ್ನೈ ತಂಡ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಏರಿದೆ. ಏತನ್ಮಧ್ಯೆ, ಕೆಕೆಆರ್ ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲು ಕಂಡಿದೆ. ರಹಾನೆ ನೇತೃತ್ವದ ಕೆಕೆಆರ್ ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ನಾಲ್ಕರಲ್ಲಿ ಸೋತಿದೆ. ಕೇವಲ ಒಂದು ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ನೋಡಿರಿ

