ಶಕ್ತಿ ಜಿಲ್ಲೆಯ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ – 14 ಕಾರ್ಮಿಕರು ಸಾ*ವು, ಹಲವರಿಗೆ ಗಾಯ

ಛತ್ತೀಸ್‌ಗಢ ಜಿಲ್ಲೆಯ ಶಕ್ತಿ ಜಿಲ್ಲೆಯ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಮಂಗಳವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದ್ದು, ಬಾಯ್ಲರ್ ಸ್ಫೋಟದಲ್ಲಿ 14 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಘಿತರೈನಲ್ಲಿರುವ ವೇದಾಂತ ವಿದ್ಯುತ್ ಸ್ಥಾವರದ ದಾಬ್ರಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಮಾಹಿತಿ ಪಡೆದ ತಕ್ಷಣ ಸ್ಥಳೀಯ ಆಡಳಿತ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದವು. ಗಾಯಾಳುಗಳನ್ನು ಚಿಕಿತ್ಸೆಗಾಗಿ ರಾಯ್‌ಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಕೆಲವು ಕಾರ್ಮಿಕರು ಇನ್ನೂ ಸ್ಥಾವರದೊಳಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಎಫೆಕ್ಟ್! – ಹಾರ್ಮುಜ್ ದಾಟಲು ಯತ್ನಿಸಿದ 2 ತೈಲ ಟ್ಯಾಂಕರ್ ತಡೆದ ಯುಎಸ್ ನೌಕಾಪಡೆ
ಮೃತರ ಕುಟುಂಬಗಳಿಗೆ ತಲಾ ₹35 ಲಕ್ಷ ಹಾಗು ಗಾಯಗೊಂಡ ಕಾರ್ಮಿಕರಿಗೆ ತಲಾ ₹15 ಲಕ್ಷ ಪರಿಹಾರ ನೀಡಲಾಗುವುದು ಎಂದು ವೇದಾಂತ ವಿದ್ಯುತ್ ಸ್ಥಾವರದ ಆಡಳಿತ ಮಂಡಳಿ ಘೋಷಿಸಿದೆ. ಗಾಯಗೊಂಡ ಕಾರ್ಮಿಕರ ವೈದ್ಯಕೀಯ ವೆಚ್ಚವನ್ನು ಆಡಳಿತ ಮಂಡಳಿ ಭರಿಸಲಿದೆ ಎಂದು ಹೇಳಿದೆ. ಇದಲ್ಲದೆ, ತೊಂದರೆಗೊಳಗಾದ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿಯೂ ಭರವಸೆ ನೀಡಿದೆ.
ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟವು ಕಾರ್ಮಿಕರಲ್ಲಿ ಭೀತಿಯನ್ನುಂಟುಮಾಡಿತು. ಎಲ್ಲ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಸ್ಥಾವರದ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳ ಮತ್ತು ಆಡಳಿತ ಅಧಿಕಾರಿಗಳು ತಕ್ಷಣ ಸ್ಥಳದಲ್ಲಿದ್ದರು. ಗಾಯಾಳು ಕಾರ್ಮಿಕರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಯ್ಲರ್ ಸ್ಫೋಟದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ತನಿಖೆಯ ನಂತರ ಸ್ಫೋಟದ ಕಾರಣವನ್ನು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೇದಾಂತ ವಿದ್ಯುತ್ ಸ್ಥಾವರ ಅಪಘಾತದ ನಂತರ ಪ್ರದೇಶದ ಕಾಂಗ್ರೆಸ್ ಶಾಸಕರು ಸ್ಥಾವರ ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಕಾಂಗ್ರೆಸ್ ಶಾಸಕ ರಾಮ್‌ಕುಮಾರ್ ಯಾದವ್ ಸ್ಥಾವರದ ಹೊರಗೆ ಪ್ರತಿಭಟನೆ ನಡೆಸಿದರು. ನಿರ್ವಹಣೆಯ ಹೆಸರಿನಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಶಾಸಕರು ದೂರಿದ್ದಾರೆ.

ನೋಡಿರಿ

