LSG ಪಂದ್ಯಕ್ಕಿಲ್ವಾ ಕಿಂಗ್ ಕೊಹ್ಲಿ? – ಸುಯಾಶ್ & ರಸಿಕ್ ಫಾರ್ಮುಲಾ ಸಕ್ಸಸ್
RCB ಪ್ಲೇಯಿಂಗ್ 11 ಹೀಗಿರುತ್ತಾ?

2025 ಹಾಗೇ 2026ರ ಸೀಸನ್ ಆರ್ಸಿಬಿಗೆ ಒಂಥರಾ ಗೋಲ್ಡನ್ ಎರಾ.. ಮುಟ್ಟಿದ್ದೆಲ್ಲಾ ಚಿನ್ನ ಅಂತಾರಲ್ಲ ಹಾಗೇ. ಹಾಗಂತ ವಿಕ್ಟರಿಗಳೇನು ಈಸಿಯಾಗಿ ಸಿಗ್ತಿಲ್ಲ. ಬೆಂಗಳೂರು ಪ್ಲೇಯರ್ಗಳು ಧಮಾಕೇಧಾರ್ ಪರ್ಫಾಮೆನ್ಸ್ ಕೊಡ್ತಾನೇ ಗೆದ್ದಿರೋದು. ಡಾಮಿನೇಟಿಂಗ್ ಮಾಡಿಕೊಂಡೇ ಮುನ್ನುಗ್ತಿರೋದು. ರಾಜಸ್ಥಾನ ವಿರುದ್ಧ ಸೋತ್ರು ದಟ್ಸ್ ಓಕೆ.. ಅಂಥಾದ್ದೊಂದು ಡೌನ್ಫಾಲ್ ಆರಂಭದಲ್ಲೇ ಆಗಿದ್ದು ಒಳ್ಳೇದೇ ಆಗಿದೆ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಚೇಂಜಸ್ ಕಂಡಿರೋದು. ಮುಂಬೈ ವಿರುದ್ಧ ಹೊಸ ಫಾರ್ಮುಲಾ ಪ್ರಯೋಗ ಮಾಡಿ ಗೆದ್ದಿರೋ ಬೆಂಗಳೂರು ಈಗ ಲಕ್ನೋ ವಿರುದ್ಧವೂ ಅದೇ ಫಾರ್ಮುಲಾ ಕಂಟಿನ್ಯೂ ಮಾಡಬಹುದು.
ಇದನ್ನೂ ಓದಿ : RCBಯಲ್ಲಿ ಬೆಂಕಿ ಬ್ಯಾಟಿಂಗ್ – 200+ ಟಾರ್ಗೆಟ್ ಲೆಕ್ಕಕ್ಕೇ ಇಲ್ವಾ?
ಮುಂಬೈ ವಿರುದ್ಧ ಗೆದ್ದು ಬರ್ತಿರೋ ಬೆಂಗಳೂರು ಹಾಗೇ ಗುಜರಾತ್ ವಿರುದ್ಧ ಸೋತು ಬರ್ತಿರೋ ಲಕ್ನೋ ತಂಡಗಳು ಈಗ ತಮ್ಮ ಐದನೇ ಪಂದ್ಯಕ್ಕಾಗಿ ಚಿನ್ನಸ್ವಾಮಿಯಲ್ಲಿ ಮುಖಾಮುಖಿ ಆಗ್ತಾರೆ. ಈ ಸೀಸನ್ನಲ್ಲೇ ಕಳೆದ ಎರಡು ಪಂದ್ಯಗಳಲ್ಲೂ ಚಿನ್ನಸ್ವಾಮಿ ಮೈದಾನದಲ್ಲಿ 400ಕ್ಕೂ ಹೆಚ್ಚು ರನ್ಸ್ ಬಂದಿದೆ. ಅಂದ್ರೆ ಎಲ್ಲಾ ತಂಡಗಳು 200+ ರನ್ಸ್ ಸ್ಕೋರ್ ಮಾಡಿವೆ. ಹೀಗಾಗಿ ಈ ಮ್ಯಾಚ್ ಕೂಡ ಹೈಸ್ಕೋರ್ ನಿರೀಕ್ಷೆ ಮಾಡ್ಬೋದು. ಬಟ್ ಆರ್ಸಿಬಿ ಫ್ಯಾನ್ಸ್ಗೆ ಒಂದು ಬೇಸರದ ವಿಚಾರ ಅಂದ್ರೆ ಕಿಂಗ್ ಕೊಹ್ಲಿ ಈ ಪಂದ್ಯ ಮಿಸ್ ಮಾಡಿಕೊಳ್ತಾರಾ ಅನ್ನೋದು.
ಲಕ್ನೋ ವಿರುದ್ಧದ ಪಂದ್ಯ ಆಡಲ್ವಾ ಕಿಂಗ್ ಕೊಹ್ಲಿ?
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ ಇದು. ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದ ಎಂಐ ವಿರುದ್ಧದ ಮ್ಯಾಚಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಸಾಕಷ್ಟು ಸ್ಟ್ರಗಲ್ ಮಾಡ್ತಿದ್ರು. 50 ರನ್ಸ್ ಕಂಪ್ಲೀಟ್ ಮಾಡೋಕೆ 38 ಬಾಲ್ ಫೇಸ್ ಮಾಡಿದ್ರು. ಹಾಗೇ ಫೀಲ್ಡಿಂಗ್ ಕೂಡ ಮಾಡಿರಲಿಲ್ಲ. ಪಂದ್ಯದ ವೇಳೆ ಹಿಮ್ಮಡಿ ನೋವಿಗೆ ತುತ್ತಾಗಿದ್ದ ಕೊಹ್ಲಿ ಬೌಲಿಂಗ್ ವೇಳೆ ಕಣಕ್ಕಿಳಿದಿರಲಿಲ್ಲ. ಪಂದ್ಯದ ಬಳಿಕ ಮಾತನಾಡಿದ್ದ ನಾಯಕ ರಜತ್ ಪಾಟಿದಾರ್, ವಿರಾಟ್ ಕೊಹ್ಲಿ ಇಂಜುರಿ ಬಗ್ಗೆ ಅಪ್ಡೇಟ್ ಕೊಟ್ಟಿದ್ರು. ಗಾಯ ತುಂಬಾ ಗಂಭೀರವಾಗಿಲ್ಲ ಅಂದಿದ್ರು. ಸೋ ಅಲ್ಲಿಗೆ ಕೊಹ್ಲಿ ಲಕ್ನೋ ವಿರುದ್ಧದ ಮ್ಯಾಚ್ ಆಡೋದು ಪಕ್ಕಾ. ಒಂದ್ವೇಳೆ ಕಂಪ್ಲೀಟ್ ರಿಕವರ್ ಆಗಿಲ್ಲ ಅಂದ್ರೆ ಬ್ಯಾಟಿಂಗ್ ಮಾತ್ರ ಮಾಡಿಸಿ ಆ ನಂತ್ರ ಫೀಲ್ಡಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳೋ ಚಾನ್ಸಸ್ ಇರುತ್ತೆ. ಹೀಗಾಗಿ ಬ್ಯಾಟಿಂಗ್ ಲೈನಪ್ನಲ್ಲಿ ಯಾವುದೇ ಚೇಂಜಸ್ ಇರಲ್ಲ. ಬಟ್ ವಾಟ್ ಅಬೌಟ್ ಬೌಲಿಂಗ್ ಸ್ಕ್ವಾಡ್ ಅಂದ್ರೆ ಬಹುಶಃ ವಿನ್ನಿಂಗ್ ಸ್ಕ್ವಾಡ್ ಕಂಟಿನ್ಯೂ ಮಾಡ್ತಾರೆ. ಯಾಕಂದ್ರೆ ಕಳೆದ ಪಂದ್ಯದ ಲಾಜಿಕ್ ವರ್ಕೌಟ್ ಆಗಿದೆ.
ಸುಯಾಶ್ ಮತ್ತು ರಸಿಕ್ ಕಾಂಬಿನೇಷನ್ ವರ್ಕೌಟ್!
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ಲೇಯಿಂಗ್ 11ನಲ್ಲಿ ಎರಡು ಬದಲಾವಣೆ ಮಾಡಿತ್ತು. ಆ ಬದಲಾವಣೆ ಫಾರ್ಮುಲಾ ಸಕ್ಸಸ್ ಕೂಡ ಆಗಿತ್ತು. ಅದೇನಂದ್ರೆ ರಾಜಸ್ಥಾನ ಪಂದ್ಯಕ್ಕೆ ಜೋಶ್ ಹೇಜಲ್ವುಡ್ರನ್ನ ಕರೆ ತಂದು ಜೇಕಬ್ ಡಫಿಯನ್ನ ಡ್ರಾಪ್ ಮಾಡಿದ್ರು. ಆ ಮ್ಯಾಚಲ್ಲಿ ಹೇಜಲ್ವುಡ್ 4 ಓವರ್ಗಳಲ್ಲಿ 44 ರನ್ಸ್ ನೀಡಿ 2 ವಿಕೆಟ್ಸ್ ತಗೊಂಡಿದ್ರು. ಆದ್ರೆ ಮುಂಬೈ ವಿರುದ್ಧದ ಮ್ಯಾಚ್ಗೆ ಮತ್ತೆ ಜೋಶ್ ಕೈಬಿಟ್ಟು ಡಫಿಯನ್ನ ಒಳಗೆ ತಗೊಂಡಿದ್ರು. ಈ ಮ್ಯಾಚಲ್ಲಿ ಡಫಿ ಎದ್ವಾತದ್ವಾ ಹೊಡೆಸಿಕೊಳ್ತಾರೆ. 14.50 ಎಕಾನಮಿಯಲ್ಲಿ 58 ರನ್ಸ್ ಕೊಟ್ರು. 1 ವಿಕೆಟ್ ತಗೊಂಡಿದ್ರು. ಬಟ್ ಡಫಿ ಮೊದಲ ಎರಡು ಪಂದ್ಯಗಳಲ್ಲಿ ಓಪನರ್ಗಳನ್ನ ಪೆವಿಲಿಯನ್ಗೆ ಅಟ್ಟಿದ್ರು. ಸೋ ಡಫಿ ಮೇಲೆ ಮತ್ತೆ ನಂಬಿಕೆ ಇಡ್ಬೋದು. ಹಾಗೇ ಆರ್ಸಿಬಿ ಮಾಡಿದ್ದ ಅತಿದೊಡ್ಡ ಬದಲಾವಣೆ ಅಂದ್ರೆ ಅಭಿನಂದನ್ ಸಿಂಗ್ರನ್ನ ಹೊರಗಿಟ್ಟಿದ್ದು. ಮೊದಲ ಮೂರು ಮ್ಯಾಚ್ಗಳಲ್ಲಿ ತುಂಬಾನೇ ಎಕ್ಸ್ಪೆನ್ಸಿವ್ ಆಗಿದ್ದ ಅಭಿನಂದನ್ ಸಿಂಗ್ರನ್ನ ಹೊರಗಿಟ್ಟು ಸುಯಾಶ್ ಶರ್ಮಾರನ್ನ ಒಳಗೆ ತರ್ತಾರೆ. ಹಾಗೇ ರಸಿಕ್ ಸಲಾಂದಾರ್ರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ತಾರೆ. ಈ ಚೇಂಜಸ್ ಚೆನ್ನಾಗೇ ವರ್ಕ್ ಆಗಿತ್ತು. ಇಬ್ರೂ ಕಡೆಯಿಂದಲೂ ಒಳ್ಳೆ ಪ್ರದರ್ಶನ ಬಂದಿತ್ತು. ಬಟ್ ರಸಿಕ್ ದಾರ್ ಲೆಫ್ಟ್ ಲೆಗ್ ಇಂಜುರಿ ಕಾರಣಕ್ಕೆ 4 ಓವರ್ ಬೌಲಿಂಗ್ ಕಂಪ್ಲೀಟ್ ಮಾಡೋಕೆ ಸಾಧ್ಯ ಆಗಿರಲಿಲ್ಲ. ಬಟ್ ಈಗ ರಿಕವರ್ ಆಗಿ ಲಕ್ನೋ ವಿರುದ್ಧ ಆಡಿದ್ರೆ ಬೌಲಿಂಗ್ನಲ್ಲಿ ಒಳ್ಳೆ ಪ್ರದರ್ಶನ ನಿರೀಕ್ಷೆ ಮಾಡ್ಬೋದು.
ಲಕ್ನೋ ಬೇಟೆಗೆ ಆರ್ ಸಿಬಿ ಪ್ಲೇಯಿಂಗ್ 11
ಫಿಲ್ ಸಾಲ್ಟ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ರೊಮ್ಯಾರಿಯೋ ಶೆಫರ್ಡ್
ಕೃನಾಲ್ ಪಾಂಡ್ಯ
ಭುನವೇಶ್ವರ್ ಕುಮಾರ್
ಜೇಕಬ್ ಡಫಿ
ಸುಯಾಶ್ ಶರ್ಮಾ
ರಸಿಕ್ ಸಲಾಂ ದಾರ್
ಪಂದ್ಯದ ಬಗ್ಗೆ ನೋಡೋದಾದ್ರೆ ಐಪಿಎಲ್ನಲ್ಲಿ ಎರಡೂ ತಂಡಗಳು ಆರು ಬಾರಿ ಮುಖಾಮುಖಿಯಾಗಿದ್ದು, ಆ ಪೈಕಿ ನಾಲ್ಕು ಬಾರಿ ರಾಯಲ್ ಚಾಲೆಂಜರ್ಸ್ ಗೆದ್ದಿದೆ. 2 ಸಲ ಲಕ್ನೋ ಗೆದ್ದಿದೆ. ಈ ಸಲ ಬೆಂಗಳೂರು ಮತ್ತೊಂದು ಮ್ಯಾಚ್ ಗೆದ್ದು ಮತ್ತೆ ಡಾಮಿನೇಟ್ ಮಾಡೋಕೆ ಕಾಯ್ತಾ ಇದೆ.

ನೋಡಿರಿ

