ಹಿಂಗೆ ಬಾಲ್​ ಗೆ ಹಂಗೆ ಹೋದ ರಾಜಸ್ಥಾನ – ಫಸ್ಟ್ ಓವರ್ ನಲ್ಲೇ RR ಗರ್ವಭಂಗ
ಡೆಬ್ಯು ಬೌಲರ್ ಗಳಲ್ಲೇ ಗೆದ್ದ SRH

ಹಿಂಗೆ ಬಾಲ್​ ಗೆ ಹಂಗೆ ಹೋದ ರಾಜಸ್ಥಾನ – ಫಸ್ಟ್ ಓವರ್ ನಲ್ಲೇ RR ಗರ್ವಭಂಗಡೆಬ್ಯು ಬೌಲರ್ ಗಳಲ್ಲೇ ಗೆದ್ದ SRH

ಹೈದ್ರಾಬಾದ್​ನಲ್ಲಿ ಬೆಂಕಿ ಬ್ಯಾಟಿಂಗ್ ಲೈನಪ್.. ರಾಜಸ್ಥಾನ ಪರ ಬಿರುಗಾಳಿ ಬ್ಯಾಟರ್ಸ್.. ಈ ಬೆಂಕಿ ಬಿರುಗಾಳಿ ಸೇರಿದ್ರೆ ಐಪಿಎಲ್​ನಲ್ಲಿ ಮತ್ತೊಂದು ಹೈಸ್ಕೋರ್ ಪಕ್ಕಾ ಅಂತಾ ಫ್ಯಾನ್ಸ್ ಎಲ್ಲಾ ಕಾಯ್ತಾ ಇದ್ರು. ಆದ್ರೆ ಅಲ್ಲಿ ಆಕ್ಷನ್​ನಲ್ಲಿ ಬಂದದ್ದು ಬ್ಯಾಟರ್ಸ್ ಅಲ್ಲ ಬೌಲರ್ಸ್.. ಫಸ್ಟ್ ಓವರ್​ನಿಂದಲೇ ವಿಕೆಟ್ಸ್ ಹೈಡ್ರಾಮಾ.

ಇದನ್ನೂ ಓದಿ  : RCB ಪವರ್ ಹಿಟ್ಟರ್ ಪಾಟಿದಾರ್ – ಸ್ಪಿನ್ನರ್ ಗಳನ್ನು DESTROY ಮಾಡಿದ್ರಾ?

2026ರ ಐಪಿಎಲ್​ನಲ್ಲಿ ನಾಲ್ಕಕ್ಕೇ ನಾಲ್ಕು ಪಂದ್ಯ ಗೆದ್ದು ಟಾಪ್ ಆಫ್ ದಿ ಟೇಬಲ್​ನಲ್ಲಿದ್ದ ರಾಜಸ್ಥಾನ ರಾಯಲ್ಸ್​ನ ಗರ್ವಭಂಗವಾಗಿದೆ. ಹೈದ್ರಾಬಾದ್ ಬೌಲರ್​​ಗಳ ಆರ್ಭಟಕ್ಕೆ ಈ ಸೀಸನ್​ನಲ್ಲಿ ಮೊದಲ ಸೋಲು ಕಂಡಿದ್ದಾರೆ. ಹೈದ್ರಾಬಾದ್​ನಲ್ಲಿ ನಡೆದ ಈ ಮ್ಯಾಚಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಎಸ್​​ಆರ್​ಹೆಚ್ ತಂಡ 6 ವಿಕೆಟ್ ನಷ್ಟಕ್ಕೆ 216 ರನ್​ಗಳನ್ನ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ್ದ ರಾಜಸ್ಥಾನ ಫಸ್ಟ್ ಓವರ್​ನಿಂದಲೇ ಚೇಸ್​​ ರೇಸ್​ನಿಂದಲೇ ಹೊರ ಬಿದ್ದಿತ್ತು. ಯಾಕಂದ್ರೆ ಹೈದ್ರಾಬಾದ್ ಪರ ಡೆಬ್ಯೂ ಬೌಲರ್​​ಗಳು ಚರಿತ್ರೆಯನ್ನೇ ಸೃಷ್ಟಿಸಿ ಆರ್​ಆರ್​ ಬ್ಯಾಟರ್​ಗಳನ್ನ ಮಕಾಡೆ ಮಲಗಿಸಿದ್ರು. ಹೀಗಾಗಿ 19 ಓವರ್​ಗಳಲ್ಲಿ 159 ರನ್​ಗಳಿಗೆ ಆಲೌಟ್ ಆಗೋ ಮೂಲಕ ಆರ್​ಆರ್ 57 ರನ್​ಗಳಿಂದ ಸೋಲೊಪ್ಪಿಕೊಳ್ತು.

ರಾಜಸ್ಥಾನ ಅಜೇಯಯಾತ್ರೆಗೆ ಬ್ರೇಕ್!

ಫಸ್ಟ್ ಬಾಲ್ ನಲ್ಲೇ ಅಭಿಷೇಕ್ ಔಟ್.. ಇಶಾನ್ ಕಿಶನ್ ಜವಾಬ್ದಾರಿ

ಮೊದಲ ಇನ್ನಿಂಗ್ಸ್ ನಲ್ಲಿ 216 ರನ್ ಗಳ ಟಾರ್ಗೆಟ್ ಸೆಟ್

ರಾಜಸ್ಥಾನ ಪರ ಸೂರ್ಯವಂಶಿ ಫಸ್ಟ್ ಬಾಲ್ ನಲ್ಲೇ ಔಟ್

ಟಾಪ್ ಆರ್ಡರ್ ನ ಮೂವರು ಬ್ಯಾಟರ್ಸ್ 0 ಗೆ ಔಟ್

ರಾಜಸ್ಥಾನದ ಮಾನ ಉಳಿಸಿದ ಫೆರೇರಾ ಮತ್ತು ಜಡ್ಡು ಜೊತೆಯಾಟ

ಹೈದ್ರಾಬಾದ್ ಪರ ಪ್ರಫುಲ್ ಮತ್ತು ಹುಸೇನ್ ಬೌಲಿಂಗ್ ಬೊಂಬಾಟ್

Shantha Kumari