IPLಗೆ ಡ್ರೀಮ್ ಎಂಟ್ರಿ ಕೊಟ್ಟ ಪ್ರಫುಲ್ ಹಿಂಗೆ – SRH ಪರ ಇತಿಹಾಸ ಬರೆದ ಈ ಹುಡುಗನ ಹಿಸ್ಟರಿ ಏನು?

SRH Vs RR ಮ್ಯಾಚ್ ನೋಡಿ ಇಡೀ ಕ್ರಿಕೆಟ್ ಲೋಕ ಒಂದು ಕ್ಷಣ ಶಾಕ್ ಆಗಿದೆ. ಹಿಂದೆಂದೂ ಆಗದ ದಾಖಲೆಗೆ ಈ ಪಂದ್ಯ ಸಾಕ್ಷಿ ಆಗಿತ್ತು. ಯಾಕಂದ್ರೆ ಡೆಬ್ಯೂ ಪಂದ್ಯದಲ್ಲಿ ಪ್ರಫುಲ್ ಹಿಂಗೆ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಹಾಗಿದ್ರೆ ಮೊದಲ ಪಂದ್ಯದ ಮೊದಲ ಓವರ್ನಲ್ಲಿ 3 ವಿಕೆಟ್ ಕಿತ್ತು ದಾಖಲೆ ಬರೆದೆ ಈ ಆಟಗಾರರು ಯಾರು? ಇವರ ಗುರುಗಳು ಯಾರು? ಹೇಗೆ ಎಸ್ಆರ್ಹೆಚ್ ಟೀಂಗೆ ಬಂದ್ರೂ? ಈ ಹಿಂದೆ ಯಾವೆಲ್ಲಾ ಪಂದ್ಯ ಆಡಿದ್ದಾರೆ ಅನ್ನೋದ್ದನ್ನ ನೋಡೋಣ.
ಪ್ರಫುಲ್ ಹಿಂಗೆ..ಸನ್ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಮಾಡಿ ಬೌಲಿಂಗ್ ಮಾಡೋ ತನಕ ಇವರ ಹೆಸರನ್ನ ಹೆಸರನ್ನ ಯಾರು ಕೇಳಿರಲಿಲ್ಲ. ಯಾವಾಗ ಎಸ್ಆರ್ಹೆಚ್ ಬೌಲಿಂಗ್ ಶುರು ಮಾಡ್ತಾ, ಒಂದೇ ಒವರ್ನಲ್ಲಿ ಪ್ರಫುಲ್ ಹಿಂಗೆ ಇಡೀ ಜಗತ್ತನ್ನ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ವಿಸ್ಮಯ ಸೃಷ್ಟಿಸಿದ ಪ್ರಫುಲ್ ಒಂದೇ ರಾತ್ರಿಯಲ್ಲೇ ಭಾರತ ಕ್ರಿಕೆಟ್ನ ಮನೆಮಾತಾಗಿದ್ದಾರೆ.
ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಪ್ರಫುಲ್ ಹಿಂಗೆ ಮೊದಲ ಎಸೆತದಲ್ಲೇ ವೈಭವ್ ಸೂರ್ಯವಂಶಿ ಅವರನ್ನು ಗೋಲ್ಡನ್ ಡಕೌಟ್ ಮಾಡಿದರು. ನಂತರ ಪ್ರಫುಲ್ ಅದೇ ಓವರ್ನ ನಾಲ್ಕನೇ ಎಸೆತದಲ್ಲಿ ಧ್ರುವ್ ಜುರೆಲ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಓವರ್ನ ಕೊನೆಯ ಎಸೆತದಲ್ಲಿ ಲುಹಾನ್ ಡ್ರೆ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು. ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಪ್ರಫುಲ್ ಮೊದಲ ಓವರ್ನಲ್ಲಿ ಕೇವಲ 1 ರನ್ ನೀಡಿ 3 ವಿಕೆಟ್ ಪಡೆದು ದಾಖಲೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಎಸ್ಆರ್ಹೆಚ್ ಪರ 4 ವಿಕೆಟ್ ಕಿತ್ತು ದಾಖಲೆ ಬರೆದ್ರು.
ಇದನ್ನೂ ಓದಿ: ಮೊದಲ ಗೆಲುವಿನ ಉತ್ಸಾಹದಲ್ಲಿದ್ದ ಚೆನ್ನೈಗೆ ಕೆಕೆಆರ್ ಸವಾಲ್ – ಸೋಲಿನ ಸುಳಿಯಿಂದ ಹೊರಬರುತ್ತಾ ನೈಟ್ ರೈಡರ್ಸ್
ದೇಶೀಯ ಕ್ರಿಕೆಟ್ನಲ್ಲಿ ವಿದರ್ಭ ಪರ ಆಡುವ ಪ್ರಫುಲ್ ನಾಗ್ಪುರದವರು. ಅವರ ತಂದೆ ವಿದ್ಯುತ್ ಮಂಡಳಿಯ ಉದ್ಯೋಗಿಯಾಗಿದ್ದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಆರಂಭದಲ್ಲಿ ಪ್ರಫುಲ್ ಅವರ ಕ್ರಿಕೆಟ್ ಆಡುವ ಬಯಕೆಗೆ ಅವರ ತಂದೆಯಿಂದ ಯಾವುದೇ ಸಹಕಾರ ಸಿಕ್ಕಿರಲಿಲ್ಲ. ಆದರೆ ಬೇಸಿಗೆ ಶಿಬಿರದಲ್ಲಿ ಮಗನ ಪ್ರತಿಭೆಯನ್ನು ನೋಡಿದ ನಂತರ, ಅವರು ತಮ್ಮ ಮನಸ್ಸನ್ನು ಬದಲಾಯಿಸಿದರು. ಇದಾದ ಬಳಿಕ ಪ್ರಫುಲ್ ಅವರ ಬದುಕು ಬದಲಿಸುವಲ್ಲಿ ವಿದರ್ಭ ಅಕಾಡೆಮಿ ಮತ್ತು ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖ ಪಾತ್ರವಹಿಸಿದವು.
2014 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಪ್ರಫುಲ್ ಅಂದಿನಿಂದ ತಂಡದ ಭಾಗವಾಗಿದ್ದಾರೆ. ಅವರು ಇಲ್ಲಿಯವರೆಗೆ 10 ಪಂದ್ಯಗಳಲ್ಲಿ 27 ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು 6 ಲಿಸ್ಟ್ ಎ ಪಂದ್ಯಗಳಲ್ಲಿ 5 ವಿಕೆಟ್ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಐಪಿಎಲ್ಗೆ ಪಾದಾರ್ಪಣೆ ಮಾಡುವ ಮೊದಲು, ಅವರು ವೃತ್ತಿಪರ ಮಟ್ಟದಲ್ಲಿ ಯಾವುದೇ ಟಿ20 ಪಂದ್ಯಗಳನ್ನು ಆಡಿರಲಿಲ್ಲ. ಹಾಗೆಯೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಭಾಗವಹಿಸಿರಲಿಲ್ಲ. ಆದಾಗ್ಯೂ, ರಣಜಿ ಟ್ರೋಫಿಯಲ್ಲಿ ಅವರ ಪ್ರದರ್ಶನವನ್ನು ನೋಡಿದ ನಂತರ ವಿದರ್ಭದವರೇ ಆಗಿರುವ ಎಸ್ಆರ್ಎಚ್ ಬೌಲಿಂಗ್ ಕೋಚ್ ವರುಣ್ ಆರನ್, ಪ್ರಫುಲ್ ಅವರನ್ನು ಟ್ರಯಲ್ಸ್ಗೆ ಆಹ್ವಾನಿಸಿದರು. ಟ್ರಯಲ್ಸ್ನಲ್ಲಿ ಪ್ರಫುಲ್ ಅವರ ಪ್ರತಿಭೆಗೆ ಮರುಳಾಗಿದ್ದ ಸನ್ರೈಸರ್ಸ್ ಆಡಳಿತ ಮಂಡಳಿ ಮಿನಿ ಹರಾಜಿನಲ್ಲಿ ಅವರನ್ನು 30 ಲಕ್ಷ ರೂ ಮೂಲ ಬೆಲೆಗೆ ಖರೀದಿ ಮಾಡಿತ್ತು. ಈ ಪಂದ್ಯದಲ್ಲಿ ಹೈದರಾಬಾದ್ ತಂಡವು ಅನುಭವಿ ವೇಗಿಗಳಾದ ಜಯದೇವ್ ಮತ್ತು ಹರ್ಷಲ್ ಪಟೇಲ್ ಅವರನ್ನು ಕೈಬಿಡುವ ಮೂಲಕ ಪ್ರಫುಲ್ಗೆ ಅವಕಾಶ ಮಾಡಿಕೊಡಲಾಗಿತ್ತು. ಹೈದರಾಬಾದ್ ತಂಡ ತೋರಿಸಿದ ನಂಬಿಕೆಯನ್ನು, ವಿಶ್ವಾಸವನ್ನು ಪ್ರಫುಲ್ ಅವರು ಉಳಿಸಿಕೊಂಡಿದ್ದಾರೆ
ಹೇಳಿದ್ದಂತೆ ಮಾಡಿದ ಪ್ರಫುಲ್
ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಪ್ರಫುಲ್ ಹೇಳಿದ್ದಂತೆ ಮಾಡಿದ್ದಾರೆ. ಈ ಹಿಂಗೆ ಒಂದು ವರ್ಷದ ಹಿಂದೆಯೇ ನೋಟ್ನಲ್ಲಿ ಬರೆದಿಟ್ಟಿದ್ರಂತೆ. ಏನಪ್ಪ ಅಂದ್ರೆ ನಾನು ಐಪಿಎಲ್ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯ ಮೊದಲ ಓವರ್ನಲ್ಲೇ 3ರಿಂದ 5 ವಿಕೆಟ್ ತಗೀತಿನಿ ಅಂತ. ಅದರಂತೆ ಮಾಡಿದ್ದಾರೆ. ಜೊತೆಗೆ ಈ ಮ್ಯಾಚ್ಗೂ ಹಿಂದೆ ನನಗೆ ಅವಕಾಶ ಸಿಕ್ಕರೆ ಆರ್ಆರ್ ವಿರುದ್ಧ, ನಾನು ವೈಭವ್ ಸೂರ್ಯವಂಶಿಯನ್ನ ಬೌನ್ಸರ್ ಹಾಕಿ ಮೊದಲ ಎಸೆತದಲ್ಲೇ ಔಟ್ ಮಾಡ್ತೀನಿ ಅಂತ ಹೇಳಿದ್ರಂತೆ. ಅದರಂತೆ ಸೂರ್ಯವಂಶಿಯ ವಿಕೆಟ್ ಪಡೆದಿದ್ದಾರೆ. ಬುಮ್ರಾ, ಭುವನೇಶ್ವರ್ ಕುಮಾರ್ರಂತಹ ಸ್ಟಾರ್ ಬೌಲರ್ಗಳಿಗೆ ಮಣ್ಣು ಮುಕ್ಕಿಸಿರೋ 15 ವರ್ಷದ ವೈಭವ್ ಪ್ರಫುಲ್ ಬೌಲಿಂಗ್ನಲ್ಲಿ ಡಕೌಟ್ ಆಗಿದ್ದು ನೋಡಿ ಎಲ್ಲರು ಶಾಕ್ ಆಗಿದ್ದಾರೆ.

ನೋಡಿರಿ

