ಜಯಂತ್‌ಗೆ ಚಿನ್ನುಮರಿಯಿಂದ ತಿರುಗೇಟು – ಜಾನು ರಿವೇಂಜ್‌ಗೆ ಸೈಕೋ ಪತಿ ಲೆಕ್ಕ ಚುಕ್ತಾ..!

ಚಿನ್ನುಮರಿ ನಿಜಕ್ಕೂ ಬೆಂಕಿಮರಿಯಾಗಿದ್ದಾಳೆ. ತಾನು ನೊಂದುಕೊಂಡಿದ್ದ ಪ್ರತಿಕ್ಷಣಕ್ಕೂ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅದು ಕೂಡಾ ಸೈಕೋ ಅಂತಾ ಗೊತ್ತಿದ್ದರೂ ಜಯಂತ್‌ನನ್ನು ಎದುರು ಹಾಕಿಕೊಂಡಿದ್ದಾಳೆ. ಮೊದಲ ರಾತ್ರಿಯಿಂದ ಹಿಡಿದು ತಾನು ಕಳೆದ ಪ್ರತಿಯೊಂದು ಗಾಬರಿ ಕ್ಷಣಗಳನ್ನು ಜಯಂತ್‌ಗೆ ತಿರುಗಿಸಿಕೊಟ್ಟಿದ್ದಾಳೆ ಚಿನ್ನುಮರಿ. ಈಗೇನಿದ್ದರೂ ಜಾನು ಕೊಡುತ್ತಾ ಹೋಗುವುದು. ಜಯಂತ್ ವಿಲ ವಿಲ ಒದ್ದಾಡುತ್ತಾ ಹೋಗುವುದು.
ಇದನ್ನೂ ಓದಿ:ಅವರಿಂದ ನನಗೆ ಸಮಸ್ಯೆ ಎದುರಾಯಿತು.. ಜೀ ಕನ್ನಡದಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ರಕ್ಷಿತಾ ಪ್ರೇಮ್!
ಸೇಡು ಅಂದೆ ಹೀಗಿರಬೇಕು. ಚಿನ್ನುಮರಿಯನ್ನು ಪ್ರೀತಿಯ ಹೆಸರಲ್ಲಿ ಮನೆಯಲ್ಲಿ ಕೊಟ್ಟ ಮಾನಸಿಕ ಹಿಂಸೆಗೆ ಜಯಂತ್ ಲೆಕ್ಕ ಚುಕ್ತಾ ಆಗ್ತಿದೆ. ಸ್ವತಃ ಜಯಂತ್‌ನ ಚಿನ್ನುಮರಿಯೇ ಲೆಕ್ಕ ಚುಕ್ತಾ ಮಾಡ್ತಾ ಇದ್ದಾಳೆ. ಜಾನು ಈಗ ಸಂಪೂರ್ಣ ಬದಲಾಗಿದ್ದಾಳೆ. ಎಲ್ಲಿಯವರೆಗೆ ಅಂದರೆ, ಮನೆಗೆ ಬಂದ ದಿನ ಜಯಂತ್ ಕಣ್ಣಿಗೆ ನನ್ನ ಪ್ರೀತಿಯ ಚಿನ್ನುಮರಿ ಸಿಕ್ಕಿದಳು ಅನ್ನೋ ಹಾಗೆ ನಾಟಕವಾಡಿದ ಜಾನು, ಅದೇ ದಿನ ರಾತ್ರಿಯೇ ಜಯಂತ್ ವಿಲ ವಿಲ ಒದ್ದಾಡುವ ಹಾಗೆ ಮಾಡಿದ್ದಾಳೆ. ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರು ಇಷ್ಟು ದಿನ ಇದೇ ಕ್ಷಣಕ್ಕಾಗಿ ಕಾಯುತ್ತಿದ್ದರು.
ಜಿರಳೆ ಸೇರಿಸಿದ ಹಾಲನ್ನು ಜಯಂತ್‌ಗೆ ಕುಡಿಸುವ ಮೂಲಲ ಜಾನು ತಿರುಗೇಟು ನೀಡಿದ್ದಾಳೆ. ಈ ಹಿಂದಿನ ಜಾನು ನಾನಲ್ಲ. ನೀವು ಹೇಳಿದಂತೆ ಕೇಳಿಕೊಂಡು ಇರೋ ಜಾನು ನಾನಲ್ಲ. ಇನ್ಮುಂದೆ ನಾನು ಹೇಳಿದಂತೆಯೇ ನೀವು ಕೇಳಿಕೊಂಡಿರಬೇಕು ಎಂದು ಜಯಂತ್‌ಗೆ ತಿರುಗೇಟು ಕೊಟ್ಟಿದ್ದಾಳೆ ಜಾನು. ತನ್ನನ್ನು ಬಂಗಾರದ ಪಂಜರದಲ್ಲಿರಿಸಿದ್ದರ ಬಗ್ಗೆಯೂ ಜಾನು ಮಾತನಾಡಿದ್ದಾಳೆ. ತನ್ನ ಪ್ರೀತಿಯ ಜಾನು ಮಾತುಗಳನ್ನು ಕೇಳುತ್ತಿದ್ದಂತೆ ಜಯಂತ್ ಫುಲ್ ಶಾಕ್ ಆಗಿದ್ದಾನೆ. ರಾತ್ರಿ ಜಾನು ಮಾತುಗಳನ್ನು ಕೇಳಿಸಿಕೊಂಡು ಆಘಾತಕ್ಕೊಳಗಾಗಿದ್ದ ಜಯಂತ್‌ಗೆ ಬೆಳಗ್ಗೆಯೂ ಶಾಕ್ ಎದುರಾಗಿತ್ತು. ಜಯಂತ್‌ಗೆ ಮನೆಯಲ್ಲಿರುವ ವಸ್ತುಗಳ ಸ್ಥಾನ ಬದಲಾಗಬಾರದು. ಒಂದು ಸಣ್ಣ ಬದಲಾವಣೆಯಾದ್ರೂ ಜಯಂತ್ ಗಮನಕ್ಕೆ ಬರುತ್ತದೆ. ಇದೀಗ ಇದನ್ನೇ ತನ್ನ ಲಾಭಕ್ಕಾಗಿ ಜಾನು ಬಳಸಿಕೊಂಡಿದ್ದಾಳೆ. ಮನೆಯಲ್ಲಿದ್ದ ಹೂವಿನ ಕುಂಡಗಳ ಸ್ಥಾನವನ್ನು ಜಾನು ಬದಲಾಯಿಸಿದ್ದಾಳೆ. ಜಾನು ಇಲ್ಲದಿದ್ದಾಗ ಜಯಂತ್ ಇದೇ ಹೂವಿನ ಕುಂಡಗಳ ಜೊತೆ ಮಾತನಾಡುತ್ತಿದ್ದನು. ಈಗ ಹೂವಿನ ಕುಂಡಗಳ ಸ್ಥಾನ ಬದಲಾಗಿರೋದನ್ನು ಕಂಡು ಜಯಂತ್ ಸಿಟ್ಟಾಗಿದ್ದಾನೆ. ನನಗೆ ಇದು ಇಷ್ಟವಿಲ್ಲ ಅಂತ ಗೊತ್ತಿದ್ರೂ ಯಾಕೆ ಹೀಗೆ ಮಾಡ್ತಿದ್ದೀಯಾ ಎಂದು ಜಯಂತ್ ಪ್ರಶ್ನೆ ಮಾಡಿದ್ದಾನೆ. ನನಗೆ ಇಷ್ಟಬಂದಂತೆ ಈ ಮನೆಯಲ್ಲಿರಲು ಬಂದಿದ್ದೇನೆ. ಎಲ್ಲವೂ ನೀವು ಅಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಹಾಗೆಯೇ ನಿಮ್ಮಿಷ್ಟದಂತೆ ಎಲ್ಲರೂ ಇರಬೇಕು ಅನ್ನೋದು ನಿಮ್ಮದು ತಪ್ಪು ಕಲ್ಪನೆ. ನಾನು ಹೇಳಿದಂತೆಯೇ ಮುಂದೆ ನಡೆಯಬೇಕು ಎಂದು ಜಯಂತ್‌ಗೆ ಜಾನು ಎಚ್ಚರಿಕೆ ನೀಡಿದ್ದಾಳೆ.
ಜಯಂತ್ ಅಂದುಕೊಂಡಿದ್ದೆಲ್ಲಾ ಉಲ್ಟಾ ಆಗುತ್ತಿದೆ. ಚಿನ್ನುಮರಿಯನ್ನ ತನ್ನ ಕಂಟ್ರೋಲ್‌ನಲ್ಲಿಟ್ಟು ಪ್ರೀತಿ ಹೆಸರಲ್ಲಿ ಮನೆಯಲ್ಲೇ ಕೂಡಿಹಾಕಿಕೊಂಡಿದ್ದ ಜಯಂತ್, ಈಗ ತಾನೇ ಕೈಕೈ ಹಿಸುಕಿಕೊಳ್ಳುತ್ತಿದ್ದಾನೆ. ರೆಬಲ್ ಜಾನುನ ನೋಡಿ ಜಯಂತ್ ಗಾಬರಿಯಾಗಿದ್ದಾನೆ.

ನೋಡಿರಿ

