ಪಾಕ್‌ನಲ್ಲಿ ಭಾರತದ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನದ ಸುದ್ದಿ ಪ್ರಸಾರ ಮಾಡುವಂತಿಲ್ಲ! – ಟಿವಿ ಚಾನೆಲ್‌ಗಳಿಗೆ ನೋಟಿಸ್‌ ನೀಡಿದ PEMRA!

ಪಾಕ್‌ನಲ್ಲಿ ಭಾರತದ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನದ ಸುದ್ದಿ ಪ್ರಸಾರ ಮಾಡುವಂತಿಲ್ಲ! – ಟಿವಿ ಚಾನೆಲ್‌ಗಳಿಗೆ ನೋಟಿಸ್‌ ನೀಡಿದ PEMRA!

ಭಾರತದ ದಿಗ್ಗಜ ಹಿನ್ನಲೆ ಗಾಯಕಿ, ಏಷ್ಯಾದ ನೈಟಿಂಗೇಲ್​ ಖ್ಯಾತಿಯ ಆಶಾ ಭೋಸ್ಲೆ (92) ಭಾನುವಾರ (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ದೇಶ, ವಿದೇಶದಾದ್ಯಂತ ಸಂತಾಪ ಸೂಚಿಸುತ್ತಿದ್ದಾರೆ. ಆದ್ರೀಗ ಪಾಕ್‌ನಲ್ಲಿ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಸುದ್ದಿ ಪ್ರಸಾರ ಮಾಡುವಂತಿಲ್ಲ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಸಂಚಾರ ಅವಧಿ ಹೆಚ್ಚಳ! – ಈ ದಿನಗಳಂದು ರಾತ್ರಿ 1.30ರ ವರೆಗೂ ರೈಲು ಸಂಚಾರ!

ಪಾಕಿಸ್ತಾನದ ಸುದ್ದಿ ವಾಹಿನಿಗಳು ಭಾರತದ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡುವಂತಿಲ್ಲ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ನೋಟಿಸ್ ಜಾರಿ ಮಾಡಿದೆ. ಈಗಾಗಲೇ ಸುದ್ದಿ ಪ್ರಸಾರ ಮಾಡಿದ ವಾಹಿನಿಗಳಿಗೆ ನೋಟಿಸ್ ಜಾರಿ ಮಾಡಿದೆ. ಆಶಾ ಭೋಸ್ಲೆ ಏಪ್ರಿಲ್ 12ರಂದು ಮುಂಬೈನಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಡಾನ್ ಎಂಬ ಪಾಕಿಸ್ತಾನದ ಮಾಧ್ಯಮ ಇಂದು ಗಾಯಕಿ ಆಶಾ ಭೋಸ್ಲೆ ಅವರ ಕುರಿತಾದ ಲೇಖನದಲ್ಲಿ ಅವರ ಸಂಗೀತವು ಗಡಿಗಳನ್ನು ಮೀರಿ, ಅನೇಕ ಪಾಕಿಸ್ತಾನಿಗಳ ಹೃದಯಗಳನ್ನು ಮುಟ್ಟಿತು  ಎಂದು ಹೇಳಿದೆ. ಪಾಕಿಸ್ತಾನದೊಂದಿಗಿನ ಅವರ ಸಂಪರ್ಕ ಮತ್ತು ಪಾಕಿಸ್ತಾನದಲ್ಲಿ ಅವರ ಹೆಸರಿನ ಬಗ್ಗೆ ಇರುವ ಗೊಂದಲದ ಬಗ್ಗೆಯೂ ಆ ಸುದ್ದಿಯಲ್ಲಿ ವಿವರಿಸಲಾಗಿತ್ತು. ಜಿಯೋ ನ್ಯೂಸ್ ಕೂಡ ಅವರಿಗೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡಿತ್ತು. ಈಗ ಆ ಮಾಧ್ಯಮಗಳಿಗೆ ನೋಟಿಸ್ ನೀಡಲಾಗಿದೆ. ಪಾಕಿಸ್ತಾನದ ಹೆಚ್ಚಿನ ಪತ್ರಕರ್ತರು ಮತ್ತು ಈ ನೋಟಿಸ್ ಅನ್ನು ಖಂಡಿಸಿದ್ದಾರೆ.

ಜಿಯೋ ನ್ಯೂಸ್‌ನ ಹಿರಿಯ ಪತ್ರಕರ್ತ ಅಜಾಜ್ ಸೈಯದ್ ಕೂಡ ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದು, ಪಾಕಿಸ್ತಾನದ ಮುಖ್ಯವಾಹಿನಿಯ ಮಾಧ್ಯಮಗಳ ಮೇಲೆ ಇಂತಹ ನಿಯಂತ್ರಣವನ್ನು ಬಹುಶಃ ಹಿಂದೆಂದೂ ಕಂಡಿಲ್ಲ. ಆಶಾ ಭೋಸ್ಲೆ ಅವರ ಸಾವಿನ ಕುರಿತು ತಮ್ಮ ಕೆಲಸವನ್ನು ಪ್ರಸಾರ ಮಾಡಿದ್ದಕ್ಕೂ ಶೋ-ಕಾಸ್ ನೋಟಿಸ್‌ಗಳನ್ನು ನೀಡಲಾಯಿತು. ಮಾಧ್ಯಮಗಳು ಯಾವಾಗಲೂ ಜವಾಬ್ದಾರಿಯುತವಾಗಿ ಕೆಲಸ ಮಾಡಿವೆ. ಆದರೆ ಮಾಧ್ಯಮವನ್ನು ನಿಯಂತ್ರಿಸುವವರು ತಮ್ಮನ್ನು ದೇಶಭಕ್ತರೆಂದು ಬಿಂಬಿಸಿಕೊಳ್ಳುತ್ತಾ ಮಾಧ್ಯಮವನ್ನು ರಾಜ್ಯ ವಿರೋಧಿ ಎಂದು ಬ್ರಾಂಡ್ ಮಾಡಿದ್ದಾರೆ ಎಂದು ಅವರು ಎಕ್ಸ್​ನಲ್ಲಿ ಬರೆದಿದ್ದಾರೆ.

ಆಶಾ ಭೋಸ್ಲೆ ದೇಶದ ಗಡಿಯನ್ನು ಮೀರಿದ ಗಾಯಕಿ. ಆಶಾ ಭೋಸ್ಲೆ ಸ್ವತಃ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಅವರನ್ನು ಮೆಚ್ಚಿಕೊಂಡಿದ್ದರು. ಅವರನ್ನು ಪ್ರೀತಿಯಿಂದ ಅಕ್ಕ  ಎಂದು ಕರೆಯುತ್ತಿದ್ದರು. ಅವರು ನುಸ್ರತ್ ಫತೇಹ್ ಅಲಿ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಾಸಿರ್ ಕಾಜ್ಮಿಯಂತಹ ಶ್ರೇಷ್ಠ ಉರ್ದು ಕವಿಗಳ ಕಾವ್ಯಕ್ಕೆ ಅವರು ಜೀವ ತುಂಬಿದ್ದರು ಎಂದು ಪತ್ರಕರ್ತ ಅಬ್ಬಾಸ್ ಹೇಳಿದ್ದಾರೆ.

Shwetha M