ಬಾಲಕಿಗೆ ಉರುಳಾಯ್ತು ಜೋಕಾಲಿ ಕಟ್ಟಿದ್ದ ಸೀರೆ – ಆಟವಾಡುತ್ತಿದ್ದಾಕೆ ದುರಂತ ಅಂತ್ಯ!

ಬಾಲಕಿಗೆ ಉರುಳಾಯ್ತು ಜೋಕಾಲಿ ಕಟ್ಟಿದ್ದ ಸೀರೆ – ಆಟವಾಡುತ್ತಿದ್ದಾಕೆ ದುರಂತ ಅಂತ್ಯ!

ಮಕ್ಕಳಿಗೆ ಸಮ್ಮರ್‌ ಹಾಲಿಡೇಸ್‌ ಶುರುವಾಗಿದೆ. ಈಗ ಆಟವಾಡುತ್ತಲೇ ಸಮಯ ಕಳೆಯುತ್ತಿದ್ದಾರೆ. ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ. ಇದೀಗ ಇಲ್ಲೊಂದು ಕಡೆ ಜೋಕಾಲಿಯಲ್ಲಿ ಆಟವಾಡುತ್ತಿದ್ದ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ. ಸೀರೆ ಕೊರಳಿಗೆ ಸುತ್ತಿಕೊಂಡು10 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ನಿಮ್ಮ ಸೀಟಿಗೆ ಬರಲಿದೆ ನಿಮ್ಮಿಷ್ಟದ ಆಹಾರ!

ಈ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಲೇಖನಾ (10) ಮೃತ ದುರ್ದೈವಿ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ದುರ್ಘಟನೆ ನಡೆದಿದೆ.

ಪೋಷಕರು ಲೇಖನಾ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ರು. ಈ ವೇಳೆ ಆಟ ಜೋಕಾಲಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆಕೆಯ ಕೊರಳಿಗೆ ಸೀರೆ ಉರುಳಾಗಿ ಬಾಲಕಿ ಸಾವನ್ನಪ್ಪಿದ್ದಾಳೆ.

ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Shwetha M