ಮಂಗಳವಾರ ಹನುಮನ ಈ ರೀತಿ ಪೂಜಿಸಿದ್ರೆ ಬೇಡಿಕೊಂಡಿದ್ದೆಲ್ಲಾ ನೆರವೇರಲಿದೆ..!

ಮಂಗಳವಾರ ಹನುಮನ ಈ ರೀತಿ ಪೂಜಿಸಿದ್ರೆ ಬೇಡಿಕೊಂಡಿದ್ದೆಲ್ಲಾ ನೆರವೇರಲಿದೆ..!

ರಾಮ ಭಕ್ತ ಹನುಮಂತನನ್ನು ಬಜರಂಗಿ ಆಂಜನೇಯ ಮುಂತಾದ ಹೆಸರುಗಳಿಂದ ಪ್ರಪಂಚದಾದ್ಯಂತ ಭಕ್ತರು ಪೂಜಿಸುತ್ತಾರೆ. ಧೈರ್ಯ, ಸ್ಥೈರ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಜನೇಯ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದವರು. ರಾಮ ಸೀತೆಯರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುವಷ್ಟು ಕಟ್ಟಾ ಭಕ್ತರಾಗಿದ್ದಾರೆ. ಹನುಮಂತನಿಗೆ ತನ್ನ ಸಾಹಸಗಳಿಂದ ಹೋದಲ್ಲೆಲ್ಲಾ ಹಲವಾರು ಹೆಸರುಗಳಿವೆ. ಮಾರುತಿ, ಪವನ ಪುತ್ರ, ಆಂಜನೀಪುತ್ರ ಹೀಗೆ ಭಕ್ತರ ಭಕ್ತಿಗೆ ಅನುಗುಣವಾಗಿ ಕರೆಯಲ್ಪಟ್ಟ ಹೆಸರುಗಳಿಂದ ಹನುಮಾನ್ ಪ್ರಸಿದ್ಧರು.

ಇದನ್ನೂ ಓದಿ: ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಟಿಕೆಟ್ , ಪಾರ್ಕಿಂಗ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ 

ಮಂಗಳವಾರದಂದು ವಿಶೇಷವಾಗಿ ಹನಮಂತನ ಪೂಜೆಯನ್ನು ಮಾಡಲಾಗುತ್ತದೆ. ಪ್ರಾತಃ ಕಾಲದಲ್ಲಿಯೇ ಎದ್ದು ಹನುಮಾನ್ ಪೂಜೆಯನ್ನು ಮಾಡಿದರೆ ಭಕ್ತರು ಹನುಮಂತನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಆಚರಣೆಯಾಗಿದೆ. ಶಕ್ತಿ, ಬಲ ಮತ್ತು ಗೌರವವನ್ನು ಹೆಚ್ಚಿಸಿಕೊಳ್ಳಲು ಹನಮಂತನ ಪೂಜೆಯನ್ನು ಮಾಡಬೇಕು. ಹಾಗಾದರೆ ಮಂಗಳವಾರಂದು ಹನುಮನ ಪೂಜಾ ವಿಧಾನಗಳೇನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು ಅನ್ನೋದ್ದನ್ನ ನೋಡೋಣ.

ಹನುಮಾನ್ ಪೂಜಾ ವಿಧಿ ನೀವು ಪೂಜೆ ಮಾಡಬೇಕಾಗಿರುವ ಸ್ಥಳವನ್ನು ಶುದ್ಧ ಮಾಡಿ. ಹನುಮಂತನಿಗೆ ಪೂಜೆಯನ್ನು ಅರ್ಪಿಸಿ ಹನುಮಂತನ ವಿಗ್ರಹವನ್ನು ನೀರಿನಿಂದ ಶುದ್ಧೀಕರಿಸಿ. ನೀವು ಪೂಜೆ ಮಾಡಬೇಕಾಗಿರುವ ಸ್ಥಳಕ್ಕೆ ನೀರಿನ ಪ್ರೋಕ್ಷಣೆಯನ್ನು ಮಾಡಿ. ಕೆಂಪು ಬಟ್ಟೆಯ ಮೇಲೆ ಹನುಮಾನ್ ವಿಗ್ರಹವನ್ನು ಇರಿಸಿ ಹನುಮಂತನ ಮೂರ್ತಿಯ ಮೇಲೆ ಕುಂಕುಮ  ಹಚ್ಚಿ. ಅಗರ್‌ಬತ್ತಿ ಮತ್ತು ದೀಪವನ್ನು ಹಚ್ಚಿ ದೇವರಿಗೆ ಹೂವು ಮತ್ತು ಹಣ್ಣು ಸಮರ್ಪಿಸಿ.  108 ಅಕ್ಷತೆ, 108 ವೀಳ್ಯದೆಲೆ, 108 ಹಣ್ಣುಗಳನ್ನು ಇರಿಸಿ . ಈ ದಿನ ಸಾತ್ವಿಕ ಆಹಾರವನ್ನು ಸೇವಿಸಿ. ಮಾಂಸಾಹಾರ ಸೇವನೆ ಬೇಡ ಹನುಮಂತನಿಗೆ 5 ಬಾಳೆಹಣ್ಣು ಅರ್ಪಿಸಿ ಈಶಾನ್ಯ ದಿಕ್ಕಿನಲ್ಲಿ ಹನುಮಂತನ ಪ್ರಾರ್ಥನೆಯನ್ನು ಮಾಡಿ.

Kishor KV