RCBಯಲ್ಲಿ ಬೆಂಕಿ ಬ್ಯಾಟಿಂಗ್ – 200+ ಟಾರ್ಗೆಟ್ ಲೆಕ್ಕಕ್ಕೇ ಇಲ್ವಾ?
ಪವರ್ ಪ್ಲೇನಲ್ಲೇ ಮಂಕಾದ ಬೌಲರ್ಸ್

19ನೇ ಆವೃತ್ತಿಯ ಐಪಿಎಲ್ ಅದ್ಧೂರಿಯಾಗೇ ಸ್ಟಾರ್ಟ್ ಆಗಿ ಈಗ ಆಲ್ರೆಡಿ 20 ಮ್ಯಾಚಸ್ ಕಂಪ್ಲೀಟ್ ಆಗಿವೆ. ಒಂದೊಂದು ತಂಡಗಳು ನಾಲ್ಕು ನಾಲ್ಕು ಪಂದ್ಯಗಳನ್ನ ಆಡಿವೆ. ಇಂಟ್ರೆಸ್ಟಿಂಗ್ ಅಂದ್ರೆ ನಾಲ್ಕು ಪಂದ್ಯಗಳನ್ನ ಆಡಿದ್ರೂ ಸೋಲನ್ನೇ ಕಾಣದೆ ಇರೋ ತಂಡಗಳೂ ಇವೆ. ಗೆಲುವಿನ ಖಾತೆಯನ್ನೇ ತೆರೆಯದ ಟೀಮ್ ಕೂಡ ಇದೆ. ಬಟ್ ಇಷ್ಟು ಪಂದ್ಯಗಳಲ್ಲಿ ಒಂದಂತು ಕ್ಲಿಯರ್ ಆಗಿದೆ. ಅದೇನಂದ್ರೆ ಬ್ಯಾಟರ್ಗಳು ಡಾಮಿನೇಷನ್ ಮಾಡ್ತಿದ್ದಾರೆ ಅನ್ನೋದು. ಬ್ಯಾಟರ್ಸ್ ಫ್ರೆಂಡ್ಲಿ ಪಿಚ್ನಲ್ಲಿ 200+ ರನ್ಸ್ಗಳ ಟಾರ್ಗೆಟ್ ಟಾರ್ಗೆಟ್ಟೇ ಅಲ್ಲ ಅನ್ಸೋಕೆ ಶುರುವಾಗಿದೆ.
ಇದನ್ನೂ ಓದಿ : ವೈಟ್ಬಾಲ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಅತ್ಯಂತ ಕೆಟ್ಟ ಬ್ಯಾಟ್ಸ್ಮನ್ – ಲಕ್ನೋ ನಾಯಕ ಪಂತ್ ಹಿಗ್ಗಾಮುಗ್ಗಾ ಟ್ರೋಲ್
ಟಿ-20 ಫಾರ್ಮೆಟ್ನಲ್ಲಿ ಬ್ಯಾಟರ್ಗಳದ್ದೇ ಕಾರುಬಾರು. ಅದ್ರಲ್ಲೂ ಐಪಿಎಲ್ನಲ್ಲಂತೂ ಬೌಲರ್ಗಳನ್ನ ಹಿಗ್ಗಾಮುಗ್ಗಾ ಜಾಡಿಸ್ತಿದ್ದಾರೆ. ವರ್ಲ್ಡ್ ಕ್ಲಾಸ್ ಬೌಲರ್ಗಳು ಕೂಡ ಥಂಡಾ ಹೊಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಈ ಸೀಸನ್ನಲ್ಲಿ ಪವರ್ಪ್ಲೇ ರನ್-ರೇಟ್ ಪ್ರತಿ ಓವರ್ಗೆ 10.47 ರನ್ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಲಾಸ್ಟ್ ಸೀಸನಲ್ಲಿ ಪ್ರತಿ ಓವರ್ಗೆ 9.61 ಆಗಿತ್ತು. ಬಟ್ ಈ ವರ್ಷ ದಾಖಲೆ ಬರೆದಿದೆ. 2020 ಮತ್ತು 2021 ರ ಸೀಸನ್ಗಳಲ್ಲಿ ಈ ರೇಟ್ 7.71 ಇತ್ತು. ಬಟ್ ಈಗ 10ನ್ನೂ ಕ್ರಾಸ್ ಆಗಿ ಮುನ್ನುಗ್ತಿದೆ. ಪಿಚ್ಗಳನ್ನು ಬ್ಯಾಟರ್ಸ್ ಫ್ರೆಂಡ್ಲಿಯಾಗಿ ಮಾಡ್ತಾ ಇರೋದೇ ಮುಖ್ಯ ಕಾರಣ. ಈ ಸೀಸನ್ನಲ್ಲಿ ಆಲ್ರೆಡಿ 200+ ರನ್ಗಳ ಪರ್ವ ನಡೀತಿದೆ.
20 ಮ್ಯಾಚ್.. 11 ಪಂದ್ಯಗಳಲ್ಲಿ 200+ ರನ್ಸ್!
ಪ್ರಸ್ತುತ ಸೀಸನ್ನಲ್ಲಿ ಈವರೆಗೆ 20 ಪಂದ್ಯಗಳು ಕಂಪ್ಲೀಟ್ ಆಗಿವೆ. ಌಂಡ್ ಎಲ್ಲಾ ತಂಡಗಳು ತಲಾ ನಾಲ್ಕು ನಾಲ್ಕು ಪಂದ್ಯಗಳನ್ನ ಆಡಿವೆ. ರಾಜಸ್ಥಾನ ರಾಯಲ್ಸ್ ಒಂದೂ ಪಂದ್ಯ ಸೋಲದೆ ಟಾಪ್ನಲ್ಲಿದೆ. ಪಂಜಾಬ್ ತಂಡ ಕೂಡ ಸೋತಿಲ್ಲ. ಕೆಕೆಆರ್ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಅತ್ತ ಕೆಕೆಆರ್ ಟೀಂ ಇನ್ನೂ ಒಂದು ಪಂದ್ಯವನ್ನೂ ಗೆಲ್ಲೋಕೆ ಸಾಧ್ಯವಾಗಿಲ್ಲ. ಪಂದ್ಯ ರದ್ದಾಗಿ ಒಂದು ಅಂಕ ಸಿಕ್ಕಿದ್ದಷ್ಟೇ. ಇಂಟ್ರೆಸ್ಟಿಂಗ್ ಅಂದ್ರೆ ಈ 20 ಪಂದ್ಯಗಳ ವೇಳೆಗೆ ಐಪಿಎಲ್ನಲ್ಲಿ ಬ್ಯಾಟರ್ಸ್ ಡಾಮಿನೇಷನ್ ನಡೀತಾ ಇರೋದು ಗೊತ್ತಾಗ್ತಿದೆ. ಯಾಕಂದ್ರೆ ಐಪಿಎಲ್ನ ಮೊದಲ 20 ಪಂದ್ಯಗಳು ಮುಗಿದಿದ್ದು ಇದ್ರಲ್ಲಿ ಪಂಜಾಬ್ ಮತ್ತು ಕೊಲ್ಕತ್ತಾ ನಡುವಿನ ಒಂದು ಪಂದ್ಯ ಮಳೆ ಕಾರಣಕ್ಕೆ ರದ್ದಾಗಿದೆ. ಹಾಗೇ ಮುಂಬೈ ಮತ್ತು ರಾಜಸ್ಥಾನ ಪಂದ್ಯ ಮಳೆ ಕಾರಣದಿಂದಲೇ 11 ಓವರ್ಗಳಿಗೆ ಪಂದ್ಯ ಸೀಮಿತಗೊಳಿಸಿ ಆಡಿಸಲಾಗಿತ್ತು. ಸೋ ಈ 2 ಪಂದ್ಯಗಳನ್ನ ಹೊರತುಪಡಿಸಿದ್ರೆ ಉಳಿದ 18 ಮ್ಯಾಚ್ಗಳಲ್ಲಿ 11 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 200 ಪ್ಲಸ್ ರನ್ಸ್ಗಳನ್ನ ಸ್ಕೋರ್ ಮಾಡಿದ್ದಾರೆ. ಅಂದ್ರೆ 200ಕ್ಕಿಂತ ಹೆಚ್ಚಿನ ಸ್ಕೋರ್ ಸೆಟ್ ಮಾಡಿದ್ದಾರೆ. ಹಾಗೇ ಐದು ತಂಡಗಳು ಆ ಟಾರ್ಗೆಟ್ನ ಯಶಸ್ವಿಯಾಗಿ ಚೇಸ್ ಕೂಡ ಮಾಡಿದ್ದಾರೆ. ಅಂದ್ರೆ ಇಲ್ಲಿ 200+ ರನ್ಸ್ ಕೊಟ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ತಾ ಇಲ್ಲ ಅನ್ನೋದು ಕ್ಲಿಯರ್ ಆಗಿ ಗೊತ್ಥಾಗ್ತಿದೆ.
ಬ್ಯಾಟರ್ ಗಳ ಆರ್ಭಟ!
ತಂಡ 200+ ರನ್ಸ್ ( ಫಸ್ಟ್ ಬ್ಯಾಟಿಂಗ್) ಫಲಿತಾಂಶ
ಬೆಂಗಳೂರು 3 ಬಾರಿ 2 ಗೆಲುವು
ಹೈದ್ರಾಬಾದ್ 3 ಬಾರಿ 1 ಗೆಲುವು
ಚೆನ್ನೈ 2 ಬಾರಿ 1 ಗೆಲುವು
ಕೊಲ್ಕತ್ತಾ 1 ಬಾರಿ ಸೋಲು
ರಾಜಸ್ಥಾನ ರಾಯಲ್ಸ್ 1 ಬಾರಿ ಗೆಲುವು
ಗುಜರಾತ್ 1 ಬಾರಿ ಗೆಲುವು
ಸೋ ಈ ನಂಬರ್ಸ್ ನೋಡಿದಾಗ್ಲೇ ಗೊತ್ತಾಗುತ್ತೆ ಪಿಚ್ಗಳು ಎಷ್ಟು ಬ್ಯಾಟಿಂಗ್ ಫ್ರೆಂಡ್ಲಿ ಆಗಿವೆ. ಜೊತೆಗೆ ಬ್ಯಾಟರ್ಗಳು ಅದೆಷ್ಟು ಅಗ್ರೆಸ್ಸಿವ್ ಮೋಡ್ನಲ್ಲಿ ಬ್ಯಾಟಿಂಗ್ ಮಾಡ್ತಾ ಇದ್ದಾರೆ ಅನ್ನೋದು. ಅಲ್ದೇ ಈ ಸೀಸನ್ನಲ್ಲಿ ಸದ್ಯಕ್ಕೆ ಹೈಯೆಸ್ಟ್ ರನ್ ಚೇಸ್ ಅಂದ್ರೆ ಕೆಕೆಆರ್ ಕಲೆ ಹಾಕಿದ್ದ 220 ರನ್ಗಳ ಟಾರ್ಗೆಟ್ ಅನ್ನು ಮುಂಬೈ ಇಂಡಿಯನ್ಸ್ ತಂಡ ಯಶಸ್ವಿಯಾಗಿ ಚೇಸ್ ಮಾಡಿತ್ತು. ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಟಾರ್ಗೆಟ್ ರೀಚ್ ಆಗಿತ್ತು. ಮತ್ತೊಂದೆಡೆ ಈ ಸೀಸನ್ನಲ್ಲಿ ಈವರೆಗೆ ಯಾವುದೇ ಟೀಂ ಮಾಡದೇ ಇರೋ ಸಾಧನೆಯನ್ನ ಆರ್ಸಿಬಿ ಮಾಡಿದೆ. ಅದೇನಂದ್ರೆ ಆಡಿರುವಂಥ ನಾಲ್ಕಕ್ಕೆ ನಾಲ್ಕೂ ಮ್ಯಾಚ್ಗಳಲ್ಲೂ 200+ ರನ್ಸ್ ಹೊಡೆದ್ದಾರೆ. ಅದು ಬ್ಯಾಟಿಂಗ್ ಇರ್ಲಿ ಚೇಸಿಂಗ್ ಇರ್ಲಿ ಆರ್ಸಿಬಿ ಬ್ಯಾಟರ್ಗಳ ಕಡೆಯಿಂದ 200 ಪ್ಲಸ್ ರನ್ಸ್ ಅಂತೂ ಬಂದಿದೆ. ಈ ಸೀಸನ್ನಲ್ಲಿ ಆರ್ಸಿಬಿ ಸ್ಕೋರ್ ಯಾವ್ಯಾವ ಮ್ಯಾಚ್ಗಳಲ್ಲಿ ಹೇಗಿದೆ ಅನ್ನೋದನ್ನ ನೋಡೋಣ.
ಆರ್ ಸಿಬಿ ಬ್ಯಾಟಿಂಗ್ ಧಮಾಕ!
ಎದುರಾಳಿ ರನ್ಸ್ ಫಲಿತಾಂಶ
ಹೈದರಾಬಾದ್ 203/4(15.4) ಗೆಲುವು
ಚೆನ್ನೈ 250/3(20) ಗೆಲುವು
ರಾಜಸ್ಥಾನ 201/8(20) ಸೋಲು
ಮುಂಬೈ 240/4(20) ಗೆಲುವು
ಇಲ್ಲಿ ಆರ್ಸಿಬಿ ನಾಲ್ಕು ಪಂದ್ಯಗಳ ಪೈಕಿ ಮೂರು ಮ್ಯಾಚ್ಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿ 200 ಪ್ಲಸ್ ಟಾರ್ಗೆಟ್ ಸೆಟ್ ಮಾಡಿದೆ. ಅದ್ರಲ್ಲೂ ಈ ಸೀಸನ್ನ ಟಾಪ್ 2 ಹೈಯೆಸ್ಟ್ ಸ್ಕೋರ್ ಆರ್ಸಿಬಿಯದ್ದೇ ಆಗಿದೆ. ಮೊದಲ ಟಾರ್ಗೆಟ್ ಚೆನ್ನೈ ವಿರುದ್ಧ 250 ರನ್ಸ್ ಹಾಗೇ ಮುಂಬೈ ವಿರುದ್ಧ 240 ರನ್ಸ್. ಇದು ಕೂಡ ದಾಖಲೆಯಾಗಿದೆ. ಌಂಡ್ ಎರಡೂ ಪಂದ್ಯಗಳನ್ನ ಗೆದ್ದಿದೆ ಕೂಡ.

ನೋಡಿರಿ

