ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಲ್ಲ – ಹೆಚ್. ಡಿ ಕುಮಾರಸ್ವಾಮಿ ಸ್ಪಷ್ಟನೆ!

ವಿಧಾನಸಭಾ ಚುನಾವಣೆ ಹತ್ತಿರವಾದಂತೆಲ್ಲಾ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅದ್ರಲ್ಲೂ ಜೆಡಿಎಸ್​ನಲ್ಲಿನ ವಿದ್ಯಾಮಾನಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಇವತ್ತು ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಮೊನ್ನೆಯಷ್ಟೇ ಭವಾನಿ ರೇವಣ್ಣ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ ಸ್ವಯಂ ಘೋಷಣೆ ಮಾಡಿಕೊಂಡಿದ್ರು. ಆದ್ರೆ ಈಗ ಭವಾನಿಗೆ ಟಿಕೆಟ್ ಕೊಡಲ್ಲ ಅಂತಾ ಖುದ್ದು ಹೆಚ್.ಡಿ ಕುಮಾರಸ್ವಾಮಿಯೇ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜೆಡಿಎಸ್ ಕೋಟೆಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.

ಇದನ್ನೂ ಓದಿ : ಕಾವೇರಿ, ಕಾಳಿ, ಕುಮಾರಧಾರ ಸೇರಿ 17 ನದಿಗಳ ನೀರು ಕುಡಿಯಲು ಯೋಗ್ಯವಲ್ಲ..!

ರಾಯಚೂರಿನಲ್ಲಿ ಮಾತನಾಡಿದ ಹೆಚ್​ಡಿಕೆ  ಯಾರೋ ನಾಲ್ಕೈದು ಜನ ಹೇಳಿದ ತಕ್ಷಣ ಟಿಕೆಟ್ ನೀಡಲು ಆಗಲ್ಲ. ಕೆಲವರಿಗೆ ಪ್ರೀತಿ ವಿಶ್ವಾಸ ಇರುತ್ತೆ. ಅಭಿಮಾನದಿಂದ ಮಾತನಾಡಿದ್ದಾರೆ. ಅದನ್ನು ಅಭಿಪ್ರಾಯ ಎನ್ನಲು ಆಗಲ್ಲ. ಟಿಕೆಟ್ ನೀಡುವ ವಿಚಾರವನ್ನು ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡುತ್ತೇವೆ. ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ಸಮರ್ಥ ಅಭ್ಯರ್ಥಿ ಇದ್ದಾಗ ಕುಟುಂಬದವರನ್ನು ಸ್ಪರ್ಧೆಗೆ ಇಳಿಸಲ್ಲ. ಈ ಬಗ್ಗೆ ಪದೇಪದೆ ಸಮಜಾಯಿಷಿ ಕೊಡಬೇಕಿಲ್ಲ ಎಂದಿದ್ದಾರೆ.

ಎಲೆಕ್ಷನ್​ಗೆ ಯಾರು ಎಲ್ಲಿ ಬೇಕಾದ್ರೂ ನಿಲ್ಲಬಹುದು. ಬಿ. ಫಾರ್ಮ್ ನೀಡೋದು ದೇವೇಗೌಡರು ಎಂದು ಅಮ್ಮನ ಪರ ಬ್ಯಾಟ್ ಬೀಸಿದ್ದ ಸಂಸದ ಪ್ರಜ್ವಲ್ ರೇವಣ್ಣಗೂ ಹೆಚ್​​ಡಿಕೆ ತಿರುಗೇಟು ಕೊಟ್ಟಿದ್ದಾರೆ ಯಾರು ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂಬುದನ್ನು ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸಲಿದೆ ಎಂದು ತಿರುಗೇಟು ನೀಡಿದ್ದಾರೆ. ಪತ್ನಿ ಭವಾನಿಗೆ ಹಾಸನ ಕ್ಷೇತ್ರದ ಟಿಕೆಟ್ ಕೊಡಿಸಲು ಹೆಚ್.ಡಿ ರೇವಣ್ಣ ಶತಾಯ ಗತಾಯ ಪ್ರಯತ್ನ ಪಡ್ತಿದ್ದಾರೆ ಎನ್ನಲಾಗಿದೆ. ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದ್ದಾರಂತೆ.

 

suddiyaana