ಗ್ಲೌಸ್ ವಿಚಾರದಲ್ಲಿ ಅಂಪೈರ್ ತಾರತಮ್ಯ ಆರೋಪ – ಮುಂಬೈಗೆ ನ್ಯಾಯ ಡೆಲ್ಲಿಗೆ ಅನ್ಯಾಯ..!

ಗ್ಲೌಸ್ ವಿಚಾರದಲ್ಲಿ ಅಂಪೈರ್ ತಾರತಮ್ಯ ಆರೋಪ – ಮುಂಬೈಗೆ ನ್ಯಾಯ ಡೆಲ್ಲಿಗೆ ಅನ್ಯಾಯ..!

ಐಪಿಎಲ್‌ನಲ್ಲಿ ಪಂದ್ಯಗಳು ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಅಂಪೈರ್ ವಿರುದ್ಧ ಕೆಲ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 20ನೇ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡ ನಿರ್ಧಾರವು ಇದೀಗ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ:ಮೂರನೇ ಗೆಲುವಿನ ಸಂಭ್ರಮದಲ್ಲಿ ಆರ್‌ಸಿಬಿ – ಬಲಿಷ್ಠ ಮುಂಬೈಗೆ ಹ್ಯಾಟ್ರಿಕ್ ಸೋಲು

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಓವರ್ ಮಧ್ಯದಲ್ಲಿ ಗ್ಲೌಸ್ ಬದಲಾಯಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಅಂಪೈರ್‌ಗಳ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಓವರ್ ಮುಗಿಯುವ ಮೊದಲೇ ಹೊಸ ಗ್ಲೌಸ್ ಬೇಕೆಂದು ಕೇಳಿದರು. ಆರಂಭದಲ್ಲಿ ಅಂಪೈರ್‌ಗಳು ಇದಕ್ಕೆ ಅನುಮತಿ ನೀಡದಿದ್ದರೂ, ನಂತರ ಪಾಂಡ್ಯ ಎರಡನೇ ಬಾರಿ ಮನವಿ ಮಾಡಿದಾಗ ಗ್ಲೌಸ್ ಬದಲಿಸಲು ಅವಕಾಶ ನೀಡಲಾಯಿತು. ಈ ಘಟನೆಗೆ ಒಂದು ದಿನ ಮೊದಲು ಅಂಪೈರ್ ನಡೆದುಕೊಂಡ ರೀತಿ ಈಗ ವಿವಾದಕ್ಕೆ ಕಾರಣವಾಗಿದೆ. ಏಪ್ರಿಲ್ 11 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟನ್ ಸ್ಟಬ್ಸ್ ಅವರಿಗೂ ಇದೇ ರೀತಿ ಗ್ಲೌಸ್ ಬದಲಿಸುವ ಅಗತ್ಯವಿತ್ತು. ಆದರೆ ಅಂಪೈರ್‌ಗಳು “ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸಲು ಅವಕಾಶವಿಲ್ಲ, ಓವರ್ ಮುಗಿಯುವವರೆಗೆ ಕಾಯಿರಿ” ಎಂದು ಕಟ್ಟುನಿಟ್ಟಾಗಿ ನಿರಾಕರಿಸಿದ್ದರು.

ಹಾರ್ದಿಕ್ ಪಾಂಡ್ಯ ಅವರ ವಿಚಾರದಲ್ಲಿ ಅಂಪೈರ್‌ ತಾರತಮ್ಯ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಐಪಿಎಲ್ ನಿಯಮಗಳ ಪ್ರಕಾರ, ಐಸಿಸಿ ಮತ್ತು ಐಪಿಎಲ್‌ನ ‘ಪ್ಲೇಯಿಂಗ್ ಕಂಡೀಷನ್ಸ್’ ಪ್ರಕಾರ… ಸಮಯ ಉಳಿತಾಯ: ಪಂದ್ಯದ ವೇಗವನ್ನು ಕಾಯ್ದುಕೊಳ್ಳಲು ಬ್ಯಾಟರ್‌ಗಳು ಓವರ್‌ಗಳ ಮಧ್ಯದಲ್ಲಿ ಅಥವಾ ಸ್ಟ್ರಾಟೆಜಿಕ್ ಟೈಮ್ ​ಔಟ್ ಸಮಯದಲ್ಲಿ ಮಾತ್ರ ವಸ್ತುಗಳನ್ನು (ಬ್ಯಾಟ್, ಗ್ಲೌಸ್, ಹೆಲ್ಮೆಟ್ ಇತ್ಯಾದಿ) ಬದಲಾಯಿಸಬೇಕು. ಒಂದು ವೇಳೆ ಬ್ಯಾಟರ್‌ನ ಗ್ಲೌಸ್ ಅಥವಾ ಬ್ಯಾಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ತುರ್ತು ಎನಿಸಿದರೆ ಮಾತ್ರ ಓವರ್ ಮಧ್ಯದಲ್ಲಿ ಬದಲಾಯಿಸಲು ಅಂಪೈರ್ ಅನುಮತಿ ನೀಡಬಹುದು. ಒಂದು ವೇಳೆ ಪಂದ್ಯದ ಮೇಲೆ ಪ್ರಭಾವ ಬೀರಲು ಅಥವಾ ವಿಶ್ರಾಂತಿಗಿಟ್ಟಿಸಿಕೊಳ್ಳಲು ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸುವುದು ಸಮಯ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ವಿಪರೀತ ಸೆಕೆಯಿಂದಾಗಿ ಬೆವರುತ್ತಿದ್ದ ಕಾರಣ ತಮ್ಮ ‘ಗ್ಲೌಸ್’ ಬದಲಿಸಲು ಸ್ಟಬ್ಸ್​, ಅಂಪೈರ್ ಬಳಿ ಅನುಮತಿ ಕೇಳಿದ್ದರು. ಆದರೆ, ಆಟ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಂಪೈರ್ ಗ್ಲೌಸ್ ಬದಲಾವಣೆಗೆ ನಿರಾಕರಿಸಿದ್ದಾರೆ. ದುರಾದೃಷ್ಟವಶಾತ್ ಮುಂದಿನ ಎಸೆತದಲ್ಲೇ ಟ್ರಿಸ್ಟನ್ ಸ್ಬಬ್ಸ್ ಔಟಾದರು. ಇತ್ತ ಅಂಪೈರ್ ನಿರ್ಧಾರದಿಂದ ಕುಪಿತಗೊಂಡ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಹಿರಿಯ ಆಟಗಾರ ನಿತೀಶ್ ರಾಣಾ ಮತ್ತು ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ರಾವ್ ಬೌಂಡರಿ ಲೈನ್‌ ಬಳಿ ಇದ್ದ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಈ ವಾಗ್ವಾದ ಪರಿಣಾಮ ನಿತೀಶ್ ರಾಣಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ಬೇರೆ ವಿಧಿಸಲಾಗಿತ್ತು.

Sulekha