ಗೆಲುವಿನ ಟ್ರ್ಯಾಕ್ RCBಗೋ.. MIಗೋ? – 4ನೇ ಮ್ಯಾಚಲ್ಲೂ ಬರುತ್ತಾ 200+ ರನ್ಸ್?
ಕೊಹ್ಲಿ Vs ಬುಮ್ರಾ ಬ್ಯಾಟಲ್ ಹೇಗಿರುತ್ತೆ?

ಗೆಲುವಿನ ಟ್ರ್ಯಾಕ್ RCBಗೋ.. MIಗೋ? – 4ನೇ ಮ್ಯಾಚಲ್ಲೂ ಬರುತ್ತಾ 200+ ರನ್ಸ್?ಕೊಹ್ಲಿ Vs ಬುಮ್ರಾ ಬ್ಯಾಟಲ್ ಹೇಗಿರುತ್ತೆ?

ಬಿಗ್ ಡೇ.. ಬಿಗ್ ಮ್ಯಾಚಸ್.. ಸೂಪರ್ ಸಂಡೇಯಲ್ಲಿ ಮತ್ತೊಂದು ಹೈವೋಲ್ಟೇಜ್ ಫೈಟ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ವಾಂಖೆಡೆ ಸ್ಟೇಡಿಯಮ್​ನಲ್ಲಿ ಐಪಿಎಲ್​ನ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಅದ್ರಲ್ಲೂ ಎರಡೂ ತಂಡಗಳು ರಾಜಸ್ಥಾನ ವಿರುದ್ಧವೇ ಸೋತು ಬರ್ತಿವೆ. ಈಗ ವಾಂಖೆಡೆಯಲ್ಲಿ ಗೆದ್ದು ಯಾರು ಗೆಲುವಿನ ಟ್ರ್ಯಾಕ್​ಗೆ ಬರ್ತಾರೆ ಅನ್ನೋದೇ ಪ್ರಶ್ನೆ.

ಇದನ್ನೂ ಓದಿ : RCBಗೆ ಮೊದಲ ಸೋಲು, RRಗೆ 4ನೇ ಗೆಲುವು – ವೈಭವ್ ಬ್ಯಾಟಿಂಗ್ ಅಬ್ಬರ ಶಾಕ್ ಆದ ರಾಯಲ್ ಚಾಲೆಂಜರ್ಸ್

ಐಪಿಎಲ್​ ಇತಿಹಾಸದಲ್ಲಿ ಮೋಸ್ಟ್ ಸಕ್ಸಸ್​​ಫುಲ್ ಟೀಂ ಆಗಿರೋ ಮುಂಬೈ ಇಂಡಿಯನ್ಸ್ ಈ ಸೀಸನ್​ನಲ್ಲಿ ಫಸ್ಟ್ ಮ್ಯಾಚ್ ಗೆದ್ದು ಟೂರ್ನಿ ಆರಂಭ ಮಾಡ್ತಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಸತತ 14 ವರ್ಷಗಳ ಬಳಿಕ ಮೊದಲ ಮ್ಯಾಚ್ ವಿನ್ ಆಗಿದ್ದು. ಆದ್ರೆ ಮೊದಲ ಪಂದ್ಯ ಅಷ್ಟೇ ಗೆದ್ದಿದ್ದು. ಆ ನಂತ್ರ ಡೆಲ್ಲಿ ಮತ್ತು ರಾಜಸ್ಥಾನ ವಿರುದ್ಧ 2 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಇತ್ತ ಆರ್​ಸಿಬಿ ಮೊದಲ ಎರಡು ಪಂದ್ಯಗಳನ್ನ ಗೆದ್ದು ಮೂರನೇ ಮ್ಯಾಚಲ್ಲಿ ರಾಜಸ್ಥಾನ ವಿರುದ್ಧ ಸೋತು ಈ ಪಂದ್ಯಕ್ಕೆ ಸಿದ್ಧವಾಗಿದೆ.

ಬೆಂಗಳೂರು ತಂಡದ ಬಲಾಬಲ!

ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ.. 3ನೇ ಮ್ಯಾಚ್ ಸೋಲು

ಮೂರೂ ಪಂದ್ಯಗಳಲ್ಲೂ 200+ ರನ್ಸ್ ಗಳನ್ನ ಕಲೆ ಹಾಕಿರೋ ಆರ್ ಸಿಬಿ

ಬ್ಯಾಟಿಂಗ್ ಡೆಪ್ತ್ ಚೆನ್ನಾಗಿದೆ, ಫಿನಿಶಿಂಗ್ ರೋಲ್ ಮುಂಬೈಗಿಂತ ಬೆಟರ್

ಆರ್ ಸಿಬಿಗೆ ಈ ಸಲ ದೊಡ್ಡ ಟೆನ್ಷನ್ ಅಂದ್ರೆ ಬೌಲಿಂಗ್ ನಲ್ಲಿ ಸ್ವಲ್ಪ ಡಲ್

ಅಭಿನಂದನ್ ಸಿಂಗ್ ಕಡೆಯಿಂದ ಅಂದುಕೊಂಡಂತ ಸಾಥ್ ಸಿಕ್ಕಿಲ್ಲ

ಸೋ ಇದಿಷ್ಟು ಆರ್​ಸಿಬಿಗೆ ಇರೋ ಅಡ್ವಾಂಟೇಜ್ ಮತ್ತು ಡಿಸ್ ಅಡ್ವಾಂಟೇಜ್. ಅತ್ತ ಮುಂಬೈ ಟೀಂ ಈ ಸಲ ಕೂಡ ಸ್ಟ್ರಗಲ್ಸ್ ಕಂಡಿದೆ. ಕೆಕೆಆರ್ ವಿರುದ್ಧ ಗೆದ್ದಿದ್ದು ಬಿಟ್ರೆ ಆ ನಂತ್ರ ಡೆಲ್ಲಿ ಮತ್ತು ರಾಜಸ್ಥಾನ ವಿರುದ್ಧ ಸೋತು ಅವ್ರೂ ಕೂಡ ಕಂ ಬ್ಯಾಕ್ ಮಾಡೊಕೆ ಕಾಯ್ತಾ ಇರ್ತಾರೆ.

ಮುಂಬೈನಲ್ಲಿ ಬದಲಾವಣೆ ಪಕ್ಕಾ!

ಸೂಪರ್ ಸ್ಟ್ರಾಂಗ್ ಆಗಿರೋ ಆರ್​ ಸಿಬಿಯನ್ನ ಎದುರಿಸಲು ಪ್ಲ್ಯಾನ್

ರಿಯಾನ್ ರಿಕಲ್ಟನ್ ಕಡೆಯಿಂದ ಕಳೆದ 2 ಪಂದ್ಯ ರನ್ಸ್ ಬಂದಿಲ್ಲ

ಕ್ವಿಂಟನ್ ಡಿ ಕಾಕ್ ರಿಕಲ್ಟನ್ ಗಿಂತ ಹೆಚ್ಚು ಅನುಭವಿ ಬ್ಯಾಟ್ಸ್‌ ಮನ್

ಮಿಚೆಲ್ ಸ್ಯಾಂಟ್ನರ್ ಬದಲಿಗೆ ಅಲ್ಲಾ ಗಜನ್‌ ಫರ್ ಸ್ಪಿನ್ನರ್ ಆಗಿ ಆಯ್ಕೆ

ಸ್ಯಾಂಟ್ನರ್ ಅನುಭವಿ ಸ್ಪಿನ್ನರ್,  ಬ್ಯಾಟಿಂಗ್‌ ನಲ್ಲಿಯೂ ಸಾಥ್

ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಜೋಡಿ ತುಂಬಾ ದುಬಾರಿ

ಬುಮ್ರಾ ಮತ್ತು ಬೌಲ್ಟ್ ಆರ್ ​ಸಿಬಿ ವಿರುದ್ಧದ ಮ್ಯಾಚಲ್ಲಿ ಕಂ ಬ್ಯಾಕ್ ಯತ್ನ

ಌಕ್ಚುಲಿ ಎರಡೂ ತಂಡಗಳಲ್ಲೂ ಕ್ವಾಲಿಟಿ ಪ್ಲೇಯರ್ಗಳೇ ಇದ್ದಾರೆ. ಅದ್ರಲ್ಲೂ ಮುಂಬೈ ಇಂಡಿಯನ್ಸ್ ತಂಡದಲ್ಲಂತೂ ಟೀಂ ಇಂಡಿಯಾ ಆಟಗಾರರ ದಂಡೇ ಇದೆ. ವರ್ಲ್ಡ್ ಕ್ಲಾಸ್ ಬ್ಯಾಟರ್ಸ್, ವರ್ಲ್ಡ್ ಕ್ಲಾಸ್ ಬೌಲರ್ಸ್ ಕೂಡ ಇದ್ದು ಅವ್ರೂ ಕೂಡ ಗೆಲುವಿಗಾಗಿ ಕಾಯ್ತಾ ಇದ್ದಾರೆ.

Shantha Kumari