ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ – ಅದೆಷ್ಟು ಮೊದಲುಗಳಿಗೆ ಸಾಕ್ಷಿಯಾಯ್ತು ಗಣತಂತ್ರ..?

ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ – ಅದೆಷ್ಟು ಮೊದಲುಗಳಿಗೆ ಸಾಕ್ಷಿಯಾಯ್ತು ಗಣತಂತ್ರ..?

ದೇಶಾದ್ಯಂತ ಇಂದು 74ನೇ ಗಣರಾಜ್ಯೋತ್ಸವ ಸಂಭ್ರಮದಿಂದ ನೆರವೇರಿದ್ದು, ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಮರ್ ಜವಾನ್ ಜ್ಯೋತಿಗೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಬಳಿಕ ಇದೇ ಮೊದಲ ಬಾರಿಗೆ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದ್ದು, ಪ್ರಧಾನಿ ಮೋದಿ, ಕೇಂದ್ರ ಸಚಿವರು ಸೇರಿದಂತೆ ಹಲವರು ಭಾಗಿಯಾಗಿದ್ರು.

ಇದನ್ನೂ ಓದಿ : ಕಾವೇರಿ, ಕಾಳಿ, ಕುಮಾರಧಾರ ಸೇರಿ 17 ನದಿಗಳ ನೀರು ಕುಡಿಯಲು ಯೋಗ್ಯವಲ್ಲ..!

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾ ಅಲ್ ಸಿಸಿ ಮುಖ್ಯ ಅತಿಥಿಯಾಗಿ ಆಗಮಿಸಿದ್ರು. ಹಾಗೇ ಈಗಿಪ್ಟ್​ನ ಸೇನಾ ತುಕಡಿಯ ತಂಡವೂ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. ಈ  ಸಲ ಸಾಮಾನ್ಯ ಜನರಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಧ್ವಜಾರೋಹಣ ನೆರವೇರುತ್ತಿದ್ದಂತೆ ಆಕರ್ಷಕ ಪರೇಡ್ ಆರಂಭವಾಗಿತ್ತು. ದೇಶದ ಮಿಲಿಟರಿ ಶಕ್ತಿಯನ್ನ ತೋರಿಸಲಾಯ್ತು. ಮಿಲಿಟರಿ ಹಾಗೂ ಪ್ಯಾರಾ ಮಿಲಿಟರಿ ಪಡೆಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ವು. ಹಾಗೇ ವಿವಿಧ ರೆಜಿಮೆಂಟ್​ಗಳು ಸಹ ಪರೇಡ್​ನಲ್ಲಿ ಸಾಹಸ ತೋರಿದ್ವು.

ಪರೇಡ್ ವೇಳೆ ಭಾರತೀಯ ವಾಯುಪಡೆಯ ತಂಡವನ್ನು ಬೆಂಗಳೂರು ಮೂಲದ ಸಿಂಧೂ ರೆಡ್ಡಿ ಮುನ್ನಡೆಸಿದರೆ, ಭಾರತೀಯ ನೌಕಾಪಡೆಯ ತಂಡವನ್ನು ಮಂಗಳೂರು ಮೂಲದ ದಿಶಾ ಅಮೃತ್‌ ಮುನ್ನಡೆಸಿದ್ದು ಕರ್ನಾಟಕದ ಹೆಮ್ಮೆಯಾಗಿತ್ತು. 44 ವರ್ಷ ಸೇವೆ ಸಲ್ಲಿಸಿದ ಭಾರತೀಯ ನೌಕಾಪಡೆಯ ಈ IL- 38 ವಿಮಾನವು ಈ ವರ್ಷದ ಗಣರಾಜ್ಯೋತ್ಸವದಂದು ಮೊದಲ ಮತ್ತು ಕೊನೆಯ ಬಾರಿಗೆ ಹಾರಾಟ ನಡೆಸಿತು. ಕರ್ತವ್ಯ ಪಥದಲ್ಲಿ ಭಾರತೀಯ ವಾಹುಪಡೆಯ 50 ವಿಮಾನಗಳು ಮತ್ತು ಮೂರೂ ಪಡೆಗಳ ಹೆಲಿಕಾಪ್ಟರ್ ಗಳ ಫ್ಲೈಪಾಸ್ಟ್ ಮತ್ತು ವೈಮಾನಿಕ ಪ್ರದರ್ಶನ ಎಲ್ಲರನ್ನೂ ಬೆರಗುಗೊಳಿಸಿತ್ತು.

ಸೇನಾ ಪರೇಡ್ ಬಳಿಕ ಕರ್ನಾಟಕ ಸೇರಿ 17 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೂ ಪ್ರದರ್ಶನ ನಡೆಯಿತು. ಈ ಬಾರಿಯ ಕರ್ನಾಟಕದ ಟ್ಯಾಬ್ಲೂ ವಿಶೇಷತೆ  ನಾರಿ ಶಕ್ತಿಯಾಗಿತ್ತು. ಸೂಲಗಿತ್ತಿ ನರಸಮ್ಮ, ಹಾಲಕ್ಕಿ ಸಮುದಾಯದ ತುಳಸಿ ಗೌಡ ಹಾಗೂ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಈ ಬಾರಿ ಟ್ಯಾಬ್ಲೂನಲ್ಲಿ ದೇಶದ ಜನತೆಯ ಎದುರು ಪ್ರದರ್ಶಿಸಲಾಗಿದ್ದು, ಹಲವರ ಗಮನ ಸೆಳೆದಿದೆ.

ಈ ಸಲದ ಗಣತಂತ್ರದಲ್ಲಿ ಪ್ರಧಾನಿ ಮೋದಿಯವರ ಡ್ರೆಸ್ ಕೂಡ ಎಲ್ಲರ ಗಮನ ಸೆಳೆದಿತ್ತು. ಬಿಳಿ ಕುರ್ತಾ, ಕಪ್ಪು ಕೋಟ್ ಮತ್ತು ಪ್ಯಾಂಟ್ ಜೊತೆಗೆ ಬಿಳಿ ಶಾಲು ಧರಿಸಿದ್ರು. ಹಾಗೇ ಭಾರತದ ವೈವಿಧ್ಯತೆಯನ್ನ ಸಂಕೇತಿಸುವ ಬಹುಬಣ್ಣದ ರಾಜಸ್ಥಾನಿ ಪೇಟ ಧರಿಸಿದ್ದು ವಿಶೇಷವಾಗಿತ್ತು.

suddiyaana