ವಾಂಖೆಡೆಯಲ್ಲಿ ಪಾಂಡ್ಯ ಬ್ರದರ್ಸ್ ಫೈಟ್! – RCB Vs MI.. ಡಾಮಿನೇಟ್ ಮಾಡೋದ್ಯಾರು?
ಸೂಪರ್ ಸಂಡೇ ಅಣ್ಣನಿಗಾ.. ತಮ್ಮನಿಗಾ?

ಮುಂಬೈನ ವಾಂಖೆಡೆ ಸ್ಪೇಡಿಯಂ ಬ್ರದರ್ಸ್ ಕದಾಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಆರ್ಸಿಬಿ Vs ಮುಂಬೈ ಇಂಡಿಯನ್ಸ್ ಪಂದ್ಯ ಅನ್ನೋದ್ದಕ್ಕಿಂತ ಹೆಚ್ಚಾಗಿ ಅಣ್ಣ Vs ತಮ್ಮನ ಕಾಳಗವಾಗಿದೆ. ಹೌದು ಒಡ ಹುಟ್ಟಿದವರಾದ ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಇಂದಿನ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಐಪಿಎಲ್ನಲ್ಲಿ ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮುಖಾಮುಖಿ ಪಂದ್ಯಗಳು ಯಾವಾಗಲೂ ರೋಮಾಂಚನಕಾರಿ. 2021ರ ತನಕ ಮುಂಬೈ ಇಂಡಿಯನ್ಸ್ಗಾಗಿ ಜೊತೆಯಾಗಿ ಆಡಿದ್ದ ಪಾಂಡ್ಯ ಸಹೋದರರು, ಈಗ ಬೇರೆ ಬೇರೆ ತಂಡಗಳಲ್ಲಿದ್ದು ಸಹೋದರರ ಪೈಪೋಟಿ ಜೋರಾಗಿದೆ ಅಂತನೇ ಹೇಳಬಹುದು.
ಇಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಉಗ್ರ ರೂಪದಲ್ಲಿ ಮುಂಬೈ ಪರ ದಾಳಿ ನಡೆಸಿದ್ರೆ, ಮತ್ತೊಂದೆಡೆ ಶಾಂತ ಮತ್ತು ಲೆಕ್ಕಾಚಾರದ ಆಟ ಆಡೋ ಕೃನಾಲ್ ಪಾಂಡ್ಯ ಆರ್ಸಿಬಿಯ ಶಕ್ತಿಯಾಗಿದ್ದಾರೆ. ಆದ್ರೆ ಕೃನಾಲ್ ಪಾಂಡ್ಯ ಎದುರು ಹಾರ್ದಿಕ್ ಪಾಂಡ್ಯ ಹೆಚ್ಚಾಗಿ ಮೇಲುಗೈ ಸಾಧಿಸಿದ್ದಾರೆ. ಕೃನಾಲ್ ಬೌಲಿಂಗ್ನಲ್ಲಿ ಹಾರ್ದಿಕ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿರುವುದು ಐಪಿಎಲ್ನಲ್ಲಿ ಸಾಮಾನ್ಯವಾಗಿದೆ.
ಇದನ್ನೂ ಓದಿ: ಭಾರತೀಯ ಕರಾವಳಿ ಕಾವಲು ಪಡೆ ಸೇರಿದ HAL ನಿರ್ಮಾಣ ಮಾಡಿದ HMK III ಹೆಲಿಕಾಪ್ಟರ್
ಕೃನಾಲ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಸ್ಪಿನ್ ಮೂಲಕ ತಂಡಕ್ಕೆ ಸ್ಥಿರತೆ ನೀಡಿದರೆ, ಹಾರ್ದಿಕ್ ವೇಗದ ಬೌಲಿಂಗ್ ಮತ್ತು ಪವರ್-ಹಿಟ್ಟಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸುತ್ತಾರೆ. 2025ರ ಐಪಿಎಲ್ ಪಂದ್ಯವೊಂದರಲ್ಲಿ, ಕೃನಾಲ್ ಪಾಂಡ್ಯ ವಿರುದ್ಧ ಹಾರ್ದಿಕ್ ಪಾಂಡ್ಯ ಆಕ್ರಮಣಕಾರಿ ಆಟ ಪ್ರದರ್ಶಿಸಿ ಮುಂಬೈ ತಂಡಕ್ಕೆ ಭರವಸೆ ಮೂಡಿಸಿದ್ದರು. ಆದ್ರೆ ಆ ಪಂದ್ಯ RCB ಗೆದ್ದಿತು. ಕೃನಾಲ್ ಅವರ ಬೌಲಿಂಗ್ ಮತ್ತು ಆಟವು ನಿರ್ಣಾಯಕವಾಗಿತ್ತು. ಈ ಇಬ್ಬರು ಆಟಗಾರರು ತಮ್ಮ ತಮ್ಮ ತಂಡಗಳಿಗೆ ಅಮೂಲ್ಯ ಆಲ್-ರೌಂಡರ್ಗಳಾಗಿದ್ದು, ಅಣ್ಣ ತಮ್ಮನ ಫೈಟ್ ಐಪಿಎಲ್ನ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿರಲಿದೆ. ಆದ್ರೆ ಇಬ್ಬರು ಬೇರೆ ಬೇರೆ ತಂಡಕ್ಕೆ ಆಡಿದ್ರೂ ಮೈದಾನದಲ್ಲಿ ಅಣ್ಣ ತಮ್ಮನಂತೆ ಇದ್ದರು, ಒಬ್ಬರ ಗೆಲುವನ್ನ ಇನ್ನೊಬ್ಬರು ಸಂಭ್ರಮಿಸುತ್ತಿದ್ದರು..
ಕಳೆದ ಸೀಸನ್ನಲ್ಲಿ ಫೈನಲ್ನಲ್ಲಿ ಆರ್ಸಿಬಿ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಕಣ್ಣೀರು ಸುರಿಸಿದರು. ಕೃನಾಲ್ ಅವರನ್ನು ಫೋನ್ ಮಾಡಿ ಮಾತನಾಡಿದರು. ಹಾರ್ದಿಕ್ ಕೈನಾನ್ಲ್ಗೆ ಫೋನ್ ಮಾಡಿ ಮನೆಯಲ್ಲಿ 11 ವರ್ಷಗಳಲ್ಲಿ 9 ಐಪಿಎಲ್ ಟ್ರೋಫಿಗಳು ಇರುತ್ತವೆ ಅಂತ ಹೇಳಿದ್ರಂತೆ. ಅಲ್ಲದೇ ಹಾರ್ದಿಕ್ ಇನ್ಸ್ಟಾಗ್ರಾಮ್ನಲ್ಲಿ ಕೃನಾಲ್ಗೆ ಅಭಿನಂದನೆ ಸಲ್ಲಿಸಿದರು. ಅಷ್ಟೇ ಕೃನಾಲ್ ಟ್ರೋಫಿ ಜೊತೆ ಹಾರ್ದಿಕ್ ಅವರು ಐಕಾನಿಕ್ ಪೋಸ್ ಕೊಟ್ಟಿದ್ರು. ಹಾರ್ದಿಕ್ ಮಗನ ಜೊತೆ ಕೃನಾಲ್ ಕೂಡ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಹಾರ್ದಿಕ್ ಪಾಂಡ್ಯ ಜೀವನದಲ್ಲಿ ಮಹಿಕಾ ಶರ್ಮಾ ಬಂದ ಮೇಲೆ ಎಲ್ಲಾ ಬದಲಾಗಿದೆ. ಅಣ್ಣ ತಮ್ಮ ದೂರ ದೂರ ಆಗಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಒಂದು ವರ್ಷದಿಂದ ಇವರಿಬ್ಬರು ಕೊಟ್ಟಿಗೆ ಕಾಣಿಸಿಕೊಂಡಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಒಬ್ಬರ ಬಗ್ಗೆ ಇನ್ನೊಬ್ಬರು ಯಾವುದೇ ಪೋಸ್ಟ್ ಕೂಡ ಹಾಕಿಲ್ಲ. ಆದ್ರೆ ಇವತ್ತು ಒಂದೇ ಮೈದಾನದಲ್ಲಿ ಇವರಿಬ್ಬರು ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದು, ಇವರಿಬ್ಬರು ಪಿಚ್ನಲ್ಲಿ ಹೇಗಿರಲಿದ್ದಾರೆ, ಹೇಗೆ ಆಡಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ..
ಪಾಂಡ್ಯ ಬ್ರದರ್ಸ್ IPL ಸ್ಕೋರ್ ಕಾರ್ಡ್
ವಿವರ ಹಾರ್ದಿಕ್ ಪಾಂಡ್ಯ ಕೈನಾಲ್ ಪಾಂಡ್ಯ
ಪಂದ್ಯ 154+ 144+
ರನ್ 2776+ 1755 +
ವಿಕೆಟ್ 156+ 95+

ನೋಡಿರಿ

