ಕಚಗುಳಿ ಇಡುವಾಗ ನಗು ಬರುತ್ತಾ? – ನಗು, ಸಿಟ್ಟು ಸುಮ್ಮನೆ ಬರೋದಿಲ್ಲ.. ಇದಕ್ಕೂ ಕಾರಣವಿದೆ!

ಕಚಗುಳಿ ಇಡುವಾಗ ನಗು ಬರುತ್ತಾ? – ನಗು, ಸಿಟ್ಟು ಸುಮ್ಮನೆ ಬರೋದಿಲ್ಲ.. ಇದಕ್ಕೂ ಕಾರಣವಿದೆ!

ಸಾಮಾನ್ಯವಾಗಿ ನಮ್ಮ ಸ್ನೇಹಿತರಿಗೆ ಮಕ್ಕಳಿಗೆ ಕಚಗುಳಿ ಇಟ್ಟು ನಗು ತರಿಸುತ್ತೇವೆ..  ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳವರೆಗೂ ಕಚಗುಳಿ ಮಾಡಿದ್ರೆ ಜೋರಾದ ನಗು ಬರುತ್ತದೆ.  ಆದರೆ ಈ ಕಚಗುಳಿ ಇಟ್ಟಾಗ ನಗು ಯಾಕೆ ಬರುತ್ತೆ? ಸಡನ್ ಆಗಿ ಯಾಕೆ ಸಿಟ್ಟು ಬರುತ್ತೆ ಅನ್ನೋದ್ರ ಬಗ್ಗೆ ನಾವು ಯೋಚಿಸೋಕೆ ಹೋಗೋದಿಲ್ಲ.. ಕಚಗುಳಿ ಇಡುವಾಗ ನಗು ಬರೋದಿಕ್ಕೂ ಒಂದು ಕಾರಣವಿದೆ.

ಇದನ್ನೂ ಓದಿ: ತಾಂಡವ್ ಬದುಕಿಗೆ ಭಾಗ್ಯಲಕ್ಷ್ಮಿ ಬಂದು 10 ವರ್ಷಗಳು – ಸುದರ್ಶನ್ ಮತ್ತು ಸಂಗೀತಾ ದಾಂಪತ್ಯಗೀತೆ

ನಿಮ್ಮ ಸ್ವಂತ ಕೈಗಳಿಂದ ನೀವು ಕಚಗುಳಿ ಇಟ್ಟುಕೊಂಡರೆ ನಗು ಬರುವುದಿಲ್ಲ ಎಂಬುದನ್ನು ನೀವು ಗಮನಿಸಿದ್ದೀರಾ? ನಿಮ್ಮ ಕೈಗಳಿಂದ ನಿಮ್ಮ ದೇಹವನ್ನು ಸ್ಪರ್ಶಿಸಲು ನೀವು ಪ್ರಯತ್ನಿಸಿದಾಗ, ನೀವು ನಗುವುದಿಲ್ಲ! ಯಾಕೆ ಹೀಗಾಗುತ್ತಿದೆ, ಅದರ ಹಿಂದಿನ ಕಾರಣ ಏನು..? ಕಚಗುಳಿ ಇಡುವುದರಿಂದ ನಗು ಬರಲು ಕಾರಣವೇನು ಗೊತ್ತಾ? ಕೆಲವ್ರಿಗೆ ಕಚಗುಳಿ ಇಟ್ಟಾಗ ಜೋರಾಗಿ ನಗು ಬಂದ್ರೆ, ಇನ್ನೂ ಕೆಲವರಿಗೆ ಸಿಟ್ಟು ಬರುತ್ತೆ. ಹೀಗೆ ನಗು ಮತ್ತು ಕೋಪ ಬರುವುದರ ಹಿಂದೆ ವೈಜ್ಞಾನಿಕ ಕಾರಣವಿದೆ.

ನರವಿಜ್ಞಾನಿಗಳು ಹೇಳುವ ಪ್ರಕಾರ, ನಮ್ಮ ಮೆದುಳಿನ ಎರಡು ಭಾಗಗಳೇ ಕಚಗುಳಿ ಇಡುವ ಸಂವೇದನೆಗೆ ಕಾರಣವಾಗಿವೆ. ಮೊದಲನೆಯದು ಸೊಮಾಟೊಸೆನ್ಸರಿ ಕಾರ್ಟೆಕ್ಸ್. ಇದು ಸ್ಪರ್ಶವನ್ನು ಗ್ರಹಿಸುವ ಭಾಗವಾಗಿದೆ. ಎರಡನೆಯದು ಮೆದುಳಿನ ಮುಂಭಾಗದ ಸಿಂಗ್ಯುಲೇಟ್ ಕಾರ್ಟೆಕ್ಸ್. ಇದು ಸಂತೋಷ, ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಕೆಲಸ ಮಾಡುತ್ತದೆ. ನಮಗೆ ಕಚಗುಳಿ ಇಟ್ಟಾಗ ಮೆದುಳಿನ ಹೈಪೋಥಾಲಮಸ್ ಪ್ರದೇಶವು ಮೃದುವಾದ ಸ್ಪರ್ಶವನ್ನು ಅನುಭವಿಸಿದಾಗ ನಗುವ ಆಜ್ಞೆಯನ್ನು ನೀಡುತ್ತದೆ. ತೋಳುಗಳ ಕೆಳಗೆ, ಗಂಟಲಿನ ಬಳಿ ಮತ್ತು ಪಾದದ ಕೆಳಗೆ, ಸೊಂಟದ ಭಾಗದಲ್ಲಿ ಕಚಗುಳಿ ಮಾಡಿದಾಗ ನಗುಬರುತ್ತದೆ. ಅದಕ್ಕೆ ಕಚಗುಳಿ ಇಟ್ಟಾಗ ಕೂಗಿ, ಕುಣಿದು ಕುಪ್ಪಳಿಸುತ್ತೇವೆ. ಕೆಲವರು ಕಚಗುಳಿ ಇಡುವುದನ್ನು ಇಷ್ಟಪಡುವುದಿಲ್ಲ. ಅವರಲ್ಲಿನ ನರಗಳು ತೀವ್ರವಾದ ಒತ್ತಡದಲ್ಲಿರುತ್ತವೆ. ಹೀಗಾಗಿ ಕೋಪವನ್ನು ತರಿಸುತ್ತವೆ. ಇನ್ನು ನಮಗೆ ನಾವೇ ಕಚಗುಳಿ ಇಡುವಂತಿಲ್ಲ. ಮಿದುಳಿನ ಹಿಂಭಾಗದಲ್ಲಿರುವ ಸೆರೆಬೆಲ್ಲಮ್ ನಿಮಗೆ ನೀವೇ ಸ್ಕ್ರಾಚ್ ಮಾಡಲಿದ್ದೀರಿ ಎಂದು ಮುಂಚಿತವಾಗಿ ಸಂಕೇತಿಸುತ್ತದೆ. ಇದರಿಂದಾಗಿ ಮೆದುಳು ಸರಿಯಾದ ಸಂಕೇತಗಳನ್ನು ನೀಡುವುದಿಲ್ಲ. ಇದ್ರಿಂದಾಗಿ ನಮಗೆ ನಾವು ಕಚಗುಳಿ ಇಟ್ಟಾಗ  ನಗು ಬರೋದಿಲ್ಲ.

Shwetha M