ಪಡಿಕ್ಕಲ್ ಫೈಯರ್.. ಡೇವಿಡ್ ಡೇಂಜರ್ – ₹11 ಕೋಟಿ ವೀರರೇ ಮ್ಯಾಚ್ ವಿನ್ನರ್ಸ್
SMART ಬಿಡ್ಡಿಂಗ್ ನಲ್ಲೇ ಗೆದ್ದ RCB

2025ರ ಮೆಗಾ ಆಕ್ಷನ್ನಲ್ಲಿ 27 ಕೋಟಿವರೆಗೆ ಬಿಡ್.. 2026ರ ಐಪಿಎಲ್ ಮಿನಿ ಆಕ್ಷನ್ನಲ್ಲಿ 25 ಕೋಟಿಯನ್ನೂ ಮೀರಿದ ಬಿಡ್.. ಹೀಗೆ ಐಪಿಎಲ್ನಲ್ಲಿ ಕೆಲ ಪ್ಲೇಯರ್ಸ್ ತುಂಬಾನೇ ಎಕ್ಸ್ಪೆನ್ಸಿವ್ ಆಗಿಬಿಟ್ಟಿದ್ದಾರೆ. ಒಂದೊಂದು ಪಂದ್ಯಕ್ಕೂ ಕೋಟಿ ಕೋಟಿ ಸಂಭಾವನೆ ಪಡೀತಿದ್ದಾರೆ.. ಆದ್ರೆ ಆ ಕೋಟಿಗೆ ತಕ್ಕಂತೆ ಪರ್ಫಾಮ್ ಮಾಡ್ತಿದ್ದಾರಾ ಅಂದ್ರೆ ಕೆಲವ್ರು ಓಕೆ ಇನ್ನೂ ಕೆಲವ್ರದ್ದು ಫ್ಲ್ಯಾಪ್ ಶೋ. ಹೀಗೆ ಎದ್ವಾತದ್ವಾ ಹಣ ಸುರಿದ ಫ್ರಾಂಚೈಸಿಗಳು ಕೈಕೈ ಹಿಸುಕಿಕೊಳ್ತಿದ್ರೆ ಆರ್ಸಿಬಿ ಕಡಿಮೆ ದುಡ್ಡಲ್ಲೇ ಕ್ವಾಲಿಟಿ ಪ್ಲೇಯರ್ಗಳನ್ನೇ ಪಿಕ್ ಮಾಡಿ ಗೆದ್ದು ಬೀಗ್ತಿದೆ. ಅದ್ರಲ್ಲೂ 11.1 ಕೋಟಿಯಲ್ಲೇ ಈ ಐದು ಪ್ಲೇಯರ್ಗಳು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ.
ಇದನ್ನೂ ಓದಿ : ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ನ್ಯೂಸ್! – ಇನ್ಮುಂದೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್ನ ಸಾಲಿಡ್ ಆಗೇ ಸ್ಟಾರ್ಟ್ ಮಾಡಿದೆ. ಮುಂಬೈ ವಿರುದ್ಧ ಇವತ್ತು ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿಯಾಗಿ ಗೆದ್ದಿದ್ದ ಬೆಂಗಳೂರು ಟೀಂ ಮೂರನೇ ಮ್ಯಾಚಲ್ಲಿ ರಾಜಸ್ಥಾನ ವಿರುದ್ಧ ಸೋತಿದೆ. ಆದ್ರೆ ಟಫ್ ಫೈಟ್ ಕೊಟ್ಟೇ ಸೋತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಆರ್ಸಿಬಿಯ ಈ ಸಕ್ಸಸ್ಫುಲ್ ಜರ್ನಿಗೆ ಕಾರಣವೇ ಫ್ರಾಂಚೈಸಿಯ ಸ್ಮಾರ್ಟ್ ಮೂವ್. ಬೇರೆಲ್ಲಾ ತಂಡಗಳ ಮಾಲೀಕರು ಸ್ಟಾರ್ ಪ್ಲೇಯರ್ಸ್ ಅಂತಾ ಇದ್ದಬದ್ದ ದುಡ್ಡನ್ನೆಲ್ಲಾ ಒಬ್ಬೊಬ್ರ ಮೇಲೇ ಇನ್ವೆಸ್ಟ್ ಮಾಡಿದ್ರು. ಆದ್ರೆ ಬೆಂಗಳೂರು ಮಾತ್ರ ಟ್ಯಾಲೆಂಟೆಡ್ ಪ್ಲೇಯರ್ಗಳ ಮೇಲೆ ಬಿಡ್ ಮಾಡಿತ್ತು. ಅದೂ ಕೂಡ ಕಡಿಮೆ ಮೊತ್ತಕ್ಕೆ. ಅದ್ರಂತೆ ಈಗ 11 ಕೋಟಿಯ ಆಟಗಾರರೇ ಬೆಂಗಳೂರು ಗೆಲುವಿಗೆ ಕಾರಣ ಆಗ್ತಿದ್ದಾರೆ. ಬೇರೆ ಬೇರೆ ತಂಡಗಳ ದುಬಾರಿ ಆಟಗಾರರಿಗಿಂತ ಹತ್ತು ಪಟ್ಟು ಬೆಟರ್ ಪರ್ಫಾಮೆನ್ಸ್ ನೀಡ್ತಿದ್ದಾರೆ.
ಟಿಮ್ ಡೇವಿಡ್ ಮತ್ತು ಪಡಿಕ್ಕಲ್ ಬ್ಯಾಟಿಂಗ್ ಇಂಪ್ಯಾಕ್ಟ್!
ಆರ್ಸಿಬಿ ಪರ ಮೊದಲ ಎರಡು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬಂದಿದ್ದೇ ಇವ್ರಿಂದ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, ಟಿಮ್ ಡೇವಿಡ್ ಮತ್ತು ದೇವದತ್ ಪಡಿಕ್ಕಲ್ ಆರ್ಸಿಬಿ ತಂಡದ ಗೆಲುವಿನಲ್ಲಿ ಬಿಗ್ ರೋಲ್ ಪ್ಲೇ ಮಾಡಿದ್ರು. ಇಬ್ಬರೂ ಅರ್ಧಶತಕಗಳನ್ನು ದಾಖಲಿಸಿ ತಂಡವನ್ನು ಅದ್ಭುತ ಸ್ಕೋರ್ನತ್ತ ಸಾಗಿಸಿದ್ರು. ಪಡಿಕ್ಕಲ್ 29 ಎಸೆತಗಳಲ್ಲಿ 50 ರನ್ ಗಳಿಸಿ ಒಳ್ಳೆ ಸ್ಟಾರ್ಟ್ ಕೊಟ್ಟಿದ್ರು. ಅತ್ತ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ ಅಜೇಯ 70 ರನ್ ಗಳಿಸುವ ಮೂಲಕ 250 ಸ್ಕೋರ್ ಆಗುವಂತೆ ಮಾಡಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಆರ್ಸಿಬಿ ಫ್ರಾಂಚೈಸಿ ಟಿಮ್ ಡೇವಿಡ್ರನ್ನ 2025ರ ಮೆಗಾ ಹರಾಜಿನಲ್ಲಿ 3 ಕೋಟಿಗೆ ಖರೀದಿ ಮಾಡಿದೆ. ಌಂಡ್ ಪಡಿಕ್ಕಲ್ ಗೆ 2 ಕೋಟಿ ರೂಪಾಯಿ ಸಂಭಾವನೆ ನೀಡ್ತಿದೆ. ಇಬ್ಬರೂ ಕೂಡ ಪವರ್ ಹಿಟ್ಟಿಂಗ್ ಬ್ಯಾಟಿಂಗ್ಗೆ ಹೆಸರಾಗಿದ್ದು ಇಬ್ಬರಿಂದ ಕೊಡ್ತಿರೋದೇ 5 ಕೋಟಿ ಸಂಭಾವನೆ.
ಜೇಕಬ್ ಡಫಿ ಮತ್ತು ಶೆಫರ್ಡ್ ಬೌಲಿಂಗ್ ಬೊಂಬಾಟ್!
ಇನ್ನು ಈ ಸೀಸನ್ನಲ್ಲಿ ಆರ್ಸಿಬಿ ಸೂಪರ್ ಸ್ಟಾರ್ಟ್ ಹಿಂದಿನ ಅತಿದೊಡ್ಡ ಶಕ್ತಿಯೇ ಜೇಕಬ್ ಡಫಿ. ನ್ಯೂಜಿಲೆಂಡ್ ಮೂಲದ ಡಫಿ ಪವರ್ ಪ್ಲೇನಲ್ಲೇ ವಿಕೆಟ್ ಟೇಕರ್ ಎದುರಾಳಿ ಟಾಪ್ ಆರ್ಡರ್ ಬ್ಯಾಟಿಂಗ್ನ ಕಟ್ಟಿ ಹಾಕ್ತಿದ್ದಾರೆ. 2026ರ ಐಪಿಎಲ್ಗೂ ಮುನ್ನ ನಡೆದಿದ್ದ ಐಪಿಎಲ್ ಮಿನಿ ಆಕ್ಷನ್ನಲ್ಲಿ ಆರ್ಸಿಬಿ ಖರೀದಿ ಮಾಡಿದ್ದ ಜೇಕಬ್ ಡಫಿ ಹೈದರಾಬಾದ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ತಮ್ಮ 4 ಓವರ್ಗಳ ಸ್ಪೆಲ್ನಲ್ಲಿ 22 ರನ್ಗಳಿಗೆ 3 ವಿಕೆಟ್ಗಳನ್ನು ಪಡೆಯುವ ಮೂಲಕ SRH ಬ್ಯಾಟಿಂಗ್ ಲೈನಪ್ನೇ ಕಟ್ಟಿಹಾಕಿದ್ರು. ಇನ್ನು ಸಿಎಸ್ಕೆ ವಿರುದ್ಧದ ಮ್ಯಾಚಲ್ಲಿ ಎಕ್ಸ್ಪೆನ್ಸಿವ್ ಅನ್ಸಿದ್ರೂ ಇಬ್ಬರು ಓಪನರ್ಗಳಿಗೆ ಪೆವಿಲಿಯನ್ ದಾರಿ ತೋರಿಸಿತ್ತು. ಇನ್ನು ಆರ್ಸಿಬಿ ಪರ ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಪಡೀತಿರೋ ರೊಮಾರಿಯೊ ಶೆಫರ್ಡ್ ಫಸ್ಟ್ ಮ್ಯಾಚಲ್ಲಿ ತಮ್ಮ 4 ಓವರ್ಗಳಲ್ಲಿ 3 ವಿಕೆಟ್ಗಳನ್ನು ಬೇಟೆಯಾಡಿದ್ರು. ಸೋ ಅಲ್ಲಿಗೆ ಇವ್ರಿಬ್ರು ಸ್ಟಾರ್ ಪ್ಲೇಯರ್ಸ್ ಪಡೀತಾ ಇರೋ ಸಂಭಾವನೆ ಮೂರೂವರೆ ಕೋಟಿ ರೂಪಾಯಿ ಮಾತ್ರ.
ಇಂಗ್ಲೆಂಡ್ ನ ಸ್ಟಾರ್ ಬ್ಯಾಟರ್ ಬೆಥೆಲ್ ಗೆ 2.60 ಕೋಟಿ!
ಇನ್ನು ಇಷ್ಟೇ ಅಲ್ಲದೆ ಆರ್ಸಿಬಿಯ ಮತ್ತೊಂದು ಪವರ್ಫುಲ್ ಬಿಡ್ಡಿಂಗ್ ಅಂದ್ರೆ ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಜಾಕೋಬ್ ಬೆಥೆಲ್ ಕೂಡ ಕೇವಲ 2.60 ಕೋಟಿ ರೂ.ಗೆ ಆರ್ಸಿಬಿ ಪಾಲಾಗಿದ್ದರು. ಟಿ-20 ವಿಶ್ವಕಪ್ನಲ್ಲಿ ಅಬ್ಬರಿಸಿದ್ದ ಬೆಥೆಲ್ಗೆ ಆರ್ಸಿಬಿ ಪರ ಬ್ಯಾಟಿಂಗ್ ಆಡಿಸೋಕೆ ಸಾಧ್ಯವಾಗ್ತಿಲ್ಲ. ಆದ್ರೆ ಫೀಲ್ಡಿಂಗ್ನಲ್ಲಿ ಅವಕಾಶ ನೀಡಲಾಗ್ತಿದೆ. ಆಲ್ರೆಡಿ ತಂಡದ ಪರ ಅದ್ಭುತವಾಗಿ ಫೀಳ್ಡಿಂಗ್ ಮಾಡ್ತಾ ಕ್ರೂಶಿಯಲ್ ಕ್ಯಾಚ್ಗಳನ್ನೂ ಹಿಡಿದು ಸೈ ಎನಿಸಿಕೊಳ್ತಿದ್ದಾರೆ. ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ರೆ ಬೌಲರ್ಗಳನ್ನ ಬೆಂಡೆತ್ತೋಕೆ ರೆಡಿ ಇದ್ದಾರೆ. ಬಟ್ ಫ್ರಾಂಚೈಸಿಗೆ ಬೆಥೆಲ್ರನ್ನ ಆಡ್ಸೋಕೇ ಸ್ಲಾಟ್ ಸಿಗ್ತಿಲ್ಲ ಅಷ್ಟೇ. ಸೋ ಅಲ್ಲಿಗೆ ಈ ಐವರೂ ಕೂಡ ಸೂಪರ್ ಸ್ಟ್ರಾಂಗ್ ಪ್ಲೇಯರ್ಗಳೇ. ಬಟ್ ಎಲ್ಲರನ್ನೂ ಸೇರಿಸಿ ಫ್ರಾಂಚೈಸಿ ಕೊಡ್ತಿರೋದು 11.1 ಕೋಟಿ ಮಾತ್ರ. ಸಮ್ಟೈಮ್ಸ್ ಇವ್ರು ತಗೊಳ್ಳೋ ಸಂಭಾವನೆಯನ್ನೂ ಮೀರಿದ ಪರ್ಫಾಮೆನ್ಸ್ ನೀಡ್ತಿದ್ದಾರೆ ಅನ್ನಿಸದೆ ಇರಲ್ಲ. ಇದನ್ನ ನೋಡಿದಾಗ್ಲೇ ಗೊತ್ತಾಗುತ್ತೆ ಬೆಂಗಳೂರು ಟೀಮ್ನ ಸಕ್ಸಸ್ ಏನು ಅನ್ನೋದು.

ನೋಡಿರಿ

