ಸೋಪು ತಿನ್ನುತ್ತಿದ್ದ ಕೋತಿಗೆ ಮಹಿಳೆಯಿಂದ ಅಕ್ಕರೆಯ ಪಾಠ! – ಆಮೇಲೆ ಏನಾಯ್ತು ಗೊತ್ತಾ?

ಕೋತಿಗಳು ಜನವಸತಿ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತವೆ. ಈ ವೇಳೆ ಮನೆ ಬಳಿ ಬಂದು ಕೈಗೆ ಸಿಕ್ಕಿದ್ದನ್ನೆಲ್ಲಾ ಎತ್ತಿಕೊಂಡು ಹೋಗುತ್ತವೆ. ಇದೀಗ ಇಲ್ಲೊಂದು ಕೋತಿ ಮರಿ ಸೋಪ್ನ ಎತ್ತಿಕೊಂಡು ಹೋಗಿದ್ದು, ಅದನ್ನ ತಿನ್ನಲು ಪ್ರಯತ್ನಿಸಿದೆ. ಈ ವೇಳೆ ಮಹಿಳೆ ಬಂದು ತಡೆದಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ವಜ್ರದ ನೆಕ್ಲೆಸ್.. ಕೆಜಿಗಟ್ಟಲೆ ಚಿನ್ನ.. ಬೆಳಗಾವಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಸಂಪತ್ತು ನೋಡಿ ಅಧಿಕಾರಿಗಳು ಶಾಕ್!
ಕೋತಿಗಳು ಚೇಷ್ಟೆ ಮಾಡುವುದ್ರಲ್ಲಿ ಎತ್ತಿದ ಕೈ. ಇನ್ನು ಮನೆ ಹತ್ರ ಬಂದ್ರೆ ಮುಗಿತು. ಅದು ತಿನ್ನೋದಿಕ್ಕೆ ಆಗುತ್ತಾ ಇಲ್ವಾ ಅಂತ ನೋಡದೆಯೂ ಕೈಗೆ ಸಿಕ್ಕಿದ್ದನ್ನೆಲ್ಲಾ ಎತ್ತಿಕೊಂಡು ಹೋಗುತ್ತವೆ. ಇದೀಗ ಇಲ್ಲೊಂದು ಕೋತಿ ಸೋಪು ಎತ್ತಿಕೊಂಡು ಹೋಗಿ, ಅದನ್ನು ತಿನ್ನಲು ಪ್ರಯತ್ನಿಸಿದೆ. ಈ ವೇಳೆ ಮಹಿಳೆಯೊಬ್ಬರು ಅದನ್ನ ತಡೆದಿದ್ದಾರೆ. ಬಳಿಕ ಮಹಿಳೆ ಹೇಳಿದ ಮಾತನ್ನ ಕೇಳಿದೆ ಕೋತಿ. ಈ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಡಿಜಿಟಲ್ ಕಂಟೆಟ್ ಕ್ರಿಯೇಟರ್ ಪ್ರೀತಮ್ ಇನ್ಸ್ಟಾಗ್ರಾಮ್ನಲ್ಲಿ ಈ ಕಿರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಪ್ರಾಣಿಗಳಿಗೂ ಪ್ರೀತಿ ಮತ್ತು ಕಾಳಜಿಯ ಭಾಷೆ ಅರ್ಥವಾಗುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಈ ದೃಶ್ಯವು ಸೋಪಿನ ಬಾರ್ನಂತೆ ಕಾಣುವ ವಸ್ತುವನ್ನು ಕುತೂಹಲದಿಂದ ಹಿಡಿದಿರುವ ಕೋತಿಯೊಂದಿಗೆ ಪ್ರಾರಂಭವಾಗುತ್ತದೆ. ಅದು ಆಹಾರವೆಂದು ತಪ್ಪಾಗಿ ಭಾವಿಸಿ ತಿನ್ನಲು ಮುಂದಾಗುತ್ತದೆ. ಅಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಪ್ರಾಣಿ ಸೋಪು ತಿನ್ನಲು ಹೊರಟಿದೆ ಎಂದು ಸೂಚಿಸುತ್ತಾರೆ. ಆದಾಗ್ಯೂ, ನಂತರ ಏನಾಗುತ್ತದೆ ಎಂಬುದೇ ಈ ವಿಡಿಯೊದ ಪ್ರಮುಖ ಹೈಲೆಟ್ ಆಗಿದೆ.
ಸೋಪು ತಿಂದರೆ ಕೋತಿಯ ಆರೋಗ್ಯಕ್ಕೆ ಹಾನಿಯಾಗಬಹುದು ಎಲ್ಲರೂ ಆತಂಕವನ್ನು ವ್ಯಕ್ತ ಪಡಿಸುತ್ತಾರೆ. ಆಗ ಒಬ್ಬ ಮಹಿಳೆ ಶಾಂತವಾಗಿ ಮುಂದೆ ಹೆಜ್ಜೆ ಹಾಕುತ್ತಾಳೆ. ಆ ತಾಯಿ ತನ್ನ ಮಗುವಿಗೆ ಬುದ್ದಿಮಾತನ್ನು ಹೇಳುವಂತೆ ಕೋತಿಗೆ ಅರ್ಥ ಮಾಡಿಸುತ್ತಾಳೆ. ಅದನ್ನು ತಿನ್ನಬಾರದು ತನ್ನ ಕೈಯಲ್ಲಿದ್ದ ಆಲೂಗಡ್ಡೆಯನ್ನು ತಿನ್ನುವಂತೆ ಸನ್ನೆ ಮಾಡುತ್ತಾಳೆ. ಆ ಮಹಿಳೆಯ ಪ್ರೀತಿಗೆ ಮರುಳಾದ ಕೋತಿ, ತಕ್ಷಣವೇ ಸೋಪನ್ನು ಪಕ್ಕಕ್ಕೆ ಎಸೆದು ಆಲೂಗಡ್ಡೆ ಯನ್ನು ಪಡೆದುಕೊಂಡು ಹೋಗಿದೆ. ತಾಯಿಯ ಸಹಾನುಭೂತಿ ಮತ್ತು ಕಾಳಜಿಯು ಪ್ರಾಣಿಗಳಿಗೂ ಅರ್ಥವಾಗುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಮಾ ಯಾವಾಗಲೂ ಮಾ ಎಂಬ ಶೀರ್ಷಿಕೆ ಯೊಂದಿಗೆ, ವೀಡಿಯೊ ಶೇರ್ ಮಾಡಿದ್ದು ತಾಯಿಯ ಕಾಳಜಿಗೆ ಯಾವುದೇ ಮಿತಿಗಳಿಲ್ಲ. ಅದು ಮಗುವಾಗಲಿ, ಅಪರಿಚಿತನಾಗಲಿ ಅಥವಾ ಸೋಪ್ ತಿನ್ನಲು ಹೊರಟಿರುವ ಕೋತಿಯಾಗಲಿ ರಕ್ಷಣೆ ಮಾಡುವ ತಾಯಿಯ ಗುಣ ದೊಡ್ಡದು ಎಂದು ಬರೆಯಲಾಗಿದೆ. ಈ ಹೃದಯಸ್ಪರ್ಶಿ ಕ್ಷಣವು ಭಾರೀ ವೈರಲ್ ಆಗಿದ್ದು ಅನೇಕರು ಈ ವಿಡಿಯೊ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನೋಡಿರಿ

