ತಾಂಡವ್ ತಂತ್ರಕ್ಕೆ ಭಾಗ್ಯ ತಿರುಗೇಟು – ಶ್ರೇಷ್ಠಾ ಗರ್ಭಿಣಿ ಗುಟ್ಟು ಎಲ್ಲರೆದುರಲ್ಲೇ ರಟ್ಟು

ತಾಂಡವ್ ತಂತ್ರಕ್ಕೆ ಭಾಗ್ಯ ತಿರುಗೇಟು – ಶ್ರೇಷ್ಠಾ ಗರ್ಭಿಣಿ ಗುಟ್ಟು ಎಲ್ಲರೆದುರಲ್ಲೇ ರಟ್ಟು

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ತಂತ್ರ ತಲೆಕೆಳಗಾಗಿದೆ. ಮತ್ತೆ ಭಾಗ್ಯ ಗೆದ್ದಿದ್ದಾಳೆ. ಮತ್ತೊಂದೆಡೆ ಶ್ರೇಷ್ಠಾ ಗರ್ಭಿಣಿಯಾಗಿದ್ದಾಳೆ. ಈ ಸತ್ಯ ಕೂಡಾ ಎಲ್ಲರಿಗೂ ಮದುವೆ ಮನೆಯಲ್ಲೇ ಗೊತ್ತಾಗಿದೆ.

ಇದನ್ನೂ ಓದಿ:ತಾಂಡವ್ ಬದುಕಿಗೆ ಭಾಗ್ಯಲಕ್ಷ್ಮಿ ಬಂದು 10 ವರ್ಷಗಳು – ಸುದರ್ಶನ್ ಮತ್ತು ಸಂಗೀತಾ ದಾಂಪತ್ಯಗೀತೆ

ಭಾಗ್ಯ ಜೀವನವನ್ನು ಮತ್ತೆ ನರಕ ಮಾಡಬೇಕು. ನಾನು ಚೆನ್ನಾಗಿಲ್ಲ ಅಂದರೂ ಪರವಾಗಿಲ್ಲ, ಭಾಗ್ಯ ಚೆನ್ನಾಗಿರಬಾರದು ಎಂದು ತಾಂಡವ್‌ ಭಾಗ್ಯ ವಿರುದ್ಧ ಎಷ್ಟೆಲ್ಲಾ ತಂತ್ರ ಹೆಣೆದಿದ್ದನು. ತಾಂಡವ್ ಮದುವೆ ನಾಟಕ ಆಡುತ್ತಿರುವುದು ತನ್ನ ಜೀವನ ಹಾಳು ಮಾಡುವುದಕ್ಕೆ ಅನ್ನೋದು ಭಾಗ್ಯನಿಗೂ ಗೊತ್ತು. ಆದರೆ, ಮನೆಯವರೆಲ್ಲರೂ ತಾಂಡವ್ ಒಳ್ಳೆಯವನಾಗಿದ್ದಾನೆ ಅಂತಾ ನಂಬಿಕೊಂಡಿದ್ದಕ್ಕೆ ಸುಮ್ಮನಾಗಿದ್ದಳು. ತಾಂಡವ್ ಸತ್ಯ ಬಯಲು ಮಾಡಲು ಭಾಗ್ಯ ಮದುವೆ ಮಂಟಪದವರೆಗೂ ಬಂದಿದ್ದಳು. ಕೊನೆಗೂ ಭಾಗ್ಯ ಅಂದುಕೊಂಡಂತೆ ಆಗಿದೆ. ತಾಂಡವ್‌ ಗರ್ವ ಮುರಿದಿದ್ದಾಳೆ ಭಾಗ್ಯ.

ಮತ್ತೊಂದೆಡೆ ಶ್ರೇಷ್ಠ ಈಗ ಗರ್ಭಿಣಿಯಾಗಿದ್ದಾಳೆ. ಇದು ತಾಂಡವ್‌ಗೆ ಗೊತ್ತಾಗಿದೆ. ಆದರೆ ಇದನ್ನು ಅವನು ಯಾರ ಮುಂದೆ ಕೂಡ ಹೇಳಲು ಬಿಟ್ಟಿಲ್ಲ. ಮದುವೆ ದಿನ ತನ್ನ ಪ್ಲ್ಯಾನ್ ಹಾಳು ಮಾಡುತ್ತಾಳೆ ಎಂದು  ಶ್ರೇಷ್ಠಳನ್ನು ಕಿಡ್ನ್ಯಾಪ್‌ ಕೂಡ ಮಾಡಿಸಿದ್ದಾನೆ ತಾಂಡವ್. ಆದರೆ, ಭಾಗ್ಯ ಶ್ರೇಷ್ಠಳನ್ನು ಮಂಟಪಕ್ಕೆ ಕರೆಸಿದ್ದಾಳೆ. ಶ್ರೇಷ್ಠ ಎಲ್ಲರೆದುರು ತಾಂಡವ್ ನೀಚ ಮುಖವಾಡವನ್ನು ಬಯಲು ಮಾಡಿದ್ದಾಳೆ. ಜೊತೆಗೆ ತಾನು ಗರ್ಭಿಣಿ ಎಂಬ ಸತ್ಯವನ್ನೂ ಹೇಳಿದ್ದಾಳೆ.

ಭಾಗ್ಯ ಲೈಫ್‌ ಹಾಳು ಮಾಡಬೇಕು ಎಂದು ತಾಂಡಲ್ ಆಡಿದ ನಾಟಕಕ್ಕೆ ತೆರೆಬಿದ್ದಿದೆ. ನನ್ನ ಹೊಟ್ಟೆಯಲ್ಲಿ ಈಗ ತಾಂಡವ್‌ ಮಗು ಬೆಳೆಯುತ್ತಿದೆ ಎಂದು ಶ್ರೇಷ್ಠ ಎಲ್ಲರ ಮುಂದೆ ಹೇಳಿದ್ದಾಳೆ. ತಾಂಡವ್‌ ಅಸಲಿ ಆಟ ಎಲ್ಲರಿಗೂ ಗೊತ್ತಾಗಿದೆ. ಶ್ರೇಷ್ಠ ಎಲ್ಲರ ಎದುರು ಸತ್ಯ ಹೇಳಿದ್ದಾಳೆ. ಈಗ ಭಾಗ್ಯಮತ್ತು ಆದಿ ಮದುವೆಯಾಗುವುದು ಮಾತ್ರ ಬಾಕಿಯಿದೆ.

Sulekha