MI ಬೇಟೆಗೆ RCBಯಲ್ಲಿ ಸರ್ಜರಿ – ಅಭಿ ಬೇಡ.. ಡಫಿ ಬೇಕು.. ಯಾರು ಡ್ರಾಪ್?
ಪ್ಲೇಯಿಂಗ್ 11 ಹೀಗಿದ್ರೆ ಗೆಲ್ಲಬಹುದಾ?

ಒಂದ್ಕಡೆ ರಾಜಸ್ಥಾನದ ಟಾರ್ಗೆಟ್ ಚೇಸ್ ಮಾಡೋಕೆ ಆಗ್ದೇ ಸೋತಿರೋ ಮುಂಬೈ.. ಇನ್ನೊಂದ್ಕಡೆ ಅದೇ ರಾಜಸ್ಥಾನದ ವಿರುದ್ಧ 200ಪ್ಲಸ್ ರನ್ಸ್ ಹೊಡ್ದೂ ಡಿಫೆನ್ಸ್ ಮಾಡಿಕೊಳ್ಳದೆ ಸೋತಿರೋ ಬೆಂಗಳೂರು. ಈಗ ಎರಡೂ ತಂಡಗಳು ಸೋಲಿನ ಟ್ರ್ಯಾಕ್ನಲ್ಲೇ ಮುಖಾಮುಖಾಯಾಗ್ತಿದ್ದು ಸೂಪರ್ ಸಂಡೇಯಲ್ಲಿ ಗೆದ್ದು ಕಂ ಬ್ಯಾಕ್ ಮಾಡೋಕೆ ನೋಡ್ತಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆಯಲಿರೋ ಈ ಪಂದ್ಯದ ಗೆಲುವು ಇಬ್ಬರಿಗೂ ಮೋಸ್ಟ್ ಇಂಪಾರ್ಟೆಂಟ್.
ಇದನ್ನೂ ಓದಿ : SUPER MAN ಸೂರ್ಯವಂಶಿ – RR ವಿರುದ್ಧ ಮುಗ್ಗರಿಸಿದ RCB
ಐಪಿಎಲ್ನ ಒನ್ ಆಫ್ ದಿ ಬೆಸ್ಟ್ ಫೈಟ್ಗೆ ವೇದಿಕೆ ಸಿದ್ಧವಾಗ್ತಿದೆ. ಸೂಪರ್ ಸಂಡೇಯ ಎರಡನೇ ಮ್ಯಾಚಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿದೆ. ಮೊದಲ ಮ್ಯಾಚ್ ಗೆದ್ದು ಆ ನಂತ್ರ ಎರಡು ಪಂದ್ಯಗಳನ್ನ ಸೋತಿರೋ ಮುಂಬೈ ಒಂದ್ಕಡೆ ಮೊದಲ ಎರಡು ಮ್ಯಾಚ್ಗಳನ್ನ ಭರ್ಜರಿಯಾಗಿ ಗೆದ್ದು ಮೂರನೇ ಪಂದ್ಯ ಸೋತಿರೋ ಬೆಂಗಳೂರು ಇನ್ನೊಂದ್ಕಡೆ. ಇಂಟ್ರೆಸ್ಟಿಂಗ್ ಅಂದ್ರೆ ಎರಡೂ ತಂಡಗಳು ರಾಜಸ್ಥಾನ ವಿರುದ್ಧವೇ ಸೋತು ಮುಖಾಮುಖಿ ಆಗ್ತಿದ್ದಾರೆ. ಈ ಪಂದ್ಯ ಗೆಲ್ಬೇಕು ಅಂದ್ರೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಚೇಂಜಸ್ ತರಬಹುದು.
3 ಬದಲಾವಣೆ ನಿರೀಕ್ಷೆ!
ಬೌಲಿಂಗ್ ಸ್ಟ್ರಾಂಗ್ ಮಾಡಲು ಜೇಕಬ್ ಡಫಿ ಒಳಗೆ ಬರಬೇಕು
ವಿರಾಟ್ ಕೊಹ್ಲಿ ಜೊತೆ ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಓಪನ್
ಅಭಿನಂದನ್ ಸಿಂಗ್ ರನ್ನು ಪ್ಲೇಯಿಂಗ್ 11ನಿಂದ ಹೊರಗಿಡಬೇಕು
ಸೋ ಇಲ್ಲಿ ಜೇಕಬ್ ಡಫಿ ಬೇಕು.. ಬಟ್ ಓವರ್ ಸೀಸ್ ಅಂದ್ರೆ ಫಾರಿನ್ ಪ್ಲೇಯರ್ಸ್ಗೆ ಪ್ಲೇಯಿಂಗ್ 11ನಲ್ಲಿ ನಾಲ್ವರಿಗೆ ಮಾತ್ರ ಚಾನ್ಸ್ ನೀಡೋಕೆ ಸಾಧ್ಯ ಇರೋದು. ಸೋ ಅದನ್ನೂ ಕ್ಯಾಲ್ಕುಲೇಟ್ ಮಾಡ್ಕೊಂಡು ಪ್ಲೇಯಿಂಗ್ 11 ಸೆಟ್ ಮಾಡ್ಬೇಕು. ಹೇಜಲ್ವುಡ್ ಜೊತೆ ಡಫಿ ಬರ್ಬೇಕು ಅಂದ್ರೆ ಫಿಲ್ ಸಾಲ್ಟ್, ಟಿಮ್ ಡೇವಿಡ್ ಅಥವಾ ರೊಮ್ಯಾರಿಯೋ ಶೆಫರ್ಡ್ ಇವ್ರಲ್ಲಿ ಒಬ್ರು ಸ್ಲಾಟ್ ಬಿಟ್ಟುಕೊಡ್ಬೇಕಾಗುತ್ತೆ. ಇಲ್ಲದೇ ಇದ್ರೆ ಅಭಿನಂದನ್ ಸಿಂಗ್ ಬದಲಿಗೆ ಮಂಗೇಶ್ ಯಾದವ್ ಅಥವಾ ರಸಿಕ್ ದಾರ್ ಸಲಾಂ ತರಬೇಕು. ಸುಯಾಶ್ರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗೇ ಕಂಟಿನ್ಯೂ ಮಾಡ್ಬೇಕಾಗುತ್ತೆ.
ಮುಂಬೈ ಬೇಟೆಗೆ ಸಂಭಾವ್ಯ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ
ವೆಂಕಟೇಶ್ ಅಯ್ಯರ್
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ರೊಮ್ಯಾರಿಯೋ ಶೆಫರ್ಡ್
ಕೃನಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಜೋಶ್ ಹೇಜಲ್ ವುಡ್
ಜೇಕಬ್ ಡಫಿ
ಸುಯಾಶ್ ಶರ್ಮಾ
ಇಲ್ಲಿ ಫಿಲ್ ಸಾಲ್ಟ್ ಬೆಂಚ್ ಕಾಯಿಸೋ ಆಟಗಾರ ಅಲ್ಲ ಹೌದು. ಬಟ್ ಬೌಲಿಂಗ್ ಯುನಿಟ್ ಸ್ಟ್ರಾಂಗ್ ಮಾಡ್ಬೇಕು ಅಂದ್ರೆ ಈ ಥರ ಸೆಟ್ ಮಾಡ್ಬೋದು. ದೇಶಿಯ ಆಟಗಾರರು ಪ್ಲಸ್ ವಿದೇಶಿ ಆಟಗಾರರ ಕಾಂಬಿನೇಷನ್ ಫಾಲೋ ಮಾಡ್ಬೇಕು ಅಂದ್ರೆ ಸಮ್ ಟೈಮ್ಸ್ ಕಾಂಪ್ರಮೈಸ್ ಕೂಡ ಮಾಡಿಕೊಳ್ಬೇಕಾಗುತ್ತೆ. ಟಿಮ್ ಡೇವಿಡ್ ಕೂರಿಸೋಕೆ ಅವ್ರು ಡೆತ್ ಓವರ್ ಬ್ಯಾಟಿಂಗ್ ಸ್ಪೆಷಲಿಸ್ಟ್.. ಇನ್ನು ಶೆಫರ್ಡ್ ಕೂರಿಸೋಕೆ ಅವ್ರು ಬೌಲರ್ ಜೊತೆ ಬ್ಯಾಟರ್ ಕೂಡ ಆಗಿರೋದ್ರಿಂದ ಇಂಪ್ಯಾಕ್ಟ್ ಮಾಡ್ತಾರೆ.

ನೋಡಿರಿ

