ನಿದ್ದೆಯಲ್ಲೂ ಫೋನ್‌ ಸ್ಕ್ರಾಲ್‌ ಮಾಡ್ತಾಳೆ ಈ ಬಾಲಕಿ! – ಮಕ್ಕಳ ಕೈಗೆ ಮೊಬೈಲ್‌ ಕೊಡುವ ಮುನ್ನ ಈ ವಿಡಿಯೋ ನೋಡಿ!

ನಿದ್ದೆಯಲ್ಲೂ ಫೋನ್‌ ಸ್ಕ್ರಾಲ್‌ ಮಾಡ್ತಾಳೆ ಈ ಬಾಲಕಿ! – ಮಕ್ಕಳ ಕೈಗೆ ಮೊಬೈಲ್‌ ಕೊಡುವ ಮುನ್ನ ಈ ವಿಡಿಯೋ ನೋಡಿ!

ಈಗಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಫೋನ್‌ ಯೂಸ್‌ ಮಾಡ್ತಾರೆ. ದಿನವಿಡೀ ಫೋನ್‌ ನೋಡಿಕೊಂಡೇ ಕಾಲ ಕಳಿತಾರೆ. ಇದು ಒಳ್ಳೆಯದಲ್ಲ.. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ. ಇದೀಗ ಇಲ್ಲೊಂದು ಮಗು ಕೂಡ ಮೊಬೈಲ್‌ಗೆ ಅಡಿಕ್ಟ್‌ ಆಗಿದ್ದು, ವಿಪರೀತ ನಿದ್ದೆಯಲ್ಲೂ ಮಗುವೊಂದು ಮೊಬೈಲ್ ಹಿಡಿದು ಸ್ಕ್ರೋಲ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ:ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಫೈಟ್!‌ – ದೆಹಲಿಗೆ ಹೊರಟ 20ಕ್ಕೂ ಹೆಚ್ಚು ಕೈ ಶಾಸಕರು!

ಪುಟ್ಟ ಮಕ್ಕಳು ಕೂಡ ಫೋನ್‌ಗೆ ತುಂಬಾ ಅಡಿಕ್ಟ್‌ ಆಗುತ್ತಿದ್ದಾರೆ. ಫೋನ್‌ ಕೈಯಲ್ಲಿ ಇಲ್ಲ ಅಂದ್ರೆ ಪ್ರಪಂಚವೇ ಮುಳುಗಿ ಹೋದ ಹಾಗೆ ಮಾಡುತ್ತಾರೆ. ಇದೀಗ ಇಲ್ಲೊಂದು ಬಾಲಕಿ ಗಾಢ ನಿದ್ರೆಯಲ್ಲೂ ಕೂಡ ಮೊಬೈಲ್ ಹಿಡಿದು ಸ್ಕ್ರಾಲ್ ಮಾಡಿದ್ದಾಳೆ. ಆಕೆ ಗಾಢ ನಿದ್ರೆ ಯಲ್ಲಿದ್ರೂ ಫೋನ್‌ ಸ್ಕ್ರೋಲ್‌ ಮಾಡುತ್ತಿದ್ದಾಳೆ.  ಈ ವಿಡಿಯೋ ಭಾರಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಬಾಲಕಿ ನಿದ್ರಿಸುತ್ತಿದ್ದರೂ, ಅವಳ ಬೆರಳು ಪರದೆಯ ಮೇಲೆ ಚಲಿಸುತ್ತಲೇ ಇರುತ್ತದೆ. ಅವಳು ರೀಲ್‌ಗಳ ಮೂಲಕ ಸ್ಕ್ರೋಲ್ ಮಾಡುತ್ತಿರುವಂತೆ ಕಾಣುತ್ತದೆ. ನಾವು‌ ಮೊಬೈಲ್‌ನಲ್ಲಿ ರೀಲ್ಸ್‌ ಗಳನ್ನು ಹೇಗೆ ಸ್ಕ್ರೋಲ್ ಮಾಡುತ್ತೇವೆಯೋ ಅದೇ ರೀತಿ ಆಕೆ ನಿದ್ರೆಯಲ್ಲೂ ಮಾಡುತ್ತಿದ್ದಾಳೆ. ಈ ಬಗ್ಗೆ ಅನೇಕರು ಪೋಷಕರು ವಿರುದ್ಧ ಕಿಡಿಕಾರಿದ್ದಾರೆ. ಮೊಬೈಲ್ ಮಕ್ಕಳ ಆರೋಗ್ಯಕ್ಕೆ ಪರಿಣಾಮ ಬೀರುತ್ತಿದ್ದರೂ ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ವೀಡಿಯೊ,ಕೇವಲ 12 ಸೆಕೆಂಡುಗಳಿದ್ದು ಘರ್ ಕೆ ಕಲೇಶ್ ಎಂಬ ಪುಟವು ಹಂಚಿಕೊಂಡಿದೆ. ಇದು ತ್ವರಿತವಾಗಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಬಳಕೆದಾರರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಫೋನ್ ನೀಡುವುದಕ್ಕೆ ಪೋಷಕರನ್ನು ದೂಷಿಸಿದ್ದಾರೆ. ಒಬ್ಬ ಬಳಕೆದಾರರು, “ಇದು ಪೋಷಕರದೇ ತಪ್ಪು.. ಮಕ್ಕಳಿಗೆ ಯಾಕೆ ಫೋನ್ ನೀಡಬೇಕು ಎಂದಿದ್ದಾರೆ. ಮತ್ತೊಬ್ಬರು, “ಪ್ರತಿಯೊಬ್ಬ ಪೋಷಕರು ಈ ದೃಶ್ಯ ನೋಡಬೇಕು ಮತ್ತು ತಮ್ಮ ಫೋನ್‌ಗಳನ್ನು ತಮ್ಮ ಮಕ್ಕಳಿಂದ ದೂರವಿಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

Shwetha M