ಪಂಜಾಬ್ ವಿರುದ್ಧ ಅಭಿಷೇಕ್ ಶರ್ಮಾ ಅಬ್ಬರ – 220 ರನ್ ಟಾರ್ಗೆಟ್ ನೀಡಿದ SRH

ಪಂಜಾಬ್ ಕಿಂಗ್ಸ್ ವಿರುದ್ಧ ಎಸ್‌ಆರ್‌ಹೆಚ್ ಪರ ಅಭಿಷೇಕ್ ಶರ್ಮಾ ಅಬ್ಬರಿಸಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಪರಿಣಾಮವಾಗಿ ಸನ್‌ರೈಸರ್ಸ್ ತಂಡ ಪವರ್‌ಪ್ಲೇನಲ್ಲಿಯೇ ಶತಕದ ಗಡಿ ದಾಟಿತು. ಅದರಲ್ಲೂ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 53 ರನ್ ಗಳಿಸಿದರು. ಇದರೊಂದಿಗೆ, ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದರು.
ಇದನ್ನೂ ಓದಿ: ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ RR ಎಡವಟ್ಟು – ವೈಭವ್ ಪಕ್ಕದಲ್ಲಿದ್ದ ಸಿಬ್ಬಂದಿಯಿಂದ ಮೊಬೈಲ್ ಬಳಕೆ
ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಮೂರನೇ ಅರ್ಧಶತಕ ಗಳಿಸಿದ್ದಾರೆ . ಇದಕ್ಕೂ ಮೊದಲು, ಅವರು ಐಪಿಎಲ್ 2024 ಮತ್ತು ಐಪಿಎಲ್ 2025 ರಲ್ಲಿ ಅರ್ಧಶತಕ ಗಳಿಸಿದ್ದರು. ಈಗ ಅವರು ಐಪಿಎಲ್ 2026 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೂರನೇ ಅರ್ಧಶತಕ ಬಾರಿಸಿದ್ದಾರೆ. ಅಭಿಷೇಕ್ ಶರ್ಮಾ ಪವರ್‌ಪ್ಲೇನ 6 ಓವರ್‌ಗಳಲ್ಲಿ 22 ಎಸೆತಗಳನ್ನು ಆಡಿ 66 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಅಭಿ ಮತ್ತು ಹೆಡ್ ಆಟದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 6 ಓವರ್‌ಗಳಲ್ಲಿ 105 ರನ್ ಗಳಿಸಿತು. ಅಂತಿಮವಾಗಿ ಅಭಿಷೇಕ್ ಶರ್ಮಾ, ಶಶಾಂಕ್ ಸಿಂಗ್ ಬೌಲಿಂಗ್‌ನಲ್ಲಿ 28 ಎಸೆತಗಳಲ್ಲಿ 8 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳ ಸಹಾಯದಿಂದ 74 ರನ್ ಗಳಿಸಿ ಔಟಾದರು.
220 ರನ್ ಟಾರ್ಗೆಟ್ ನೀಡಿದ SRH
ಇನ್ನೂ ಪಂಜಾಬ್ ಕಿಂಗ್ಸ್‌ಗೆ 220 ರನ್ ಟಾರ್ಗೆಟ್ ನೀಡಿದೆ ಎಸ್ಆರ್‌ಹೆಚ್. ಇಂದಿನ ಪಂದ್ಯದಲ್ಲಿ 250ಕ್ಕೂ ಹೆಚ್ ರನ್ ಬರಬಹುದು ಅಂತ ಅಂದಾಜಿಸಲಾಗಿತ್ತು. ಯಾಕಂದ್ರೆ ಆರೆಂಜ್ ಆರ್ಮಿ ಮೊದಲ 6 ಓವರ್‌ಗಳಲ್ಲಿ 105 ರನ್ ಕಲೆ ಹಾಕಿತು. ಆದ್ರೆ ಪಂಜಾಬ್ ಬೌಲರ್‌ಗಳು ಎಸ್‌ಆರ್‌ಹೆಚ್‌ನ್ನ ಅಂತಿಮವಾಗಿ 219ರನ್‌ಗೆ ಕಟ್ಟಿಹಾಕಿದ್ದಾರೆ. ಹೈದರಾಬಾದ್ ಬ್ಯಾಟ್ಸ್‌ಮನ್ ಅನಿಕೇತ್ ವರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಆದರೆ 17 ನೇ ಓವರ್‌ನಲ್ಲಿ ರನೌಟ್ ಆದರು. 9 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು.

ನೋಡಿರಿ

