ಬುಮ್ರಾನೂ ಬಿಟ್ಟಿಲ್ಲ.. ಜೋಶ್ ಗೂ ಜಗ್ಗಿಲ್ಲ – A ಗ್ರೇಡ್ ಬೌಲರ್ಸ್ ಎದುರಲ್ಲೇ ವೈಭವ
ಕ್ರಿಕೆಟ್ ಲೋಕಕ್ಕೆ ಮತ್ತೊಬ್ಬ ಸಿಡಿಲಮರಿ!

ವೈಭವ್ ಸೂರ್ಯವಂಶಿ. ಕ್ರಿಕೆಟ್ ಲೋಕದ ವಂಡರ್ ಕಿಡ್. ಲೆಜೆಂಡರಿ ಬ್ಯಾಟರ್ಸ್ ಕೂಡ ಈತನ ಎನರ್ಜಿಗೆ ಮ್ಯಾಚ್ ಮಾಡೋಕೆ ಆಗ್ತಿಲ್ಲ. ವರ್ಲ್ಡ್ ಕ್ಲಾಸ್ ಬೌಲರ್ಗಳೂ ಈತನ ಎದುರು ಗೆಲ್ಲೋಕಾಗ್ತಿಲ್ಲ. ಕ್ರಿಕೆಟ್ ಎಕ್ಸ್ಪರ್ಟ್ಸ್ ಕೂಡ ಈತನನ್ನ ಜಡ್ಜ್ ಮಾಡೋಕೆ ಆಗ್ತಿಲ್ಲ. ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿರೋ ಸೂರ್ಯವಂಶಿ ಈ ಬಾರಿಯ ಐಪಿಎಲ್ನಲ್ಲಿ ಆಲ್ರೆಡಿ ಹೀರೋ. ಮತ್ತೊಬ್ಬ ಸಚಿನ್ ತೆಂಡೂಲ್ಕರ್ ಹಾದಿಯಲ್ಲಿರೋ ಸೂರ್ಯವಂಶಿ ಅನ್ನೋ ಸಿಡಿಲಮರಿ.
ಇದನ್ನೂ ಓದಿ : RCBಗೆ ಮೊದಲ ಸೋಲು, RRಗೆ 4ನೇ ಗೆಲುವು – ವೈಭವ್ ಬ್ಯಾಟಿಂಗ್ ಅಬ್ಬರ ಶಾಕ್ ಆದ ರಾಯಲ್ ಚಾಲೆಂಜರ್ಸ್
ಕ್ರಿಕೆಟ್ ಲೋಕದ ಸದ್ಯದ ಸೆನ್ಸೇಷನಲ್ ನ್ಯೂಸ್ ಅಂದ್ರೆ ಅದು ವೈಭವ್ ಸೂರ್ಯವಂಶಿನೇ. 15ನೇ ವಯಸ್ಸಿನಲ್ಲೇ ಲೆಜೆಂಡರಿ ಬೌಲರ್ಗಳ ಎದುರಲ್ಲಿ ರನ್ಗಳ ಸುನಾಮಿ ಎಬ್ಬಿಸ್ತಿದ್ದಾರೆ. ಮ್ಯಾಚ್ನಿಂದ ಮ್ಯಾಚ್ಗೆ ಸೂರ್ಯವಂಶಿ ಪವರ್ನ ಯಾರಿಗೂ ಮ್ಯಾಚ್ ಮಾಡೋಕೂ ಆಗ್ತಿಲ್ಲ. ಕಳೆದ ನಾಲ್ಕೂ ಇನ್ನಿಂಗ್ಸ್ಗಳಲ್ಲೇ ಅಬ್ಬರಿಸಿ ಆಲ್ರೆಡಿ ಆರೆಂಜ್ ಕ್ಯಾಪ್ನೂ ಮುಡಿಗೇರಿಸಿಕೊಂಡಿದ್ದಾರೆ. ಬಾಸ್ ಬೇಬಿಯ ಅಬ್ಬರಕ್ಕೆ ಕ್ರಿಕೆಟ್ ದಾಖಲೆಗಳೆಲ್ಲಾ ಬ್ರೇಕ್ ಆಗೋಕೆ ಸ್ಟಾರ್ಟ್ ಆಗಿದೆ.
ಎ ಗ್ರೇಡ್ ಬೌಲರ್ಸ್ ಎದುರಲ್ಲೇ ಸಿಡಿದ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಆಡ್ತಿರೋದು ಈಗ ಯಾರೋ ಸಣ್ಣಪುಟ್ಟ ಬೌಲರ್ಗಳ ಎದುರಲ್ಲಿ ಅಲ್ಲ. ವರ್ಲ್ಡ್ಕ್ಲಾಸ್ ಬೌಲರ್ಸ್, ನಂಬರ್ 1 ಬೌಲರ್ಸ್, ಮೋಸ್ಟ್ ಎಕ್ಸ್ಪೀರಿಯನ್ಸ್ಡ್ ಬೌಲರ್ಸ್ ಎದುರಲ್ಲಿ. ಬಟ್ ಬೌಲರ್ ಚೇಂಜ್ ಆದ್ರೂ ಸೂರ್ಯವಂಶಿ ಬ್ಯಾಟಿಂಗ್ ಇಂಟೆಂಟ್ ಮಾತ್ರ ಬದಲಾಗ್ತಿಲ್ಲ. ಅದೇ ಅಪ್ರೋಚ್, ಅದೇ ಅಗ್ರೆಶನ್, ಅದೇ ಪವರ್ ಹಿಟ್ಟಿಂಗ್. ಕಳೆದ ನಾಲ್ಕೂ ಮ್ಯಾಚ್ಗಳಲ್ಲೂ ಅಂಥಾದ್ದೇ ಪರ್ಫಾಮೆನ್ಸ್. ಚೆನ್ನೈ ವಿರುದ್ಧ 15 ಬಾಲಲ್ಲೇ ಅರ್ಧಶತಕ ಗಳಿಸಿದ್ದ ಸೂರ್ಯವಂಶಿ ಗುಜರಾತ್ ವಿರುದ್ಧ 31 ರನ್ಸ್, ನೆಕ್ಸ್ಟ್ ಸಾಲಿಡ್ ಬ್ಯಾಟಿಂಗ್ ಲೈನಪ್ ಇರೋ ಮುಂಬೈ ವಿರುದ್ಧ 14 ಬಾಲಲ್ಲೇ 39 ರನ್ಸ್, ಈಗ ಆರ್ಸಿಬಿ ವಿರುದ್ಧ 26 ಬಾಲಲ್ಲೇ 78 ರನ್ಸ್ ಬಂದಿದೆ. ಈ ಸೀಸನ್ನಲ್ಲಿ ಆಲ್ರೆಡಿ 266 ಪ್ಲಸ್ ಸ್ಟ್ರೈಕ್ರೇಟ್ನಲ್ಲಿ 200 ರನ್ಸ್ ಬಂದಿದ್ದು ಆರೆಂಜ್ ಕ್ಯಾಪ್ ಸೂರ್ಯವಂಶಿ ಕೈ ಸೇರಿದೆ. ಌಂಡ್ ಈ ಇನ್ನಿಂಗ್ಸ್ನಲ್ಲಿ 18 ಸಿಕ್ಸ್ ಮತ್ತು 18 ಸಿಕ್ಸರ್ಸ್ ಬಂದಿದೆ. ಸೋ ಅಲ್ಲಿಗೆ 200 ರನ್ಗಳಲ್ಲಿ 180 ರನ್ಸ್ ಬರೀ ಸಿಕ್ಸ್ ಮತ್ತು ಫೋರ್ಗಳಲ್ಲೇ ಬಂದಿದೆ. ಮೋಸ್ಟ್ ಇಂಪಾರ್ಟೆಂಟ್ಲಿ ಸೂರ್ಯವಂಶಿ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್ರಂಥ ಎ ಗ್ರೇಡ್ ಬೌಲರ್ಸ್ ಎದುರಲ್ಲೇ ವೈಭವಿಸ್ತಿರೋದು ಮತ್ತೊಂದು ವಿಶೇಷ. ಇದೇ ಪವರ್ಫುಲ್ ಪ್ರದರ್ಶನವೇ ಈಗ ಮುಂದಿನ ಟಿ-20 ವಿಶ್ವಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿ ಆಡೋದನ್ನ ಯಾರು ತಡೆಯೋಕೆ ಆಗಲ್ವಾ ಎನ್ನುವಂಥ ಚರ್ಚೆ ಹುಟ್ಟುಹಾಕಿದೆ.
ಸಿಡಿಲಮರಿ ಸೂರ್ಯವಂಶಿ!
2028ರಲ್ಲಿ ಭಾರತದ ಪರ ಟಿ-20 ವಿಶ್ವಕಪ್ನಲ್ಲಿ ಆಡುವಂಥ ಎಲ್ಲಾ ಸಾಧ್ಯತೆಗ
ಅಂಡರ್ 19 ವಿಶ್ವಕಪ್, ಐಪಿಎಲ್ ನಲ್ಲಿ ವರ್ಲ್ಡ್ ಕ್ಲಾಸ್ ಬೌಲರ್ಸ್ ಎದುರು ರನ್ಸ್
ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಟೈಮಲ್ಲೂ ಹೀಗೇ ಇತ್ತು
ಕಾಂಪಿಟೇಟಿವ್ ಕ್ರಿಕೆಟ್ ಆಡೋಕೆ ನಾನು ರೆಡಿ ಅನ್ನುವಂತೆ ವೈಭವ್ ಎಕ್ಸ್ ಪೋಸ್
ಒನ್ ಜನರೇಷನ್ಗೆ ಒಬ್ಬ ಸಿಗುವಂಥ ಪ್ರತಿಭಾವಂತ ಆಟಗಾರ ಸೂರ್ಯವಂಶಿ
ಲೆಜೆಂಡರಿ ಬೌಲರ್ ಗಳಿಗೂ ಫಸ್ಟ್ ಬಾಲ್ ರೆಸ್ಪೆಕ್ಟ್ ಕೊಡಲ್ಲ, ಅಗ್ರೆಸ್ಸಿವ್ ಅಪ್ರೋಚ್
ಟೆಕ್ನಿಕಲಿ ಕೂಡ ಸ್ಟ್ರಾಂಗ್, ಫುಟ್ ವರ್ಕ್, ರಿಸ್ಟ್ ರೊಟೇಷನ್ ಚೆನ್ನಾಗಿದೆ
ಇನ್ನು ಆರ್ಸಿಬಿ ವಿರುದ್ಧದ ಪಂದ್ಯದ ಬಳಿಕ ಮಾತ್ನಾಡಿದ್ದ ವೈಭವ್, ಬೌಲಿಂಗ್ ವೇಳೆ ಬೌಲರ್ ನೋಡ್ತೀಯಾ ಅಥವಾ ಬಾಲ್ ನೋಡ್ತಿಯಾ ಅಂತಾ ಪ್ರಶ್ನೆ ಕೇಳಿದಾಗ ಅಷ್ಟೇ ಸ್ಮಾರ್ಟ್ ಆಗಿ ವೈಭವ್ ಮಾತ್ನಾಡಿದ್ದಾರೆ. ಬೌಲರ್ಗಳನ್ನ ನೋಡ್ತೇನೆ. ಆದ್ರೆ ಆದಷ್ಟು ಬಾಲ್ ಮೇಲೆ ಕಾನ್ಸ್ಟ್ರೇಟ್ ಮಾಡ್ತೀನಿ. ಅದನ್ನ ಸ್ಮ್ಯಾಶ್ ಮಾಡ್ತೇನೆ. ಚೆಂಡಿನ ವೇಗ ಮತ್ತು ಲೈನ್ ಗಮನಿಸ್ತೇನೆ ಎಂದಿದ್ದಾರೆ. ಒಟ್ನಲ್ಲಿ ಸದ್ಯಕ್ಕೆ ಸೂರ್ಯವಂಶಿಗೆ ಇರೋ ಎನರ್ಜಿ ನೋಡಿದ್ರೆ ಭಾರತದ ಪರ ಸಾಕಷ್ಟು ವರ್ಷಗಳ ಅಬ್ಬರಿಸಬಹುದು. ಬಟ್ ಸಚಿನ್ಗೆ ಇದ್ದ ಹಾಗೇ ಕ್ರಿಕೆಟ್ ಬಗೆಗಿನ ಕಮಿಟ್ಮೆಂಟ್ ಇರ್ಬೇಕು ಅಷ್ಟೇ.

ನೋಡಿರಿ

