SUPER MAN ಸೂರ್ಯವಂಶಿ – RR ವಿರುದ್ಧ ಮುಗ್ಗರಿಸಿದ RCB
ಪಾಟಿದಾರ್ ಪಟಾಲಂ ಎಡವಿದ್ದೆಲ್ಲಿ?

ಬ್ಯಾಟಿಂಗ್ ಡಲ್ ಆಯ್ತು ಅಂತಾ ಹೇಳೋದಾ.. ಪವರ್ ಪ್ಲೇ ಬೌಲಿಂಗ್ ಸಿಕ್ಕಾಪಟ್ಟೆ ಕಾಸ್ಟ್ಲಿ ಆಯ್ತು ಅನ್ನೋದಾ.. ಬಟ್ ಮ್ಯಾಚ್ ಅಂತೂ ಸೋತಾಗಿದೆ. ಸತತ ಎರಡು ಪಂದ್ಯ ಗೆದ್ದಿದ್ದ ಆರ್ಸಿಬಿ ಮೂರನೇ ಮ್ಯಾಚ್ ನಲ್ಲಿ ಮುಗ್ಗರಿಸಿದೆ. ರಾಜಸ್ತಾನ ವಿರುದ್ದ ಸೋತರು ಒಂದಷ್ಟು ಕಲಿಯೋದಿದೆ.
ಇದನ್ನೂ ಓದಿ : ಮುಕುಲ್ ಪಂಚ್ ಗೆ ನೆಲ ಕಚ್ಚಿದ KKR – ಸೋಲಿನ ಸುಳಿ ದಾಟಿ ಗೆದ್ದ LSG
ಹಾಲಿ ಚಾಂಪಿಯನ್ ಆರ್ಸಿಬಿ ವಿರುದ್ಧ ರಾಜಸ್ಥಾನ ನಿಜಕ್ಕೂ ಚಾಂಪಿಯನ್ನಂತೆಯೇ ಪರ್ಫಾಮೆನ್ಸ್ ನೀಡಿದ್ರು. ಬರ್ಸಪರ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 201 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 18 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಟಾರ್ಗೆಟ್ ರೀಚ್ ಆಯ್ತು.
ಆರ್ ಸಿಬಿಗೆ ಏನೆಲ್ಲಾ ಮೈನಸ್?
ಮಳೆ ಬಂದು ಪಂದ್ಯ ಲೇಟ್.. ಟಾಸ್ ಸೋಲು ಸೆಟ್ ಬ್ಯಾಕ್
ಫಸ್ಟ್ ಬಾಲ್ ಸಾಲ್ಟ್ ವಿಕೆಟ್.. ಒಳ್ಳೆಯ ಜೊತೆಯಾಟ ಬರಲಿಲ್ಲ
ಇಂಪಾಕ್ಟ್ ಪ್ಲೇಯರ್ ಆಗಿ ವೆಂಕಟೇಶ್ ಅಯ್ಯರ್ ಎಂಟ್ರಿ
ಸುಯಾಶ್ ಶರ್ಮಾಗೆ ಚಾನ್ಸ್ ಸಿಗದೇ ಬೌಲರ್ ಕಡಿಮೆ
ಬೌಲಿಂಗ್ ನಲ್ಲಿ ಪವರ್ ಪ್ಲೇ ನಲ್ಲೇ ಮ್ಯಾಚ್ ಅರ್ಧದಷ್ಟು ರನ್ಸ್
ಸೂರ್ಯವಂಶಿ 26 ಬಾಲ್ 78 ರನ್ 300 ಸ್ಟ್ರೈಕ್ ರೇಟ್
ಜೇಕಬ್ ಡಫಿ ಬದಲು ಜೋಶ್ ಹೇಜಲ್ ವುಡ್ ಬಂದದ್ದು
ರಾಜಸ್ಥಾನ ತಂಡ ಬ್ಯಾಟಿಂಗ್ ಹಾಗೇ ಬೌಲಿಂಗ್ ಡಾಮಿನೇಷನ್
ಸೋ ಇದೆಲ್ಲಾ ಆರ್ಸಿಬಿ ಪಂದ್ಯದ ಸೋಲಿಗೆ ಕಾರಣ ಆಯ್ತು. ಲಾಸ್ಟ್ ಸೀಸನ್ನಲ್ಲಿ ಅವೇ ಪಿಚ್ನಲ್ಲಿ ಎಲ್ಲಾ ಮ್ಯಾಚ್ ಗೆದ್ದಿದ್ದ ಬೆಂಗಳೂರು ಈ ಸಲ ಮೊದಲ ಮ್ಯಾಚಲ್ಲೇ ಎಡವಿದೆ. ಬಟ್ ಈ ಸೋಲಿನಲ್ಲೂ ಒಂದಷ್ಟು ಪ್ಲಸ್ ಪಾಯಿಂಟ್ಸ್ ಕೂಡ ಇದೆ.
ಬೆಂಗಳೂರು ಕಲಿತದ್ದು ಏನು?
94ಕ್ಕೆ 6 ವಿಕೆಟ್ ಬಿದ್ರೂ 200+ ರನ್ಸ್ ಟಾರ್ಗೆಟ್
ಸೋತರೂ ಹೀನಾಯವಾಗಿ ಸೋಲಲಿಲ್ಲ ಬೆಂಗಳೂರು
8ನೇ ಓವರ್ ನಲ್ಲೇ 127 ರನ್ಸ್ ಬಂದ್ರು 18ನೇ ಓವರ್ ವರೆಗೂ ಬೌಲ್
ಬೌಲಿಂಗ್ ವೀಕ್ ನೆಸ್ ಬಗ್ಗೆ ಮುಂದಿನ ಪಂದ್ಯಗಳಲ್ಲಿ ಕಂ ಬ್ಯಾಕ್
ಇದೆಲ್ಲಾ ಮುಂದಿನ ಪಂದ್ಯಗಳಲ್ಲಿ ತಿದ್ದಿಕೊಳ್ಬೋದು. ಹಾಗೇ ಬೌಲಿಂಗ್ ಯುನಿಟ್ನ ವೀಕ್ನೆಸ್ ಹಾಗೇ ಸ್ಪಿನ್ನರ್ ಬಳಕೆ ಬಗ್ಗೆಯೂ ಇಂಪ್ರೂಮೆಂಟ್ ಬೇಕಾಗುತ್ತೆ. ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಮ್ಯಾಚ್ ಇದ್ದು ಈ ಪಂದ್ಯದಲ್ಲಿ ಗೆದ್ದು ಗೆಲುವಿನ ಟ್ರ್ಯಾಕ್ಗೆ ಕಂ ಬ್ಯಾಕ್ ಮಾಡ್ಬೇಕಿದೆ.

ನೋಡಿರಿ

