ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಬೆಂಗಳೂರು-ಮುಂಬೈ  ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಗ್ರೀನ್‌ ಸಿಗ್ನಲ್‌

ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್  – ಬೆಂಗಳೂರು-ಮುಂಬೈ  ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಗ್ರೀನ್‌ ಸಿಗ್ನಲ್‌

ಬೆಂಗಳೂರು-ಮುಂಬೈ  ವಂದೇ ಭಾರತ್‌ ಸ್ಲೀಪರ್‌ ರೈಲಿಗೆಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಈ ಸಂಬಂಧ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ ವಂದೇ ಭಾರತ್ ಸ್ಲೀಪರ್ ರೈಲಿಗೆ ಸಂಸದ ಪಿ.ಸಿ.ಮೋಹನ್ ಬೇಡಿಕೆ ಇಟ್ಟಿದ್ದರು. ಸಂಸದರಿಗೆ ಪತ್ರ ಬರೆದು ಹೊಸ ಟ್ರೈನ್‌ಗೆ ಅನುಮತಿ ಸಿಕ್ಕ ಬಗ್ಗೆ ಅಶ್ವಿನಿ ವೈಷ್ಣವ್ ಮಾಹಿತಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ HIV ಪಾಸಿಟಿವ್ ರಕ್ತ ಇಂಜೆಕ್ಟ್ – ಮನನೊಂದು ಪ್ರಾಣ ಕಳೆದುಕೊಂಡ ಯುವತಿ

 

ಡಿಸೆಂಬರ್ 2 ರಂದು ನೈಋತ್ಯ ರೈಲ್ವೆಯ (SWR) ಸ್ಥಾಯಿ ಸಮಿತಿಯ ಅಧ್ಯಯನ ಭೇಟಿಯ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು. SMVT ಬೆಂಗಳೂರು ಮೂಲ/ಅಂತ್ಯ ನಿಲ್ದಾಣವಾಗಿ ವಂದೇ ಭಾರತ್ ಸ್ಲೀಪರ್ ರೈಲಿಗೆ ಅವರು ಒತ್ತಾಯಿಸಿದ್ದರು. ಈಗ ಇರುವ ರೈಲುಗಳು 24-30 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಬಸ್‌ಗಳು 16-18 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ನಮಗೆ ಬಸ್‌ನಷ್ಟು ವೇಗದ ರೈಲು ಬೇಕು ಎಂದು ತಿಳಿಸಿದ್ದರು.

ಭಾರತೀಯ ರೈಲ್ವೆ ಕೆಎಸ್‌ಆರ್ ಬೆಂಗಳೂರು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ ನಡುವೆ ಸಂಪರ್ಕ ಕಲ್ಪಿಸುವ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಇದಾಗಿದ್ದು, ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಪ್ರಯಾಣ ಸಮಯವನ್ನು ಸುಮಾರು 13ರಿಂದ 18 ಗಂಟೆಗಳವರೆಗೆ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಇದಕ್ಕೆ ಜೊತೆಗೆ, ದೆಹಲಿ–ಸುರತ್ ಸೇರಿದಂತೆ ಇತರ ವಂದೇ ಭಾರತ್ ಸ್ಲೀಪರ್ ಮಾರ್ಗಗಳನ್ನೂ ಪರಿಗಣಿಸಲಾಗುತ್ತಿದೆ.

Kishor KV