ವೈಭವ್‌ ಆಟಕ್ಕೆ ವಿರಾಟ್ ಮೆಚ್ಚುಗೆ – ಸೂರ್ಯವಂಶಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಕಿಂಗ್‌ ಕೊಹ್ಲಿ!

ವೈಭವ್‌ ಆಟಕ್ಕೆ ವಿರಾಟ್ ಮೆಚ್ಚುಗೆ – ಸೂರ್ಯವಂಶಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಕಿಂಗ್‌ ಕೊಹ್ಲಿ!

RCB ವಿರುದ್ದದ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಭರ್ಜರಿ ಪ್ರದರ್ಶನ ನೀಡಿದ್ರು. ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ವೈಭವ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಇವೆಲ್ಲದ್ರ ಮಧ್ಯೆ ಕಿಂಗ್‌ ಕೊಹ್ಲಿ ವೈಭವ್‌ಗೆ ಸ್ಪೆಷಲ್‌ ಗಿಫ್ಟ್‌ ನೀಡಿದ್ದಾರೆ.

ಇದನ್ನೂ ಓದಿ:‌ ವಜ್ರದ ನೆಕ್ಲೆಸ್.. ಕೆಜಿಗಟ್ಟಲೆ ಚಿನ್ನ.. ಬೆಳಗಾವಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಸಂಪತ್ತು ನೋಡಿ ಅಧಿಕಾರಿಗಳು ಶಾಕ್!‌

RCB ವಿರುದ್ದದ ಮ್ಯಾಚ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿಗೆ ನೆರವಾದ ವೈಭವ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಇದಲ್ಲದೇ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಂದ್ಯ ಮುಗಿದ ನಂತರ ಕಿಂಗ್‌ ಕೊಹ್ಲಿ ವೈಭವ್‌ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬಳಿಕ ವೈಭವ್‌ ಧರಿಸಿದ್ದ ಕ್ಯಾಪ್‌ಗೆ ಆಟೋಗ್ರಾಫ್‌ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಧರಿಸಿದ್ದ ಕ್ಯಾಪ್‌ ಮೇಲೆ “ವೆಲ್ ಡನ್ ವೈಭವ್” ಎಂದು ಬರೆದು ಅವರನ್ನು ಕೊಹ್ಲಿ ಪ್ರೋತ್ಸಾಹಿಸಿದ್ದಾರೆ. ಇಬ್ಬರೂ ಮೈದಾನದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ ಸಹ, ಕೊಹ್ಲಿ ಯುವ ಪ್ರತಿಭೆಯನ್ನು ಗೌರವಿಸಿದ ರೀತಿ ಕ್ರಿಕೆಟ್ ಅಭಿಮಾನಿಗಳ ಹೃದಯಗಳನ್ನು ಗೆದ್ದಿತು. ಆರ್​​ಸಿಬಿ ನಡುಗಿಸಿದವನಿಗೆ ವಿರಾಟ್ ಕೊಹ್ಲಿ ನೀಡಿರುವ ಸ್ಪೆಷಲ್ ಗಿಫ್ಟ್ ಎಲ್ಲರ ಚಿತ್ತ ಕದ್ದಿದೆ.

ಇನ್ನು ಪಂದ್ಯದ ಬಳಿಕ ಮಾತನಾಡಿದ ಸೂರ್ಯವಂಶಿ, ಅಪಾಯಕಾರಿ ಬೌಲರ್‌ಗಳ ಎದುರು ಬ್ಯಾಟ್ ಬೀಸುವಾಗ ಭಯವಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ವೈಭವ್, “ಯಾರು ಬೌಲಿಂಗ್ ಮಾಡುತ್ತಿದ್ದಾರೆ ಎಂಬುದು ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಓಡುತ್ತಿರುತ್ತದೆ. ಆದರೆ ಬ್ಯಾಟಿಂಗ್ ಮಾಡುವಾಗ ನನ್ನ ಸಂಪೂರ್ಣ ಗಮನ ಚೆಂಡಿನ ಮೇಲಿತ್ತೇ ಹೊರತು ಬೌಲರ್ ಮೇಲಲ್ಲ. ಚೆಂಡಿನ ವೇಗ ಮತ್ತು ಲೈನ್ ನೋಡಿ, ನಾನು ಅಭ್ಯಾಸ ಮಾಡಿದ್ದನ್ನೇ ಮೈದಾನದಲ್ಲಿ ಅಳವಡಿಸಿಕೊಂಡೆ. ನನ್ನ ಸಹಜ ಆಟಕ್ಕೆ ನಾನು ಒತ್ತು ನೀಡಿದೆ” ಎಂದು ಹೇಳಿದರು.

ತಮ್ಮ ಯಶಸ್ಸಿನ ಹಾದಿಯ ಬಗ್ಗೆ ಮಾತನಾಡಿದ ಸೂರ್ಯವಂಶಿ, “ನನ್ನ ಮೊದಲ ಕೋಚ್‌ ತಂದೆ, ಮತ್ತು ನನ್ನ ಮಾರ್ಗದರ್ಶಿ ರೋಹಿತ್ ಸರ್ ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಇದು ಸುದೀರ್ಘ ಪ್ರಯಾಣ, ಇದು ಕೇವಲ ಆರಂಭವಷ್ಟೇ” ಎಂದು ತಿಳಿಸಿದರು.

Shwetha M