ವಜ್ರದ ನೆಕ್ಲೆಸ್.. ಕೆಜಿಗಟ್ಟಲೆ ಚಿನ್ನ.. ಬೆಳಗಾವಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಸಂಪತ್ತು ನೋಡಿ ಅಧಿಕಾರಿಗಳು ಶಾಕ್!‌

ವಜ್ರದ ನೆಕ್ಲೆಸ್..  ಕೆಜಿಗಟ್ಟಲೆ ಚಿನ್ನ.. ಬೆಳಗಾವಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಸಂಪತ್ತು ನೋಡಿ ಅಧಿಕಾರಿಗಳು ಶಾಕ್!‌

ನಗರಾಭಿವೃದ್ಧಿ ಕೋಶದ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ ದಾಳಿ ನಡೆದಿದೆ. ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆಯಲ್ಲಿರುವ ಖಜಾನೆ ನೋಡಿ ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಕೆಜಿ ಗಟ್ಟಲೆ ಚಿನ್ನಾಭರಣ, ವಜ್ರಾಭರಣ, ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.

ಇದನ್ನೂ ಓದಿ: ಯಮುನಾ ನದಿಯಲ್ಲಿ ಭೀಕರ ದುರಂತ- ಪ್ರವಾಸಿಗರ ದೋಣಿ ಮುಳುಗಿ 10 ಮಂದಿ ಸಾ*ವು

DUDC ಎಇಇ ಅಜಯಸಿಂಗ್ ರಜಪೂತ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಮೂರು ಮನೆ, ಕಚೇರಿ, ಬ್ಯಾಂಕ್ ಲಾಕರ್ ಪರಿಶೀಲನೆ ನಡೆಸಿದ ವೇಳೆ ಸವದತ್ತಿ, ಹುಕ್ಕೇರಿ, ಹುಬ್ಬಳ್ಳಿಯಲ್ಲಿ 18 ನಿವೇಶನ ಪತ್ತೆಯಾಗಿದ್ದರೆ ಮನೆಯಲ್ಲಿ 5.96 ಕೆಜಿ ಮೌಲ್ಯದ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್‌ಗಳು ಪತ್ತೆಯಾಗಿವೆ. ಅಜಯಸಿಂಗ್‌ ಮನೆಯಲ್ಲಿ ಒಟ್ಟು 14 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ಸ್ವತಹ ಅಧಿಕಾರಿಗಳೇ ಅಕ್ರಮ ಆಸ್ತಿ ಕಂಡು ತಬ್ಬಿಬ್ಬಾಗಿದ್ದಾರೆ. ಬೆಳಗಾವಿ  ನಗರದ ಆಂಜನೇಯ ನಗರ ಸೇರಿದಂತೆ ಏಳು ಕಡೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಿನ್ನೆಲೆ ತನಿಖೆ ಮುಂದುವರಿದಿದ್ದು, ಬ್ಯಾಂಕ್ ಲಾಕರ್ ಪರಿಶೀಲನೆ ಬಾಕಿ ಇದೆ. ಲಾಕರ್ ಪರಿಶೀಲನೆ ವೇಳೆ ಮತ್ತಷ್ಟು ಅಕ್ರಮ ಆಸ್ತಿ ಪತ್ತೆ ಸಾಧ್ಯತೆ ಇದ್ದು, ಕಳೆದ ಬುಧವಾರ(ಏ.07) ಅಧಿಕಾರಿಯ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.

Shwetha M