ತಾಂಡವ್ ಬದುಕಿಗೆ ಭಾಗ್ಯಲಕ್ಷ್ಮಿ ಬಂದು 10 ವರ್ಷಗಳು – ಸುದರ್ಶನ್ ಮತ್ತು ಸಂಗೀತಾ ದಾಂಪತ್ಯಗೀತೆ

ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಹಾಗೂ ನಟಿ ಸಂಗೀತಾ ಭಟ್ ಜೋಡಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಮದುವೆಯಾಗಿ 10 ವರ್ಷ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೋಶೂಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ದುಲ್ಕರ್ ಸಲ್ಮಾನ್ ತಂದೆ ಮಮ್ಮುಟಿಗೆ ಮೋಸ ಮಾಡಿದ್ರಾ? – ಅಪ್ಪನಿಂದಲೇ ಮಗನ ಮೇಲೆ ಆರೋಪ..!
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಆಗಿ ಜನರ ಪ್ರೀತಿಗಳಿಸಿದ ಸುದರ್ಶನ್ ರಂಗಪ್ರಸಾದ್ ವೆಡ್ಡಿಂಗ್ ಆನಿವರ್ಸರಿ ಖುಷಿಯಲ್ಲಿದ್ದಾರೆ. ಪತ್ನಿ ಸಂಗೀತಾ ಭಟ್ ಜೊತೆಗಿನ ಸುಮಧುರ ದಾಂಪತ್ಯ ಮತ್ತು ಸಂಗೀತಾ ಭಟ್ ಜೊತೆಗಿನ ಪ್ರೀತಿಯ ಪಯಣವನ್ನು ಹಂಚಿಕೊಂಡಿದ್ದಾರೆ ಸುದರ್ಶನ್ ರಂಗಪ್ರಸಾದ್. ಸಂಗೀತಾ ಭಟ್ ಕೂಡಾ ತನ್ನ ಗಂಡ ಸುದರ್ಶನ್ ಅವರ ಬಗ್ಗೆ ಪ್ರೀತಿಯ ಸಂದೇಶ ಹಂಚಿಕೊಂಡಿದ್ದಾರೆ.
“ನಮ್ಮ 13 ವರ್ಷಗಳ ಸಾಂಗತ್ಯ… 3 ವರ್ಷಗಳ ಪ್ರೀತಿ, 10 ವರ್ಷಗಳ ಸುಂದರ ದಾಂಪತ್ಯ ನನ್ನ ಪ್ರೀತಿಯ ಸುದರ್ಶನ್ ರಂಗಪ್ರಸಾದ್. ನೀವು ಕೇವಲ ಪತಿಯಷ್ಟೇ ಅಲ್ಲ, ನನಗೆ ಆಸರೆಯಾದ ಮನೆ, ನನ್ನ ಶಕ್ತಿ ಮತ್ತು ಪ್ರತಿಯೊಂದು ಸಂಕಷ್ಟದ ಬಿರುಗಾಳಿಯಲ್ಲೂ ನನ್ನ ಪಾಲಿನ ಶಾಂತಿ”ಎಂದು ಸಂಗೀತಾ ಭಟ್ ಬರೆದುಕೊಂಡಿದ್ದಾರೆ. 10 ವರ್ಷಗಳ ದಾಂಪತ್ಯದ ನಂತರವೂ, ನೀವು ಪ್ರತಿದಿನ ತಾಳ್ಮೆ, ಪ್ರೀತಿ ಮತ್ತು ‘ನಮ್ಮನ್ನು’ ಆಯ್ಕೆ ಮಾಡಿಕೊಳ್ಳುತ್ತೀರಿ. ಇಂದು ನಾನೇನಾಗಿದ್ದೇನೋ, ಅದೆಲ್ಲವೂ ನಿಮ್ಮಿಂದಾಗಿ ಹೆಚ್ಚು ಸುರಕ್ಷಿತವಾಗಿದೆ ಎಂದು ನನಗೆ ಅನ್ನಿಸುತ್ತದೆ ಎಂದಿದ್ದಾರೆ ಸಂಗೀತಾ ಭಟ್. ನನ್ನ ಆತ್ಮೀಯ ಪತಿಗೆ 10ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಇಂತಹ ಇನ್ನೂ ಅನೇಕ ಸುಂದರ ವರ್ಷಗಳು ನಮ್ಮದಾಗಲಿ ಎಂದು ಸಂಗೀತಾ ಹೇಳಿಕೊಂಡಿದ್ದಾರೆ.
ಸುದರ್ಶನ್ ರಂಗಪ್ರಸಾದ್ ಕೂಡ ಪೋಸ್ಟ್ ಹಂಚಿಕೊಂಡಿದ್ದು, “ನಾವು ಇಷ್ಟು ದೂರ ಬಂದಿದ್ದೇವೆ ಎನ್ನುವುದನ್ನು ನಂಬಲಾಗುತ್ತಿಲ್ಲ. ಮದುವೆ ಅನ್ನೋದು ಪ್ರತಿಯೊಬ್ಬ ಹೆಣ್ಣಿಗೂ ದೊಡ್ಡ ನಿರ್ಧಾರ. ನನಗೆ ನೆನಪಿದೆ, ನಾನು ನಿನ್ನನ್ನು ಮದುವೆಯಾಗಬೇಕು ಅಂದುಕೊಂಡಾಗ ನಿನಗೆ ನಾನು, “ಏನು ಮಾಡುವುದು ಡಾರ್ಲಿಂಗ್… ಪ್ರೀತಿ ಅತೀ ಹೆಚ್ಚಾಗಿತ್ತು, ಬ್ಯಾಂಕ್ ಬ್ಯಾಲೆನ್ಸ್ ಅತೀ ಕಡಿಮೆ ಇತ್ತು… ಕೆರಿಯರ್ ಕೆಳಗಿತ್ತು, ಸ್ಟ್ರೆಸ್ ಜಾಸ್ತಿಯಿತ್ತು… ಸಾರಿ, ಈಗಲೇ ಬೇಡ… ನನಗೆ ದಾರಿ ತೋಚುತ್ತಿಲ್ಲ!” ಎಂದು ಹೇಳಿದ್ದೆ. ಆಗ ನೀನು “ಹೇಳಿದ್ದು ಇಷ್ಟೇ, “ಬಾ ಇಬ್ಬರೂ ಒಟ್ಟಿಗೇ ದಾರಿ ತಪ್ಪೋಣ, ಒಟ್ಟಿಗೇ ಕಷ್ಟಪಡೋಣ ಮತ್ತು ಒಬ್ಬರನ್ನೊಬ್ಬರು ಒಟ್ಟಿಗೇ ಹುಡುಕೋಣ!” ಎಂದು ಹೇಳಿದ್ದೆ. ಏನ್ ಡೈಲಾಗ್ ಗುರು ಇದು!” ಎಂದು ಹೇಳಿದ್ದಾರೆ

ನೋಡಿರಿ

