RCBಗೆ ಬಾಸ್ ಬೇಬಿಯೇ ಟಾರ್ಗೆಟ್ – ಪವರ್ ಪ್ಲೇ ವಿಕೆಟ್ ಬಿದ್ರಷ್ಟೇ ಬಚಾವ್
ಮ್ಯಾಜಿಕ್ ಮಾಡ್ತಾರಾ ಭುವನೇಶ್ವರ್?

ಹ್ಯಾಟ್ರಿಕ್ ವಿಕ್ಟರಿ ಟಾರ್ಗೆಟ್ನಲ್ಲಿ ಗುವಾಹಟಿಗೆ ಹಾರಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಇವತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಅಖಾಡಕ್ಕೆ ಇಳಿಯಲಿದೆ. ಎರಡೂ ತಂಡಗಳು ಈವರೆಗೂ ಸೋಲೇ ಕಾಣದೇ ಇರೋದ್ರಿಂದ ಯಾರು ಮೊದಲು ಮುಗ್ಗರಿಸ್ತಾರೆ ಅನ್ನೋ ಅನ್ನೋ ಕ್ಯೂರಿಯಾಸಿಟಿಯೂ ಇದೆ. ಅದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಎರಡೂ ತಂಡಗಳೂ ಡೇಂಜರಸ್ ಆಗಿವೆ. ಅದ್ರಲ್ಲೂ ಐಪಿಎಲ್ನ ಯಂಗೆಸ್ಟ್ ಓಪನರ್ಸ್ ಆಗಿರೋ ಜೈಸ್ವಾಲ್ ಮತ್ತು ಸೂರ್ಯವಂಶಿ ಜೋಡಿಯೇ ಆರ್ಸಿಬಿಯ ಮೇನ್ ಟಾರ್ಗೆಟ್.
ಇದನ್ನೂ ಓದಿ : ಕೊಹ್ಲಿ Vs ಸಂದೀಪ್ IPL ಜಿದ್ದಾಜಿದ್ದಿ – KING ಆಟಕ್ಕೆ ಮತ್ತೆ ವಿಲನ್ ಆಗ್ತಾರಾ?
ಹಾಲಿ ಚಾಂಪಿಯನ್ ಆಗಿರುವ ಆರ್ಸಿಬಿ ಹೋಂ ಪಿಚ್ನಲ್ಲಿ ಸತತ 2 ಪಂದ್ಯಗಳನ್ನ ಗೆದ್ದು ಮೂರನೇ ಮ್ಯಾಚ್ನ ಅವೇ ಪಿಚ್ನಲ್ಲಿ ಆಡಲಿದೆ. ಲಾಸ್ಟ್ ಸೀಸನ್ನಲ್ಲಿ ಅವೇ ಗೇಮ್ಸ್ ಎಲ್ಲಾ ಗೆದ್ದು ದಾಖಲೆ ಮಾಡಿದ್ರು. ಸೋ ಈ ಸೀಸನ್ ಕೂಡ ಅದೇ ಕಾನ್ಸೆಪ್ಟ್ನಲ್ಲೇ ಇರ್ತಾರೆ. ಈಗಾಗಲೇ ಹೈದ್ರಾಬಾದ್ ಮತ್ತು ಚೆನ್ನೈ ತಂಡಗಳನ್ನ ಸೋಲಿಸಿದ್ರೂ ಕೂಡ ರಾಜಸ್ಥಾನ ವಿರುದ್ಧದ ಗೆಲುವು ಅಷ್ಟು ಈಸಿ ಇಲ್ಲ. ಯಾಕಂದ್ರೆ ಅವ್ರು ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ದು ಈಗ ನಾಲ್ಕನೇ ಪಂದ್ಯಕ್ಕೆ ಕಾಲಿಡ್ತಿದ್ದಾರೆ. ಌಂಡ್ ರಾಜಸ್ಥಾನದ ಈ ಅಜೇಯ ಜರ್ನಿಯ ಸ್ಟ್ರೆಂಥೇ ಓಪನರ್ ಜೋಡಿ. ಅದ್ರಲ್ಲೂ ಬಾಸ್ ಬೇಬಿ ಅಂತಾನೇ ಕರೆಸಿಕೊಳ್ತಿರೋ ವೈಭವ್ ಸೂರ್ಯವಂಶಿ ವರ್ಲ್ಡ್ ಕ್ಲಾಸ್ ಬೌಲರ್ಗಳನ್ನೂ ಬೆಂಡೆತ್ತುತ್ತಿದ್ದು ಆರ್ಸಿಬಿಗೆ ಸೂರ್ಯವಂಶಿಯೇ ಮೇನ್ ಟಾರ್ಗೆಟ್ ಆಗಿದ್ದಾರೆ.
ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯವಂಶಿ ಪವರ್ ಪ್ಲೇ ಫೈಯರ್!
ರಾಜಸ್ಥಾನದ ಈ ಸಕ್ಸಸ್ಫುಲ್ ಜರ್ನಿ ಸೀಕ್ರೆಟ್ ಅಂದ್ರೆ ಅದು ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಜೊತೆಯಾಟ. ಪವರ್ ಪ್ಲೇನಲ್ಲೇ ಈ ಜೋಡಿಯಿಂದ ಬರ್ತಿರೋ ಸ್ಕೋರ್ ತಂಡಕ್ಕೆ ಭದ್ರ ಬುನಾದಿಯನ್ನ ಹಾಕಿಕೊಡ್ತಿದೆ. ಆಲ್ರೆಡಿ ಈ ಸೀಸನ್ನಲ್ಲಿ ಆಡಿರುವಂಥ ಮೂರೂ ಪಂದ್ಯಗಳಲ್ಲೂ ಅದನ್ನ ಪ್ರೂವ್ ಮಾಡಿದ್ದಾರೆ. ವೈಭವ್ ಇನ್ನಿಂಗ್ಸ್ ಅಂತೂ ಎಕ್ಸ್ಟ್ರಾರ್ಡಿನರಿಯಾಗಿದೆ.
ಯಶಸ್ವಿ & ಸೂರ್ಯವಂಶಿ ಪವರ್ ಶೋ!
ಕಳೆದ ಮೂರು ಪಂದ್ಯಗಳಲ್ಲಿ ಪವರ್ ಪ್ಲೇನಲ್ಲಿ ವಿಕೆಟ್ ಕಳ್ಕೊಂಡಿಲ್ಲ
ಮೊದಲ ವಿಕೆಟ್ ಗೆ ಮೂರೂ ಸಲವೂ 70+ ರನ್ಸ್ ಜೊತೆಯಾಟ
ಬ್ಯಾಕ್ ಟು ಬ್ಯಾಕ್ ಅರ್ಧಶತಕ, ಆರೆಂಜ್ ಕ್ಯಾಪ್ ನಲ್ಲಿ ಜೈಸ್ವಾಲ್
248+ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿರೋ ಸೂರ್ಯವಂಶಿ
10 ಇನ್ನಿಂಗ್ಸ್ ನಲ್ಲಿ 3 ಸಲ ಫಸ್ಟ್ ಬಾಲ್ ಬೌಂಡರಿ, 2 ಸಲ ಸಿಕ್ಸ್
ಮುಂಬೈ ವಿರುದ್ಧ ಬುಮ್ರಾ, ಬೌಲ್ಟ್, ಶಾರ್ದೂಲ್ ಗೆ ಫಸ್ಟ್ ಬಾಲ್ ಸಿಕ್ಸ್
ಹೀಗೆ ಪವರ್ ಪ್ಲೇನಲ್ಲಿ ಈ ಇಬ್ಬರೂ ಯಂಗ್ ಡೈನಮೇಟ್ಸ್ ಒಂದೊಳ್ಳೆ ಸ್ಕೋರ್ ಮೂಲಕ ಎದುರಾಳಿ ತಂಡಕ್ಕೆ ಪ್ರೆಶರ್ ಕ್ರಿಯೇಟ್ ಮಾಡ್ತಿದ್ದಾರೆ. ಬಟ್ ಈ ಸಲ ಇಬ್ಬರ ಜೊತೆಯಾಟ ಸ್ಟ್ರಾಂಗ್ ಆಗೋ ಮೊದ್ಲೇ ಆರ್ಸಿಬಿ ವಿಕೆಟ್ ತೆಗೆಯೋದು ಪಕ್ಕಾ. ಅದ್ರಲ್ಲೂ ಲಾಸ್ಟ್ ಸೀಸನ್ನಂತೆ ಈ ಸೀಸನ್ ನಲ್ಲಿ ವೈಭವ್ಗೆ ಭುನೇಶ್ವರ್ ಬ್ರೇಕ್ ಹಾಕೋಕೆ ರೆಡಿಯಾಗ್ತಿದ್ದಾರೆ.
ಸ್ವಿಂಗ್ ಕಿಂಗ್ ಭುವಿ ಎದುರು ಅಬ್ಬರಿಸ್ತಾರಾ ವೈಭವ್?
ಆಲ್ರೆಡಿ ವೈಭವ್ ಸೂರ್ಯವಂಶಿ ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್ ಕ್ರಿಕೆಟ್ ಲೋಕವನ್ನೇ ದಂಗಾಗಿಸಿದೆ. ವಿಶ್ವದ ನಂಬರ್ 1 ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾಗೂ ಕೂಡ ಲಾಸ್ಟ್ ಮ್ಯಾಚಲ್ಲಿ ಸಿಕ್ಸರ್ ಬಾರಿಸಿದ್ದಾರೆ. 3 ಬಾಲ್ ಅಂತರದಲ್ಲೇ 2 ಸಿಕ್ಸರ್ಸ್ ಇತ್ತು. ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದ ವೈಭವ್, ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣ ಆಗಿದ್ರು. ಬಟ್ ಈಗ ಭುವನೇಶ್ವರ್ ಕುಮಾರ್ ಅವರ ಸ್ಪೀಡ್ಗಿಂತ ಅವ್ರ ಕ್ಲೆವರ್ನೆಸ್ ತುಂಬಾ ಡೇಂಜರಸ್. ಅದೂ ಅಲ್ದೇ ಪವರ್ ಪ್ಲೇನಲ್ಲಿ ಹೈಯೆಸ್ಟ್ ವಿಕೆಟ್ ತೆಗೆದಿರೋ ಬೌಲರ್. ಮೊದಲ 6 ಓವರ್ಗಳಲ್ಲೇ 80 ವಿಕೆಟ್ಸ್ ಬಂದಿದೆ. ಲಾಸ್ಟ್ ಸೀಸನ್ನಲ್ಲಿ ಆರ್ಸಿಬಿ ವಿರುದ್ಧ ಸೂರ್ಯವಂಶಿ ಸಿಡಿಯೋ ಮೊದ್ಲೇ ಪೆವಿಲಿಯನ್ಗೆ ಕಳಿಸಿದ್ರು. 12 ಬಾಲಲ್ಲಿ 16 ರನ್ಸ್ ಗಳಿಸಿದ್ದ ಸೂರ್ಯವಂಶಿ ಭುವಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ರು. ಸೋ ಈ ಸಲ ಇವ್ರಿಬ್ಬರ ಬ್ಯಾಟಲ್ ಸಿಕ್ಕಾಪಟ್ಟೆ ಮಜಾ ಇರುತ್ತೆ.
ಇನ್ನು ರಾಜಸ್ಥಾನ ಪರ ಓಪನರ್ ಜೋಡಿ ಮೇಲೆ ಸಾಕಷ್ಟು ಹೋಪ್ಸ್ ಇದ್ರೂ ಕೂಡ ನಂತರದ ಬ್ಯಾಟಿಂಗ್ ಲೈನಪ್ ಕೂಡ ಚೆನ್ನಾಗಿದೆ. ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೇಲ್, ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜ, ನಾಯಕ ರಿಯಾನ್ ಪರಾಗ್, ಡೊನೊವನ್ ಪೆರೆರಾ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಸೋ ಇವ್ರನ್ನೂ ಕಂಟ್ರೋಲ್ ಮಾಡೋದು ಆರ್ಸಿಬಿ ಬೌಲರ್ಗಳಿಗೆ ಇರೋ ಅತಿದೊಡ್ಡ ಟಾಸ್ಕ್. ಹಾಗೇ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಸ್ಪಿನ್ನರ್ ರವಿ ಬಿಷ್ಟೋಯಿ ಹಾಗೂ ತುಷಾರ್ ದೇಶಪಾಂಡೆ ಬೌಲಿಂಗ್ ದಾಳಿ ಕೂಡ ಚೆನ್ನಾಗಿದೆ. ಇನ್ನು ಆರ್ಸಿಬಿ ಆರ್ಆರ್ಗಿಂತ ಡೇಂಜರಸ್ ಪ್ಲೇಯರ್ಗಳೇ ಇದ್ದಾರೆ. ಬೆಂಗಳೂರು ಟೀಂ ನಂಬರ್ 1 ಟು 8ವರೆಗೂ ಬ್ಯಾಟರ್ಸ್ ಸಾಲಿಡ್ ಲೈನಪ್ ಇದೆ.ಎಲ್ರೂ ಒಬ್ರಿಗಿಂತ ಒಬ್ರು ರಣಬೇಟೆಗಾರರೇ. ಌಂಡ್ ಬೌಲಿಂಗ್ ಕೂಡ ಜೇಕಬ್ ಡಫಿ ಮತ್ತು ಭುವನೇಶ್ವರ್ ಜೊತೆ ಕೃನಾಲ್ ಪಾಂಡ್ಯ, ಸುಯಾಶ್ ಶರ್ಮಾ ಕೂಡ ಉತ್ತಮ ಫಾರ್ಮ್ನಲ್ಲಿದ್ದು ಬೆಂಗಳೂರು ಟೀಂ ಪಂದ್ಯ ಗೆಲ್ಲುವಂಥ ಹಾಟ್ ಫೇವರೆಟ್ ಟೀಂ ಆಗಿದೆ.

ನೋಡಿರಿ

