ದುಲ್ಕರ್ ಸಲ್ಮಾನ್ ತಂದೆ ಮಮ್ಮುಟಿಗೆ ಮೋಸ ಮಾಡಿದ್ರಾ? – ಅಪ್ಪನಿಂದಲೇ ಮಗನ ಮೇಲೆ ಆರೋಪ..!

ಮಲಯಾಳಂ ನಟ ಮಮ್ಮುಟಿ ಮತ್ತು ಅವರ ಮಗ ದುಲ್ಕರ್ ಸಲ್ಮಾನ್ ಮಧ್ಯೆ ಬಿರುಕು ಮೂಡಿದೆಯಾ?, ತಂದೆ ಮಮ್ಮುಟಿಗೆ ದುಲ್ಕರ್ ಸಲ್ಮಾನ್ ಮೋಸ ಮಾಡಿದ್ದಾರಾ?, ಹೀಗೊಂದು ವಿಚಾರವನ್ನು ಸ್ವತಃ ಮಮ್ಮುಟಿಯೇ ಹೇಳಿದ್ದಾರೆ..
ಇದನ್ನೂ ಓದಿ:ಶಿವಣ್ಣ ಮೆಚ್ಚಿದ ಪ್ರೀತಮ್.. ಭಾಗ್ಯವಂತನಿಗೆ ಸಿಕ್ತು ಸ್ಪೆಷಲ್ ಗಿಫ್ಟ್! -DKD ಫಿನಾಲೆ.. ಶಿವಣ್ಣ ಭಾವುಕ!
ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗ ಆಳಿದವರು. ಈಗಲೂ ತನ್ನ 74 ವರ್ಷ ವಯಸ್ಸಿನಲ್ಲಿಯೂ ಮಮ್ಮುಟಿ ಅವರು ವರ್ಷಕ್ಕೆ ಮೂರು-ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಪೇಟ್ರಿಯಾಟ್ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಮಮ್ಮುಟಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ತಮ್ಮ ಪುತ್ರ, ಪ್ಯಾನ್ ಇಂಡಿಯಾ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮೇಲೆ ಆರೋಪ ಮಾಡಿದ್ದಾರೆ. ಮಗ ದುಲ್ಕರ್ ಬಗ್ಗೆ ಮಾತನಾಡುತ್ತಾ ಮಮ್ಮುಟಿಯವರು, ‘ನನ್ನ ಮಗ ನನಗೆ ಮೋಸ ಮಾಡಿದ್ದಾನೆ’ ಎಂದಿದ್ದಾರೆ. ಡೊಮಿನಿಕ್ ಅರುಣ್ ನಿರ್ದೇಶನದ ಸೂಪರ್ ಹೀರೋ ಚಿತ್ರ ‘ಲೋಕಃ ಚಾಪ್ಟರ್ 1: ಚಂದ್ರ’ ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿತ್ತು. ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮತ್ತು ಸ್ಯಾಂಡಿ ಅಭಿನಯದ ಈ ಚಿತ್ರವನ್ನು ಮಮ್ಮುಟಿಯ ಪುತ್ರ, ನಟ ದುಲ್ಕರ್ ಸಲ್ಮಾನ್ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಮಮ್ಮುಟ್ಟಿ ಅವರು ಮೂತನ್ ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಮ್ಮುಟ್ಟಿ ಈ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ತಾವು ಇರುವುದೇ ತಮಗೆ ತಿಳಿದಿರಲಿಲ್ಲ ಎಂದು ಮಮ್ಮುಟ್ಟಿ ಹಾಸ್ಯಮಯವಾಗಿ ಹೇಳಿದ್ದಾರೆ. ‘ಆರಂಭದಲ್ಲಿ ದುಲ್ಕರ್ ಬರಲಿಲ್ಲ, ಬದಲಿಗೆ ಅವನ ಮ್ಯಾನೇಜರ್ ಮತ್ತು ಗೆಳೆಯ ಬಂದು ಕೇವಲ ಒಂದು ಧ್ವನಿ ನೀಡುವಂತೆ ಕೇಳಿದರು. ನಾನು ಬೇಡ ಎಂದು ಹೇಳಿದ್ದೆ, ಅಷ್ಟನ್ನೇ ಅವರು ರೆಕಾರ್ಡ್ ಮಾಡಿಕೊಂಡರು. ಚಿತ್ರ ಬಿಡುಗಡೆಯಾದಾಗ ಮಾತ್ರ ಅಲ್ಲಿರುವುದು ನಾನೇ ಮತ್ತು ಅಲ್ಲಿ ಕಂಡ ಕೈ ಕೂಡ ನನ್ನದೇ ಎಂದು ಹೇಳಿದರು. ನಿಜ ಹೇಳಬೇಕೆಂದರೆ ಅವರು ನನಗೆ ಮೋಸ ಮಾಡಿ ಆ ಪಾತ್ರ ಮಾಡಿಸಿದ್ದಾರೆ’ ಎಂದು ಮಮ್ಮುಟ್ಟಿ ವಿವರಿಸಿದ್ದಾರೆ. ಚಿತ್ರದ ಎರಡನೇ ಭಾಗದಲ್ಲಿ ನಟಿಸಲು ಮಮ್ಮುಟ್ಟಿಯವರನ್ನು ಒಪ್ಪಿಸುವುದು ಕಷ್ಟ ಎಂದು ದುಲ್ಕರ್ ಹಿಂದೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಮ್ಮುಟ್ಟಿ, “ನಾನು ಸೀಕ್ವೆಲ್‌ನಲ್ಲಿ ನಟಿಸಲು ಒಪ್ಪುವುದು ಮಾತ್ರವಲ್ಲ, ನನ್ನ ಸಂಭಾವನೆಯ ಬಗ್ಗೆಯೂ ಅವರನ್ನು ಒಪ್ಪಿಸಬೇಕಾಗುತ್ತದೆ. ಅವರು ಸಂಭಾವನೆ ನೀಡಲು ಸಿದ್ಧರಿದ್ದರೆ ಮಾತ್ರ ನಾನು ನಟಿಸುತ್ತೇನೆ’ ಎಂದು ತಮಾಷೆಯಾಗಿ ಹೇಳಿದ್ದಾರೆ. ಸಂದರ್ಶನದ ವೇಳೆ ವ್ಯಾಂಪೈರ್ ಪಾತ್ರ ಮಾಡುವ ಬಗ್ಗೆ ಕೇಳಿದಾಗ, ಮಮ್ಮುಟ್ಟಿ ನಗುತ್ತಾ ಅದು ‘ಸಸ್ಪೆನ್ಸ್’ ಎಂದು ಹೇಳಿದ್ದಾರೆ.
ಅಂತೂ ತನ್ನ ಮಗನನ್ನು ಪ್ರೀತಿಯಿಂದಲೇ ದೂರಿದ್ದಾರೆ ಮಮ್ಮುಟಿ. ತನ್ನ ಮಗನ ಸಿನಿಮಾದಲ್ಲಿ ನಟಿಸಬೇಕೆಂದರೆ, ಸಂಭಾವನೆ ನೀಡಬೇಕು ಎಂದು ನಗು ನಗುತ್ತಲೇ ಹೇಳಿದ್ದಾರೆ ಮಮ್ಮುಟಿ.

ನೋಡಿರಿ

