ಶಿವಣ್ಣ ಮೆಚ್ಚಿದ ಪ್ರೀತಮ್.. ಭಾಗ್ಯವಂತನಿಗೆ ಸಿಕ್ತು ಸ್ಪೆಷಲ್ ಗಿಫ್ಟ್! -DKD ಫಿನಾಲೆ.. ಶಿವಣ್ಣ ಭಾವುಕ!

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡಿದೆ. ಶನಿವಾರ ಹಾಗೂ ಭಾನುವಾರ ಫಿನಾಲೆ ಪ್ರಸಾರವಾಗಲಿದೆ. ಆದ್ರೆ ಈ ಶೋನಲ್ಲಿ ಡ್ಯಾನ್ಸ್‌ಗಿಂತಲೂ ಹೈಲೈಟ್ ಆಗಿದ್ದು ಅಂದ್ರೆ ಅದು ಪ್ರೀತಮ್ ಹಾಗೂ ಶಿವಣ್ಣ ಜೋಡಿ. ಇವರಿಬ್ಬರ ಕ್ಯೂಟ್ ಫ್ರೆಂಡ್‌ಶಿಪ್‌ಗೆ ಇಡೀ ಕರುನಾಡೇ ಫಿದಾ ಆಗಿದೆ. ಶಿವಣ್ಣ ಎಲ್ಲಿ ಹೋಗ್ತಾರೋ ಅಲ್ಲಿ ಪ್ರೀತಮ್ ಇದ್ದೇ ಇರ್ತಾನೆ. ಇದೀಗ ಡಿಕೆಡಿ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರೀತಮ್ ಬಗ್ಗೆ ಮಾತನಾಡುತ್ತಾ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಫುಲ್ ಎಮೋಷನಲ್ ಆಗಿದ್ದಾರೆ. ಅಷ್ಟೇ ಅಲ್ಲ.. ಈ ವೇಳೆ ಡಿಕೆಡಿ ಪೋರನಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.
ಇದನ್ನೂ ಓದಿ: ಹಿಂದಿ ಪರೀಕ್ಷೆಯಲ್ಲಿ 100ಕ್ಕೆ 111 ಮಾರ್ಕ್ಸ್! – ಈ ಎಡವಟ್ಟಿಗೆ ಯಾರು ಹೊಣೆ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರದ್ದು ಸರಳ ವ್ಯಕ್ತಿತ್ವ. ದೊಡ್ಮನೆ ಕುಡಿಯಾದ್ರೂ ಒಂಚೂರು ಹಮ್ಮುಬಿಮ್ಮು ಇಲ್ಲ. ಸಣ್ಣ ಪುಟ್ಟ ವಿಚಾರದಲ್ಲಿ ಖುಷಿಯನ್ನ ಕಾಣೋ ಶಿವಣ್ಣನ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಶಿವಣ್ಣನಿಗೆ ಪುಟ್ಟ ಮಕ್ಕಳಂದ್ರೆ ಅಚ್ಚುಮೆಚ್ಚು. ಇದೀಗ ಡಿಕೆಡಿಯಲ್ಲಿ ಶಿವಣ್ಣಗೆ ಪುಟಾಣಿ ಫ್ರೆಂಡ್ ಸಿಕ್ಕಿದ್ದಾರೆ. ಗದಗದ ಪ್ರೀತಮ್‌ಗೆ ಜೊತೆ ಸುಂದರ ಅನುಬಂಧ ಇದೆ. ಆತನ ಜೊತೆ ಶಿವಣ್ಣ ಮಗುವಾಗಿ ಬಿಡ್ತಾರೆ. ಇನ್ನು ಗೀತಾ ಶಿವರಾಜ್‌ಕುಮಾರ್ ಅವರಿಗೂ ಪ್ರೀತಮ್ ಅಂದ್ರೆ ಅಚ್ಚುಮೆಚ್ಚು. ಆತನಿಗಾಗಿಯೇ ಗೀತಕ್ಕ ಕೂಡ ಡಿಕೆಡಿ ಶೂಟಿಂಗ್ ಸೆಟ್‌ಗೆ ಬರ್ತಾ ಇರ್ತಿದ್ರು. ಒಂದು ದಿನವೂ ಆತನ ಡ್ಯಾನ್ಸ್ ಪ್ರೋಗ್ರಾಂ ನೋಡೋದನ್ನ ಮಿಸ್ ಮಾಡಿಕೊಳ್ತಿರ್ಲಿಲ್ಲ. ಅಷ್ಟರ ಮಟ್ಟಿಗೆ ಪ್ರೀತಮ್‌ನ ಶಿವಣ್ಣ ಹಾಗೂ ಗೀತಕ್ಕ ಇಷ್ಟ ಪಡ್ತಿದ್ದಾರೆ.
ಹೌದು.. ಶಿವಣ್ಣ ಹಾಗೂ ಗೀತಕ್ಕ ಅವರಿಗೆ ಪ್ರೀತಮ್ ಅಂದ್ರೆ ಪಂಚಪ್ರಾಣ. ಡಿಕೆಡಿ ಶೂಟಿಂಗ್‌ಗೆ ಬಂದ್ರೆ ಶಿವಣ್ಣ ಪುಟ್ಟ ಮಗುವಾಗಿ ಬಿಡ್ತಾರೆ. ಪ್ರೀತಮ್ ಜೊತೆ ಆಟವಾಡುತ್ತಾ ಕಾಲ ಕಳಿತಾರೆ.. ಮುದ್ದಾಡುತ್ತಾರೆ.. ಹೋದಲ್ಲಿಗೆಲ್ಲಾ ಕರೆದುಕೊಂಡು ಹೋಗ್ತಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 51 ವರ್ಷದ ಹುಟ್ಟುಹಬ್ಬದ ದಿನವೂ ಶಿವಣ್ಣ ಹಾಗೂ ಗೀತಕ್ಕ ಪ್ರೀತಮ್ ಜೊತೆ ಹೋಗಿ ಸ್ಮಾರಕಕ್ಕೆ ಪೂಜೆ ಮಾಡಿದ್ರು. ಇದಿಷ್ಟೇ ಅಲ್ಲ.. ಪ್ರೀತಮ್‌ಗೋಸ್ಕರ ಶಿವಣ್ಣ ಗಾಜನೂರಿಗೆ ಎಲ್ಲಾ ಡಿಕೆಡಿ ಸ್ಪರ್ಧಿಗಳನ್ನ ಕರೆದುಕೊಂಡು ಹೋಗಿದ್ದರು. ಅಲ್ಲಿನ ಫಾರ್ಮ್ ಹೌಸ್‌ನಲ್ಲಿ ಪ್ರೀತಮ್ ಜೊತೆಗೆ ಕಣ್ಣಾಮುಚ್ಚಾಲೆ ಆಡಿ, ಅವನಿಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ನಾನ ಮಾಡಿಸಿ, ಆಟ ಆಡಿಸಿ ಆನಂದಪಟ್ಟಿದ್ದರು. ಅದು ಅಲ್ಲದೇ ಪ್ರೀತಮ್‌ಗೆ ಪುಟಾಣಿ ಕಾಸ್ಟ್ಲೀ ಬೈಕ್ ಗಿಫ್ಟ್ ಮಾಡಿದ್ದರು. ಇದೀಗ ಈ ಪುಟಾಣಿ ಫ್ರೆಂಡ್‌ಗೆ ಡಿಕೆಡಿ ಗ್ರ್ಯಾಂಡ್ ಫಿನಾಲೆಯಲ್ಲಿ ಅತ್ಯಮೂಲ್ಯವಾದ ಗಿಫ್ಟ್ ಸಿಕ್ಕಿದೆ.
ಡಿಕೆಡಿ ಗ್ರ್ಯಾಂಡ್ ಫಿನಾಲೆಯ ಹೊಸ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಪ್ರೀತಮ್ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಜಬರ್‌ದಸ್ತ್ ಡ್ಯಾನ್ಸ್ ಮಾಡಿದ್ದಾನೆ. ಆತನ ಕ್ಯೂಟ್ ಎಕ್ಸ್‌ಪ್ರೆಷನ್, ಸ್ಟೆಪ್ಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಆತನ ಪರ್ಫಾಮೆನ್ಸ್ ಮುಗಿಯುತ್ತಿದ್ದಂತೆ ಶಿವಣ್ಣ ಸ್ಟೇಜ್‌ಗೆ ಬಂದು ಪ್ರೀತಮ್‌ನ ಎತ್ತಿ ಮುದ್ದಾಡಿದ್ದಾರೆ. ದೇವರು ಬಂದು ಸಿಕ್ಕಿರೋದು ಬಹಳ ಪುಣ್ಯ ಅಂತ ಭಾವಿಸ್ತೀನಿ. ಪ್ರೀತಮ್ ಇಸ್ ಆಲ್‌ವೇಸ್ ಮೈನ್ ಅಂಡ್ ಗೀತಾಸ್ ಎಂದು ಹೇಳುಗತ್ತಾ ಶಿವಣ್ಣ ಫುಲ್ ಎಮೋಷನಲ್ ಆಗಿದ್ದಾರೆ. ಬಳಿಕ ಪ್ರೀತಮ್‌ನ ಎತ್ತಿ ಮುದ್ದಾಡಿ, ಮುತ್ತುಗಳ ಸುರಿಮಳೆ ಸುರಿಸಿದ್ದಾರೆ. ನಂತ್ರ ಶಿವಣ್ಣ ಪ್ರೀತಮ್‌ನ ಎತ್ತಿಕೊಂಡಿರುವ ಕ್ಯೂಟ್ ಸ್ಟ್ಯಾಚ್ಯುನ್ನ ಗಿಫ್ಟ್ ನೀಡಿದ್ದಾರೆ.
ಇದೀಗ ಈ ಪ್ರೋಮೋ ನೋಡಿದ ವೀಕ್ಷಕರು ಈ ಕ್ಯೂಟ್ ಫ್ರೆಂಡ್‌ಶಿಪ್‌ಗೆ ಜೈ ಅಂದಿದ್ದಾರೆ. ಪ್ರೀತಮ್ ನಿಜಕ್ಕೂ ಭಾಗ್ಯವಂತ. ಯಾಕಂದ್ರೆ ಯಾವುದೋ ಹಳ್ಳಿಯಲ್ಲಿದ್ದ ಪ್ರೀತಮ್ ಈಗ ದೊಡ್ಮನೆಯ ಮಗ ಆಗಿದ್ದಾನೆ. ದೊಡ್ಮನೆಯ ಕುಟುಂಬದವರ ಟೈಮ್‌ಸ್ಪೆಂಡ್ ಮಾಡುವ ಭಾಗ್ಯ ಅವನಿಗೆ ಸಿಕ್ಕಿದೆ. ಈ ಪುಟಾಣಿ ನಿಜಕ್ಕೂ ಗ್ರೇಟ್ ಅಂತ ವೀಕ್ಷಕರು ಹೇಳ್ತಿದ್ದಾರೆ.

ನೋಡಿರಿ

