ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾ ಸೆಟ್ನಲ್ಲಿ ಬೆಂಕಿ – ಅಗ್ನಿಅವಘಡದಲ್ಲಿ ಚಿತ್ರತಂಡದ ಹಲವರಿಗೆ ಗಾಯ

ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾ ಸೆಟ್ನಲ್ಲಿ ಅವಘಡ ಸಂಭವಿಸಿದೆ. ಸಿನಿಮಾ ಸೆಟ್ ಗೆ ಬೆಂಕಿ ತಗುಲಿದ್ದು, ಚಿತ್ರತಂಡದ ಹಲವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಅತ್ಯುತ್ತಮ ಸಿನಿಮಾ ಕಾಂತಾರ, ನಟ ರಿಷಭ್ ಶೆಟ್ಟಿ – ರಶ್ಮಿಕಾಗೂ ಅವಾರ್ಡ್, ಮಿರಾಯಿ ಸಿನಿಮಾಗೂ ಪ್ರಶಸ್ತಿಯ ಗರಿ
ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್ ಸಿನಿಮಾ ಸೆಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಕೆಲವರಿಗೆ ಬೆಂಕಿ ತಗುಲಿದ್ದು, ಕೆಲವರು ಗಾಯಗೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿತ್ತು. ಹೈದರಾಬಾದ್ನ ಸೆಟ್ನಲ್ಲಿ ಈ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸಿನಿಮಾದ ಸಿಬ್ಬಂದಿಗಾಗಿ ಹಾಕಲಾಗಿದ್ದ ಸೆಟ್ ಸಂಪೂರ್ಮ ಸುಟ್ಟ ಹೋಗಿದೆ. ಸಿನಿಮಾ ತಂಡದ ಕೆಲವು ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.
ಈ ಬೆಂಕಿ ಅನಾಹುತದಲ್ಲಿ ಚಿತ್ರತಂಡದ ಕೆಲವರಿಗೆ ಸುಟ್ಟ ಗಾಯಗಳಾಗಿದೆ. ಈ ಘಟನೆ ನಡೆದಾಗ ನಟ ಪ್ರಭಾಸ್ ಅವರು ಸೆಟ್ನಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಶುಕ್ರವಾರ ಬೆಳಗ್ಗೆ (ಏಪ್ರಿಲ್ 10) ಈ ಘಟನೆ ನಡೆದಿದೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದ ಸೆಟ್ಗೂ ಸಹ ಬೆಂಕಿ ತಗುಲಿತ್ತು. ‘ಆದಿಪುರುಷ್’ ಸಿನಿಮಾಕ್ಕಾಗಿ ಮುಂಬೈನಲ್ಲಿ ಭಾರಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಇಡೀ ಸೆಟ್ ಬೆಂಕಿಗೆ ಆಹುತಿಯಾಯ್ತು. ನಂತರ ಸಿನಿಮಾ ಬಿಡುಗಡೆ ಆದ ಬಳಿಕ ದೊಡ್ಡ ಫ್ಲಾಪ್ ಆಯ್ತು. ಇದೀಗ ‘ಸ್ಪಿರಿಟ್’ ಸಿನಿಮಾದ ಸೆಟ್ಗೂ ಬೆಂಕಿ ಬಿದ್ದಿರುವುದು ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗುರುವಾರವಷ್ಟೇ ಸಂದೀಪ್ ರೆಡ್ಡಿ ವಂಗಾ ತಮ್ಮ ಸಿನಿಮಾ ಸ್ಪಿರಿಟ್ ಬಗ್ಗೆ ಮಾತನಾಡಿದ್ದರು. ಸಿನಿಮಾದ ಚಿತ್ರೀಕರಣ ಬೇಗನೆ ಸಾಗುತ್ತಿದ್ದು, ಬೇಗನೆ ಚಿತ್ರೀಕರಣ ಮುಗಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

ನೋಡಿರಿ

