ಹಿಂದಿ ಪರೀಕ್ಷೆಯಲ್ಲಿ 100ಕ್ಕೆ 111 ಮಾರ್ಕ್ಸ್! – ಈ ಎಡವಟ್ಟಿಗೆ ಯಾರು ಹೊಣೆ!

ಹಿಂದಿ ಪರೀಕ್ಷೆಯಲ್ಲಿ 100ಕ್ಕೆ 111 ಮಾರ್ಕ್ಸ್! – ಈ ಎಡವಟ್ಟಿಗೆ ಯಾರು ಹೊಣೆ!

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ರಾಜ್ಯದಲ್ಲಿ ಶೇ86ರಷ್ಟು ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಆದ್ರೀಗ ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿ ಮಾಡಿರುವ ಎಡವಟ್ಟು ಈಗ ರಾಜ್ಯಾದ್ಯಂತ ಟೀಕೆಗೆ ಗುರಿಯಾಗಿದೆ. ಹಿಂದಿ ವಿಷಯದಲ್ಲಿ ವಿದ್ಯಾರ್ಥಿಯೊಬ್ಬರಿಗೆ ನೂರಲ್ಲಿ 101 ಮಾರ್ಕ್‌ ಸಿಕ್ಕಿದೆ.

ಇದನ್ನೂ ಓದಿ:‌ ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತಕ್ಕೆ ಮೂವರು ಬಲಿ! – ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರ ಮೃತದೇಹಗಳು ಪತ್ತೆ

ಹೌದು.. ಸಾಮಾನ್ಯವಾಗಿ100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಪಿಯು ಬೋರ್ಡ್ ಮಾತ್ರ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ವಿಷಯದಲ್ಲಿ ಬರೋಬ್ಬರಿ 111 ಅಂಕಗಳನ್ನು ನೀಡಿ ನೀಡಿ ಪಾಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಅಂಕಪಟ್ಟಿಯಲ್ಲಿ ಈ ಸಂಖ್ಯೆಯನ್ನು ಕಂಡು ವಿದ್ಯಾರ್ಥಿ ಮಾತ್ರವಲ್ಲದೆ ಪೋಷಕರು ಕೂಡ ದಂಗಾಗಿದ್ದಾರೆ.

ವಿದ್ಯಾರ್ಥಿಯು ಇನ್ನಷ್ಟು ಅಂಕ ಗಳಿಸಲು ಅಥವಾ ರಿಪೀಟರ್ ಆಗಿ ಪರೀಕ್ಷೆ ಬರೆದಿದ್ದ ಎನ್ನಲಾಗಿದೆ. ಈತನಿಗೆ ಹಿಂದಿ ಥಿಯರಿಯಲ್ಲಿ 94 ಅಂಕಗಳು ಬಂದಿದ್ದರೆ, ಕಾಲೇಜು 17 ಆಂತರಿಕ ಅಂಕಗಳನ್ನು ನೀಡಿದೆ. ಮಂಡಳಿಯು ಇವೆರಡನ್ನೂ ಕೂಡಿಸಿ ಒಟ್ಟು 111 ಅಂಕಗಳನ್ನು ನೀಡಿ ಪಾಸ್ ಎಂದು ಘೋಷಿಸಿದೆ. ಈ ವರ್ಷ ಐತಿಹಾಸಿಕ ಫಲಿತಾಂಶ ಎಂದು ಬೀಗುತ್ತಿದ್ದ ಶಿಕ್ಷಣ ಸಚಿವರಿಗೆ ಮಂಡಳಿಯ ಈ ಎಡವಟ್ಟಿನ ಸಾಧನೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಶಿಕ್ಷಣ ಇಲಾಖೆಯ ಸುಧಾರಣೆ ಬಗ್ಗೆ ಮಾತನಾಡುವ ಸಚಿವರು ಈ ತಾಂತ್ರಿಕ ಲೋಪದ ಬಗ್ಗೆ ಏನು ಹೇಳುತ್ತಾರೆ? ವಿದ್ಯಾರ್ಥಿ ಥಿಯರಿಯಲ್ಲಿ ಪಡೆದ ಅಂಕಗಳು ಸರಿಯೋ ಅಥವಾ ಆಂತರಿಕ ಅಂಕಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆಯೋ ಎಂಬ ಸಂಶಯ ಈಗ ಕಾಡುತ್ತಿದೆ. ಇಂತಹ ಎಡವಟ್ಟುಗಳು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತಿದೆ.

Shwetha M