ಇನ್ನೂ ಪತ್ತೆಯಾಗಿಲ್ಲ ಕೇರಳದ ಬಾಲಕಿ ಶ್ರೀನಂದಾ – ಹತ್ತನೇ ತರಗತಿ ವಿದ್ಯಾರ್ಥಿನಿಗಾಗಿ ಮುಂದುವರೆದ ಶೋಧ

ಕೇರಳದ ಹತ್ತನೇ ತರಗತಿ ವಿದ್ಯಾರ್ಥಿನಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನಾಪತ್ತೆಯಾಗಿ ಮೂರು ದಿನಗಳು ಕಳೆದಿವೆ. ಆದರೆ, ಇನ್ನೂ ಕೂಡಾ ವಿದ್ಯಾರ್ಥಿನಿ ಪತ್ತೆಯಾಗಿಲ್ಲ. ಬಾಲಕಿ ಅಪಹರಣವಾಗಿದ್ದಾಳೆ ಎಂಬ ಆರೋಪದ ನಡುವೆಯೂ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಶೋಧ ಮುಂದುವರೆದಿದೆ.
ಇದನ್ನೂ ಓದಿ:ಶ್ರೀನಂದಾ ನಾಪತ್ತೆ ಕೇಸ್ಗೆ ಬಿಗ್ ಟ್ವಿಸ್ಟ್! – ಕೇರಳದ ಬಾಲಕಿ ಕಿಡ್ನ್ಯಾಪ್ ಆಗಿದ್ದಾಳಾ?
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ನಾಪತ್ತೆಯಾಗಿ ಮೂರು ದಿನಗಳು ಕಳೆದಿದೆ. ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಶ್ರೀನಂದಾ ತನ್ನ ಕುಟುಂಬದ ಜೊತೆ ಪ್ರವಾಸಕ್ಕೆ ಆಗಮಿಸಿದ್ದರು. ಇನಾಮು ದತ್ತಾತ್ರೇಯ ಬಾಬುಡಂ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಮಾಣಿಕ್ಯಧಾರಾ ಬಳಿ ವಿದ್ಯಾರ್ಥಿನಿ ನಾಪತ್ತೆಯಾಗಿದ್ದರು. ಕಳೆದ ಮೂರು ದಿನಗಳಿಂದ ಬಾಲಕಿಗಾಗಿ ಹುಡುಕಾಟ ಮುಂದುವರೆದಿದೆ. ಮತ್ತೊಂದೆಡೆ ಬಾಲಕಿಯ ತಾಯಿ ಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಇನ್ನು ಸ್ಥಳದಲ್ಲಿ SDRF, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಎನ್ಎಫ್ ತಂಡಗಳು ಸೇರಿ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿವೆ. ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಬಳಸಿ ಕಾರ್ಯಚರಣೆ ನಡೆಸಲಾಗುತ್ತಿದೆ. ಕೇರಳದಿಂದಲೂ ಪೊಲೀಸರ ತಂಡ ಆಗಮಿಸಿದ್ದು, ಪೋಷಕರ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ನೋಡಿರಿ

