ಶ್ರೀನಂದಾ ನಾಪತ್ತೆ ಕೇಸ್ಗೆ ಬಿಗ್ ಟ್ವಿಸ್ಟ್! – ಕೇರಳದ ಬಾಲಕಿ ಕಿಡ್ನ್ಯಾಪ್ ಆಗಿದ್ದಾಳಾ?

ಕಾಫಿನಾಡು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ನಾಪತ್ತೆಯಾಗಿದ್ದಾಳೆ. ಆಕೆಗಾಗಿ ಕಳೆದ ಎರಡು ದಿನಗಳಿಂದ ಶೋಧಕಾರ್ಯ ನಡೆಸಲಾಗುತ್ತಿದೆ. ಇದೀಗ ಈ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಬಾಲಕಿ ತಾಯಿ ಹೇಳಿಕೆ ತನಿಖೆಯ ದಿಕ್ಕನ್ನೇ ಬದಲಿಸುವಂತೆ ಮಾಡಿದೆ.
ಇದನ್ನೂ ಓದಿ: DKD ವಿನ್ನರ್ ಸಿದ್ದೇಗೌಡ್ರು.. ವೈರಲ್ ಪೂಜಾ, ಅನೂಪ್ಗೆ ಮೋಸ?
ಟ್ರೆಕ್ಕಿಂಗ್ಗೆ ಬಂದಿದ್ದ ಶ್ರೀನಂದಾ ನಾಪತ್ತೆಯಾಗಿ ಎರಡು ದಿನ ಕಳೆದಿದೆ. ಜಿಲ್ಲಾ ಪೊಲೀಸ್ ತಂಡ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಗೈಡ್ಗಳು ಮಾಣಿಕ್ಯಧಾರದ ಸುತ್ತಮುತ್ತಲಿನ ಆಳವಾದ ಕಣಿವೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ದಟ್ಟವಾದ ಮಂಜು ಮತ್ತು ಕಡಿದಾದ ಹಾದಿಗಳು ಶೋಧ ಕಾರ್ಯಕ್ಕೆ ಅಡ್ಡಿಯುಂಟುಮಾಡುತ್ತಿವೆ. ಬಾಲಕಿ ಆಕಸ್ಮಿಕವಾಗಿ ಬಿದ್ದಿದ್ದರೆ ಇಷ್ಟೊತ್ತಿಗಾಗಲೇ ಏನಾದರೂ ಸುಳಿವು ಸಿಗಬೇಕಿತ್ತು. ಆದರೆ ಯಾವುದೇ ಕುರುಹು ಸಿಕ್ಕಿಲ್ಲ. ಇದೀಗ ಶ್ರೀನಂದಾ ತಾಯಿ ಈ ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ನನ್ನ ಮಗಳು ಆಕಸ್ಮಿಕವಾಗಿ ಎಲ್ಲಿಯೂ ಬಿದ್ದಿರಲು ಸಾಧ್ಯವೇ ಇಲ್ಲ. ಅವಳನ್ನು ಯಾರೋ ಸಂಚು ರೂಪಿಸಿ ಅಪಹರಿಸಿದ್ದಾರೆ. ಅವಳು ಒಬ್ಬಳೇ ಇದ್ದ ಸಮಯವನ್ನು ನೋಡಿ, ಯಾವುದೋ ಮಾದಕ ದ್ರವ್ಯ ನೀಡಿ ಅಥವಾ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ರೋಹಿಣಿ ಆರೋಪಿಸಿದ್ದಾರೆ.
ಇನ್ನು ಬಾಲಕಿ ಹೇಳಿಕೆ ಬೆನ್ನಲ್ಲೇ ಚಿಕ್ಕಮಗಳೂರು ಪೊಲೀಸರು ಈಗ ಕೇವಲ ಕಣಿವೆಯಲ್ಲಿ ಹುಡುಕಾಟ ನಡೆಸುವುದಷ್ಟೇ ಅಲ್ಲದೆ, ಪ್ರವಾಸಿ ತಾಣದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಅಂದು ಮಾಣಿಕ್ಯಧಾರಕ್ಕೆ ಬಂದಿದ್ದ ವಾಹನಗಳ ವಿವರ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಗಳನ್ನು ಹುಡುಕಿಕೊಡಿ, ಅವಳಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂದು ತಾಯಿ ರೋಹಿಣಿ ಕಣ್ಣಿರು ಹಾಕಿದ್ದಾರೆ. ಸದ್ಯ ಮಾಣಿಕ್ಯಧಾರ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪ್ರತಿಯೊಬ್ಬ ಪ್ರವಾಸಿಯ ಮೇಲೆಯೂ ನಿಗಾ ಇಡಲಾಗುತ್ತಿದೆ. ಬಾಲಕಿಯ ಸುಳಿವು ನೀಡಿದವರಿಗೆ ಬಹುಮಾನ ನೀಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ನೋಡಿರಿ

