ನಿಂತಲ್ಲೇ ನಿಲ್ಲೋ ನಶೆ – ರಾಜಧಾನಿ ಬೆಂಗಳೂರಿಗೆ ಕಾಲಿಡ್ತಾ ಜಾಂಬಿ ಡ್ರ*ಗ್

ಬೆಂಗಳೂರಿನಲ್ಲಿ ಜಾಂಬಿ ಡ್ರಗ್ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಸ್ಥಳವೊಂದರಲ್ಲಿ ಯುವಕನೊಬ್ಬ ಪ್ರಜ್ಞೆ ತಪ್ಪಿದವನಂತೆ, ಗಂಟೆಗಟ್ಟಲೆ ಒಂದೇ ಕಡೆ ನಿಶ್ಚಲವಾಗಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಯುವಕನ ವಿಚಿತ್ರ ವರ್ತನೆಗೆ ನಿಖರ ಕಾರಣವೇನು ಎಂಬ ಪ್ರಶ್ನೆ ಇದೀಗ ನೆಟ್ಟಿಗರನ್ನು ಕಾಡುತ್ತಿದ್ದು, ಆನ್ಲೈನ್ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವರದಿಗಳ ಪ್ರಕಾರ, ಈ ವಿಡಿಯೋವನ್ನು ನಗರದ ಬಾಗಲೂರು ಪ್ರದೇಶದ ನಿಟ್ಟೆ ಕಾಲೇಜು ಬಳಿ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿರುವ ಯುವಕ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಕಿಂಚಿತ್ತೂ ಅರಿವಿಲ್ಲದಂತೆ ಒಂದೇ ಭಂಗಿಯಲ್ಲಿ ನಿಶ್ಚಲವಾಗಿ ನಿಂತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಬಳಕೆದಾರರು, ಇದು ಅತ್ಯಂತ ಆತಂಕಕಾರಿ ವಿಚಾರ ಎಂದು ಎಚ್ಚರಿಸಿದ್ದು, ನಗರಕ್ಕೆ ‘ಜಾಂಬಿ ಡ್ರಗ್’ ಎಂದು ಕರೆಯಲಾಗುವ ಅಪಾಯಕಾರಿ ಮಾದಕ ವಸ್ತು ಪ್ರವೇಶಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಇರಾನ್ ಕದನ ವಿರಾಮ ಬೆನ್ನಲ್ಲೇ ಲೆಬೆನಾನ್ ಮೇಲೆ ಮುಗಿಬಿದ್ದಇಸ್ರೇಲ್
. ಪೋಷಕರು, ಯುವಕರು ಮತ್ತು ಪೊಲೀಸರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಸಮಯವಿದು. ಇದು ನಮ್ಮ ನಗರಕ್ಕೆ ನೀಡುತ್ತಿರುವ ಗಂಭೀರ ಎಚ್ಚರಿಕೆ. ಬೆಂಗಳೂರು ‘ಉಡ್ತಾ ಬೆಂಗಳೂರು’ ಆಗುತ್ತಿದೆ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಿ!” ಎಂದು ಪೋಸ್ಟ್ನ ಕ್ಯಾಪ್ಷನ್ನಲ್ಲಿ ಬರೆಯಲಾಗಿದೆ.
ಇನ್ನು ಇದರ ಬಗ್ಗೆ ದುನಿಯಾ ವಿಜಯ್ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಬೆಂಗಳೂರಿಗೆ ಹೊಸ ಡ್ರಗ್ಸ್ ಬಂದಿರುವ ಶಂಕೆ ಇದೆ. ಇದನ್ನು ಜಾಂಬಿ ಡ್ರಗ್ಸ್ ಎಂದು ಕರೆಯುತ್ತಾರೆ ಎಂದು ನಟ ದುನಿಯಾ ವಿಜಯ್ ಅವರು ಹೇಳಿದ್ದಾರೆ. ಯುವಕರು ಈ ವಿಚಾರದಲ್ಲಿ ತುಂಬಾ ಹುಷಾರಾಗಿ ಇರಬೇಕು. ಯುವಕರೊಂದಿಗೆ ಹೆಚ್ಚಾಗಿ ಈ ವಿಚಾರದಲ್ಲಿ ಪೋಷಕರು ಸಹ ಹೆಚ್ಚಿನ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ. ಮನೆಯಲ್ಲಿ ಇರುವ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ನೋಡಿರಿ

