ಮೊದಲ ಗೆಲುವಿನ ಹುಡುಕಾಟದಲ್ಲಿ KKR – ಕೋಲ್ಕತ್ತಾ ತಂಡಕ್ಕೆ LSG ಸವಾಲ್

ಮೊದಲ ಗೆಲುವಿನ ಹುಡುಕಾಟದಲ್ಲಿ KKR – ಕೋಲ್ಕತ್ತಾ ತಂಡಕ್ಕೆ LSG ಸವಾಲ್

ಈ ಸೀಸನ್‌ನ ಐಪಿಎಲ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಒಂದೇ ಒಂದು ಗೆಲುವು ಸಿಕ್ಕಿರಲಿಲ್ಲ. ಇದೀಗ ಕೆಕೆಆರ್ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಮತ್ತೊಂದೆಡೆ  ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತೊಂದು ಜಯಕ್ಕಾಗಿ ಕಾದಾಡಲಿದೆ.

ಇದನ್ನೂ ಓದಿ:ಒಂದೇ ಒಂದು ರನ್‌ನಿಂದ ಸೋತ ಡೆಲ್ಲಿ – ಗೆಲುವಿನ ಖಾತೆ ತೆರೆದ ಗುಜರಾತ್ ಟೈಟಾನ್ಸ್

ಐಪಿಎಲ್ ಪಾಯಿಂಟ್ಸ್ ಟೇಬಲ್ ನಲ್ಲಿ 9ನೇ ಸ್ಥಾನ ಪಡೆದಿರುವ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಈ ಬಾರಿ ಗೆಲುವಿನ ಖಾತೆಯನ್ನು ತೆರೆದಿಲ್ಲ. ಹೀಗಾಗಿ ಕೆಕೆಆರ್ ತಂಡ ತನ್ನ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಇದೀಗ ಗುರುವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಾಡಲಿದೆ. ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ ಲಕ್ನೋ ವಿರುದ್ಧ ಗೆಲ್ಲಲು ಪ್ಲ್ಯಾನ್ ರೂಪಿಸಿದೆ. ಮತ್ತೊಂದೆಡೆ ಲಖನೌ ತಂಡ ಸೋಲಿನ ಮೂಲಕ ತನ್ನ ಅಭಿಯಾನ ಆರಂಭಿಸಿದರೂ ಕೂಡಾ ಸನ್‌ರೈಸರ್ಸ್‌ ವಿರುದ್ಧ ಗೆಲುವು ಗಳಿಸಿತ್ತು.

ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸವಾಲು ಎದುರಾಗಿದೆ. ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಶಮಿ ಮಾರಕವಾಗಬಹುದು. ಶಮಿ, ಸನ್‌ರೈಸರ್ಸ್‌ ವಿರುದ್ಧ 4 ಓವರ್‌ನಲ್ಲಿ ಕೇವಲ 9 ರನ್‌ ನೀಡಿದ್ದರು. ಇನ್ನು, ಈ ಪಂದ್ಯದಲ್ಲಿ ಕ್ಯಾಮರೂನ್‌ ಗ್ರೀನ್‌ ಬೌಲ್‌ ಮಾಡುವ ಸಾಧ್ಯತೆಯಿದ್ದು, ಕೆಕೆಆರ್‌ಗೆ ಬಲ ತಂದುಕೊಡಲಿದೆ. ಮತ್ತೊಂದೆಡೆ, ರಿಷಭ್‌ ಪಂತ್‌ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದರು. ಲಾಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ರಿಷಭ್ ಪಂತ್ ಕೆಕೆಆರ್ ವಿರುದ್ಧವೂ ಸಿಡಿಯಲು ಸಿದ್ದರಾಗಿದ್ದಾರೆ. ಮತ್ತೊಂದೆಡೆ ಪಂತ್‌ಗೆ ಪೂರನ್ ಕೂಡಾ ಸಾಥ್ ನೀಡುವ ಸಾಧ್ಯತೆಯಿದೆ.

Sulekha