‘ಧುರಂಧರ್ 2’ ಚಿತ್ರಕ್ಕೆ ಕಾಪಿರೈಟ್ ಸಂಕಷ್ಟ – ಅನುಮತಿ ಇಲ್ಲದೇ ಓಯೆ ಓಯೆ ಹಾಡು ಬಳಸಿದ್ರಾ ಆದಿತ್ಯ ಧರ್?

‘ಧುರಂಧರ್ 2’ ಚಿತ್ರಕ್ಕೆ ಕಾಪಿರೈಟ್ ಸಂಕಷ್ಟ – ಅನುಮತಿ ಇಲ್ಲದೇ ಓಯೆ ಓಯೆ  ಹಾಡು ಬಳಸಿದ್ರಾ ಆದಿತ್ಯ ಧರ್?

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಚಿತ್ರಕ್ಕೆ ಈಗ ಕಾಪಿರೈಟ್ ಸಂಕಷ್ಟ ಎದುರಾಗಿದೆ. 1989ರ ‘ತ್ರಿದೇವ್’ ಚಿತ್ರದ ಜನಪ್ರಿಯ ‘ಓಯೆ ಓಯೆ’ ಹಾಡನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ತ್ರಿಮೂರ್ತಿ ಫಿಲ್ಮ್ಸ್ ಆರೋಪಿಸಿ, ನಿರ್ದೇಶಕ ಆದಿತ್ಯ ಧರ್ ವಿರುದ್ಧ ಕೇಸ್ ದಾಖಲಿಸಿದೆ.

1989ರಲ್ಲಿ ತೆರೆಕಂಡಿದ್ದ ಸನ್ನಿ ಡಿಯೋಲ್‌, ನಾಸಿರುದ್ದೀನ್ ಶಾ, ಜಾಕಿ ಶ್ರಾಫ್‌ ಅಭಿನಯದ, ರಾಜೀವ್ ರೈ ನಿರ್ದೇಶನದ ʻತ್ರಿದೇವ್‌ʼ ಸಿನಿಮಾದ ʻಓಯೆ ಓಯೆʼ ಹಾಡನ್ನು ‘ಧುರಂಧರ್: ದಿ ರಿವೆಂಜ್’ ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ತ್ರಿದೇವ್‌ ಚಿತ್ರದ ನಿರ್ಮಾಪಕರಾದ ತ್ರಿಮೂರ್ತಿ ಫಿಲ್ಮ್ಸ್ ಈಗ ನಿರ್ದೇಶಕ ಆದಿತ್ಯ ಧರ್ ಅವರ B62 ಸ್ಟುಡಿಯೋಸ್ ವಿರುದ್ಧ ಮೊಕದ್ದಮೆ ಹೂಡಿದೆ. ಅಂದಹಾಗೆ, ತ್ರಿದೇವ್‌ ಚಿತ್ರಕ್ಕಾಗಿ ಈ ಹಾಡನ್ನು ಕಲ್ಯಾಣ್ ಜಿ-ಆನಂದ್ ಜಿ ಮತ್ತು ವಿಜು ಶಾ ಸಂಯೋಜಿಸಿದ್ದರು. ಆನಂದ್ ಬಕ್ಷಿ ಸಾಹಿತ್ಯ ಬರೆದಿದ್ದರು. ಇದು ಅಮಿತ್ ಕುಮಾರ್ ಮತ್ತು ಸಪ್ನಾ ಮುಖರ್ಜಿ ಹಾಡಿದ್ದರು.

ಇದನ್ನೂ ಓದಿ: ಜಾತ್ರೆಗೆ ಹೋದ ಮದುಮಗ ದುರಂತ ಅಂತ್ಯ! – ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್​ ಹರಿದು ಯುವಕ ಸಾವು!

ಬಾರ್ ಅಂಡ್ ಬೆಂಚ್’ ವರದಿಯ ಪ್ರಕಾರ, ಧುರಂಧರ್‌ 2 ಚಿತ್ರತಂಡ ಅಗತ್ಯ ಪರವಾನಗಿ ಅಥವಾ ಅನುಮತಿ ಪಡೆಯದೆ ಈ ಹಾಡನ್ನು ಅಥವಾ ಅದರಂತೆಯೇ ಇರುವ ಆವೃತ್ತಿಯನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ತ್ರಿಮೂರ್ತಿ ಫಿಲ್ಮ್ಸ್ ನ್ಯಾಯಾಲಯಕ್ಕೆ ಹೇಳಿದೆ. ಹಾಡಿನ ಸಂಗೀತ ಮತ್ತು ಧ್ವನಿಮುದ್ರಣದ ಸಂಪೂರ್ಣ ಹಕ್ಕುಗಳು ತಮ್ಮ ಬಳಿಯೇ ಇವೆ ಎಂದು ಹೇಳಿರುವ ತ್ರಿಮೂರ್ತಿ ಫಿಲ್ಮ್ಸ್, ಇದು ಕಾಪಿರೈಟ್ (ಹಕ್ಕುಸ್ವಾಮ್ಯ) ಉಲ್ಲಂಘನೆ ಎಂದು ಆರೋಪಿಸಿದೆ. ಚಿತ್ರಮಂದಿರ, ಒಟಿಟಿ ಪ್ಲಾಟ್‌ಫಾರ್ಮ್ ಮತ್ತು ಪ್ರಚಾರದ ಸಂದರ್ಭದಲ್ಲಿ ಈ ಹಾಡನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಓಯೆ ಓಯೆ ಹಾಡನ್ನು ಮುಂದಿನ ದಿನಗಳಲ್ಲಿ ಬಳಸದಂತೆ ತಡೆಯಾಜ್ಞೆ ನೀಡಬೇಕು ಮತ್ತು ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ತ್ರಿಮೂರ್ತಿ ಫಿಲ್ಮ್ಸ್ ಮೊಕದ್ದಮೆಯಲ್ಲಿ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಈ ಅರ್ಜಿಯನ್ನ ವಿಚಾರಣೆ ಮಾಡಲಿದ್ದು, ಧುರಂಧರ್‌ 2 ಸಿನಿಮಾ ತಂಡ ಏನು ಹೇಳಲಿದೆ ಎಂಬುದನ್ನು ಕಾದುನೋಡಬೇಕು

Kishor KV