ಕರ್ನಾಟಕ ಸೇರಿ ಒಟ್ಟು ಐದು ರಾಜ್ಯಗಳಲ್ಲಿ ಬಿರುಸಿನ ಮತದಾನ – ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಬಾಗಲಕೋಟೆ ಕೈ ಆಭ್ಯರ್ಥಿ ಉಮೇಶ್ ಮೇಟಿ

ಕರ್ನಾಟಕ ಸೇರಿ ಒಟ್ಟು ಐದು ರಾಜ್ಯಗಳಲ್ಲಿ ಬಿರುಸಿನ ಮತದಾನ –  ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಬಾಗಲಕೋಟೆ ಕೈ ಆಭ್ಯರ್ಥಿ ಉಮೇಶ್ ಮೇಟಿ

ಕರ್ನಾಟಕ ಸೇರಿ ಒಟ್ಟು ಐದು ರಾಜ್ಯಗಳಲ್ಲಿ ಬೆಳಗ್ಗೆಯಿಂದಲೇ ಬಿರುಸಿನ  ಮತದಾನ ನಡೆಯುತ್ತಿದೆ.   ಕರ್ನಾಟಕದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ವೋಟಿಂಗ್ ನಡೆಯುತ್ತಿದ್ದು, ಮತದಾರರು  ಬೆಳಗ್ಗೆಯಿಂದಲೇ ಉತ್ಸಾಹದಿಂದ ವೋಟಂಗ್‌ನಲ್ಲ ಭಾಗಿಯಾಗುತ್ತಿದ್ದಾರೆ.

ಈ ಎರಡೂ ಕ್ಷೇತ್ರಗಳು ಆಡಳಿತಾರೂಢ ಕಾಂಗ್ರೆಸ್‌ನ ಪ್ರತಿಷ್ಠೆಯ ಕಣಳಾಗಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಮತ್ತು ಬಿಜೆಪಿಯಿಂದ ಶ್ರೀನಿವಾಸ್ ಟಿ. ದಾಸಕರಿಯಪ್ಪ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರೆ, ಅತ್ತ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ಸೇರಿದಂತೆ ಒಟ್ಟು 20 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯುತ್ತಿದೆ.

ಇದನ್ನೂ ಓದಿ: ಗೆಲುವಿನ ಹೊಸ್ತಿಲಲ್ಲಿ ಎಡವಿದ ಡೆಲ್ಲಿ – ತನ್ನಿಂದ ಪಂದ್ಯ ಸೋತಿದ್ದಕ್ಕೆ ಮಿಲ್ಲರ್ ಕಣ್ಣೀರು

ಬಾಗಲಕೋಟೆ ಬೈ ಎಲೆಕ್ಷನ್ ಹಿನ್ನೆಲೆ ಮತದಾನ ಬಹಳ ಬಿರುಸಿನಿಂದ ನಡೆಯುತ್ತಿದ್ದು, ಕಾಂಗ್ರೆಸ್​​ ಅಭ್ಯರ್ಥಿ ಉಮೇಶ್​ ಮೇಟಿ ಮತಗಟ್ಟೆಗಳಿಗೆ ಭೇಟಿ ನೀಡುತ್ತಿದ್ದಾರೆ.  ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ಉತ್ಸಾಹದಿಂದ ಎಲ್ಲರೂ ಮತದಾನ ಮಾಡ್ತಿದ್ದಾರೆ. ಎಲ್ಲರೂ ಮತದಾನ ಮಾಡಬೇಕು, ನಮ್ಮ ತಂದೆ ಅಭ್ಯರ್ಥಿ ಆಗಿದ್ದಾಗ ನಾನೇ ಅಭ್ಯರ್ಥಿ ಅಂತೆ ಮತದಾನ ಮಾಡ್ತಿದ್ದೆ. ಈಗ ನಾನೇ ಅಭ್ಯರ್ಥಿ ಆಗಿ ಮತದಾನ ಮಾಡ್ತಿದ್ದೇನೆ. ನಮ್ಮ ಹಿಂದೆ ತಂದೆ ಇರ್ತಿದ್ರು, ಆದ್ರೆ ಈಗ ಇಲ್ಲ. ಆ ನೋವನ್ನು ಮರೆಸಿ ಸಿದ್ದರಾಮಯ್ಯ ಚುನಾವಣೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಹಳ್ಳಿಯಲ್ಲೂ ಚನ್ನಾಗಿದೆ, ಸಿಟಿನಲ್ಲೂ ಚನ್ನಾಗಿದೆ. ಸಿದ್ದರಾಮಯ್ಯ ನವರ ಸಹಕಾರ, ನಮ್ಮ ತಂದೆ ಮೇಲಿನ ಪ್ರೀತಿಯಿಂದ ಎಲ್ಲರೂ ನಮಗೆ ಮತದಾನ ಮಾಡುತ್ತಿದ್ದಾರೆ ಎನ್ನುವ ಮೂಲಕ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಬಿರುಸಿನ ಮತ ಚಲಾವಣೆ ನಡೆಯುತ್ತಿದ್ದು ಬೆಳಗ್ಗೆಯಿಂದ ಇಲ್ಲಿ ತನಕ 35% ವೋಟಿಂಗ್ ನಡೆದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾಣೆಗೆ ಮತದಾನ ನಡೆಯುತ್ತಿದ್ದು, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಡಿಸಿ, ಎಸ್​ಪಿ ಪರಿಶೀಲನೆ ನಡೆಸುತ್ತಿದ್ದಾರೆ. 284 ಮತಗಟ್ಟೆಗಳಲ್ಲಿ 74 ಅತಿಸೂಕ್ಷ್ಮ ಮತಗಟ್ಟೆಗಳು ಇದ್ದು, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಎಸ್ಪಿ ಶೇಖರ್ ಹೆಚ್.ಡಿ. ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Kishor KV