ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿ – ಮೈಸೂರಿನಲ್ಲಿ ‘ಸಿಂಹಪ್ರಿಯಾ’ ಮದುವೆ ಸಂಭ್ರಮ!
ಪ್ರೇಮ ಲೋಕದಲ್ಲಿ ಸುತ್ತಾಡುತ್ತಿದ್ದ ಸ್ಯಾಂಡಲ್ ವುಡ್ ನ ಮತ್ತೊಂದು ತಾರಾ ಜೋಡಿ ಇವತ್ತು ಹಸೆಮಣೆ ಏರಿದೆ. ಇಬ್ಬರ ಮದುವೆಗೆ ಚಿತ್ರರಂಗದ ಹಲವು ನಟ, ನಟಿಯರು ಭಾಗಿಯಾಗಿದ್ರು.
ಹೌದು. ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಇವತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೆರವೇರಿದೆ. ಸೆಲೆಬ್ರಿಟಿ ಮದುವೆ ಕಾರಣದಿಂದ ಆಶ್ರಮವನ್ನ ಸಿಂಗರಿಸಲಾಗಿತ್ತು. ಮದುವೆಗೆ ಕೇವಲ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹಕ್ಕೆ ಸಾಕ್ಷಿಯಾಗಿದ್ರು. ನಂತರ ಬೆಂಗಳೂರಿನಲ್ಲಿ ಜನವರಿ 28ರಂದು ಅದ್ಧೂರಿಯಾಗಿ ರಿಸೆಪ್ಷನ್ ನಡೆಸಲು ಈ ಜೋಡಿ ತೀರ್ಮಾನಿಸಿದೆ.
ಇದನ್ನೂ ಓದಿ : ನೆಟ್ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ – ಈ ಸೇವೆಗೂ ಬಿತ್ತು ಕತ್ತರಿ!
ನಿನ್ನೆ ಈ ಜೋಡಿಯ ಅರಿಶಿನ ಶಾಸ್ತ್ರ ನೆರವೇರಿದ್ದು ಸಿಂಹಪ್ರಿಯ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಉಡುಪು ತೊಟ್ಟಿದ್ದ ಈ ಜೋಡಿ ಪರಸ್ಪರ ಅರಿಶಿನ ಬಳಿದು ಸಂಭ್ರಮಿಸಿದ್ದರು. ಹರಿಪ್ರಿಯಾ ಮತ್ತು ವಸಿಷ್ಠಸಿಂಹ ಜೋಡಿ ಪ್ರೀತಿಯಲ್ಲಿ ಬಿದ್ದಿದ್ರೂ ಕೂಡ ತಾವು ಲವರ್ಸ್ ಅಂತಾ ಎಲ್ಲೂ ಹೇಳಿಕೊಂಡಿರಲಿಲ್ಲ. ಬಳಿಕ ಹರಿಪ್ರಿಯಾ ಸಿಂಹದ ಕೈಯಲ್ಲಿ ಮಗು ಇರೋ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ರು. ನಂತರ ವಸಿಷ್ಠ ಸಿಂಹ ಕೂಡ ಅದೇ ಫೋಟೋ ಹಾಕಿಕೊಂಡಿದ್ರು. ಬಳಿಕ ಇವರಿಬ್ಬರೂ ಪ್ರೀತಿ ಮಾಡುತ್ತಿರೋ ವಿಷಯ ಬಹಿರಂಗವಾಗಿತ್ತು.