ಉದ್ಯೋಗ – ವ್ಯಾಪಾರದಲ್ಲಿ ಅಡಚಣೆಗಳಿದ್ಯಾ – 11 ಗುರುವಾರ ಹೀಗೆ ಉಪವಾಸ ಮಾಡಿದರೆ ಸಿಗಲಿದೆ ಶುಭ ಫಲ

  ಉದ್ಯೋಗ – ವ್ಯಾಪಾರದಲ್ಲಿ ಅಡಚಣೆಗಳಿದ್ಯಾ –  11 ಗುರುವಾರ ಹೀಗೆ ಉಪವಾಸ ಮಾಡಿದರೆ ಸಿಗಲಿದೆ ಶುಭ ಫಲ

ಗುರುವಾರ ಅಂದರೆ ಇಂದು ಶ್ರೀಹರಿಯನ್ನು ಪೂಜಿಸುವುದರಿಂದ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ. ಅದೇ ರೀತಿ ಗುರುವಾರ ಶ್ರೀಹರಿಯನ್ನು ಪೂಜಿಸುವುದರೊಂದಿಗೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹರಿಯ ಆಶೀರ್ವಾದವನ್ನು ಮತ್ತು ಬ್ರಹಸ್ಪತಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಹಾಗೂ ನಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಹಾಗಾದರೆ ನಾವು ಗುರುವಾರ ಕೈಗೊಳ್ಳಬೇಕಾದ ನಿಯಮಗಳಾವುವು..?

ಗುರುವಾರ ಮುಂಜಾನೆ ಹೀಗೆ ಮಾಡಿ:
ಗುರುವಾರ ಮುಂಜಾನೆ ಬೇಗ ಎದ್ದು, ತಮ್ಮ ದೈನಂದಿನ ಕಾರ್ಯಗಳಿಂದ ನಿವೃತ್ತಿಯಾದ ಬಳಿಕ ಸ್ನಾನ ಮಾಡಬೇಕು. ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಅರಶಿಣವನ್ನು ಬೆರೆಸಿ ಸ್ನಾನ ಮಾಡಬೇಕು. ಸ್ನಾನ ಮಾಡಿದ ನಂತರ ಬೃಹಸ್ಪತಿ ದೇವರನ್ನು ಪೂಜಿಸಬೇಕು. ಬೃಹಸ್ಪತಿ ದೇವರನ್ನು ಪೂಜಿಸುವಾಗ ತಪ್ಪದೇ ಬೃಹಸ್ಪತಿ ದೇವನ ಕಥೆಯನ್ನು ಓದಿ. ಕಥೆಯನ್ನು ಓದುವ ಮುನ್ನ ಹಳದಿ ಬಣ್ಣದ ಹೂವುಗಳನ್ನು ಮತ್ತು ಧೂಪ ದೀಪವನ್ನು ಅರ್ಪಿಸಬೇಕು. ಇದರ ನಂತರ 11 ಬಾರಿ ಅಥವಾ 21 ಬಾರಿ ಪೂರ್ಣ ಭಕ್ತಿಯಿಂದ ‘ಓಂ ಬೃಂ ಬೃಹಸ್ಪತಯೇ ನಮಃ’ ಎನ್ನುವ ಮಂತ್ರವನ್ನು ಪಠಿಸಬೇಕು.

ಇದನ್ನೂ ಓದಿ: ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ – ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ?

 ಗುರುವಾರ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ:
ಗುರುವಾರ ಭಗವಾನ್‌ ಬೃಹಸ್ಪತಿ ದೇವರನ್ನು ಪೂಜಿಸುವಾಗ ಬಾಳೆ ಗಿಡವನ್ನು ಕೂಡ ಪೂಜಿಸಬೇಕು. ಬಾಳೆ ಗಿಡವನ್ನು ಪೂಜಿಸುವಾಗ ಬಾಳೆ ಮರಕ್ಕೆ ನೀರು ಮತ್ತು ಹಳದಿ ಬಣ್ಣದ ಹೂವುಗಳನ್ನು ಸಹ ಅರ್ಪಿಸಬೇಕು. ಮತ್ತೊಂದೆಡೆ, ಮದುವೆಯಾಗುವುದರಲ್ಲಿ ಪದೇ ಪದೇ ಸಮಸ್ಯೆ ಎದುರಿಸುತ್ತಿದ್ದರೆ ಗುರುವಾರದಂದು ಉಪವಾಸ ವ್ರತವನ್ನು ಕೈಗೊಳ್ಳಬೇಕು.

  ಉದ್ಯೋಗ – ವ್ಯಾಪಾರದಲ್ಲಿ ಅಡಚಣೆಗಳಿದ್ದರೆ ಹೀಗೆ ಮಾಡಿ:
ನಿಮ್ಮ ಕುಂಡಲಿಯಲ್ಲಿ ಗುರು ಗ್ರಹದ ಸ್ಥಾನ ಕೆಟ್ಟದಾಗಿದ್ದರೆ, ಗುರು ಗ್ರಹದಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆಗ ನೀವು ಗುರವಾರದಂದು ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ ಕೇಸರಿಯನ್ನು ಮತ್ತು ಕಡಲೆ ಬೇಳೆಯನ್ನು ದಾನವಾಗಿ ನೀಡಬೇಕು. ಪ್ರತಿನಿತ್ಯ ಹಣೆಗೆ ಕೇಸರಿ ಮತ್ತು ಶ್ರೀಗಂಧದ ತಿಲಕವನ್ನಿಡಬೇಕು. ಹಾಗೂ ಗುರುವಾರದಂದು ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು. ಇದನ್ನು ಮಾಡುವುದರಿಂದ ಭಗವಾನ್‌ ಬೃಹಸ್ಪತಿಯು ಪ್ರಸನ್ನನಾಗಿ ನಿಮ್ಮ ಜೀವನದ ಸಮಸ್ಯೆಗಳನ್ನು, ಉದ್ಯೋಗದಲ್ಲಿನ ಸಮಸ್ಯೆಗಳನ್ನು ಮತ್ತು ವ್ಯವಹಾರದಲ್ಲಿನ ಸಮಸ್ಯೆಗಳನ್ನು ದೂರಾಗಿಸುವನು.

Kishor KV