ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ! – ಮಧ್ಯಾಹ್ನ 3 ಗಂಟೆಗೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯ

ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ! – ಮಧ್ಯಾಹ್ನ 3 ಗಂಟೆಗೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯ

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ರಿಸಲ್ಟ್‌ ಪ್ರಕಟ ಮಾಡಲಿದೆ.

ಇದನ್ನೂ ಓದಿ: ಸೆಕೆ ಇದೆ ಎಂದು ಮನೆ ಹೊರಗೆ ಮಲಗಿದ್ದವರ ಮೇಲೆ ಮಾನಸಿಕ ಅಸ್ವಸ್ಥನಿಂದ ಹಲ್ಲೆ! – 6 ಮಂದಿ ಸ್ಥಿತಿ ಗಂಭೀರ!

ಫೆಬ್ರವರಿ 28ರಿಂದ ಮಾರ್ಚ್ 17ವರೆಗೆ ಪರೀಕ್ಷೆ ನಡೆದಿತ್ತು. ಸುಮಾರು 7.10 ಲಕ್ಷ ವಿದ್ಯಾರ್ಥಿಗಳು 1217 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಇಂದು ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಮೊದಲು ಸುದ್ದಿಗೋಷ್ಠಿ ನಡೆಸಿ ಬಳಿಕ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ ಈ ಬಾರಿ ಮೊದಲು ವೈಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಸುದ್ದಿಗೋಷ್ಠಿ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಅವರು ಸಂಜೆ 6:15ಕ್ಕೆ ಫಲಿತಾಂಶದ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇಲಾಖೆ ವೆಬ್‌ಸೈಟ್ https://karresults.nic.in ಫಲಿತಾಂಶ ಲಭ್ಯವಾಗಲಿದೆ ಜೊತೆಗೆ Karnatakaone ಮೊಬೈಲ್ ಆಪ್ ಮೂಲಕ ಫಲಿತಾಂಶ ಪಡೆಯಬಹುದು ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ, ವಾಟ್ಸಪ್‌ , SMSಮೂಲಕವೂ ಫಲಿತಾಂಶ ರವಾನೆ ಆಗಲಿದೆ.

ಇನ್ನೂ ಈ ವರ್ಷ ಮೊದಲ ಬಾರಿಗೆ ಡಿಜಿ ಲಾಕರ್‌ನಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿ ಲಭ್ಯವಾಗಲಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಅಂಕಪಟ್ಟಿ ಡಿಜಿ ಲಾಕರ್‌ನಲ್ಲಿ ಲಭ್ಯವಿರಲಿದೆ. https://www.digilocker.gov.in/ ಬಳಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಂದು 3 ಗಂಟೆ ನಂತರ ಕಾಲೇಜುಗಳಿಗೆ ಫಲಿತಾಂಶ ಪಟ್ಟಿ ರವಾನೆ ಆಗಲಿದೆ.

Shwetha M