ಸಿದ್ದೇಶ್ವರ ಜಾತ್ರೆಯಲ್ಲಿ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಕೊ*ಲೆ

ಬೆಳಗಾವಿಯಲ್ಲಿ ಸಿದ್ದೇಶ್ವರ ಜಾತ್ರೆಯಲ್ಲಿ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಕೊಲೆ ನಡೆದಿರುವಂತಹ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿಯಲ್ಲಿ ನಡೆದಿದೆ. ಸಂಗನಗೌಡ(50) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಘಟನೆ ಸಂಬಂಧ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಂಗಭೂಮಿ ಹಾಗೂ ಕಿರುತೆರೆಯ ಭರವಸೆಯ ನಟ ಸೂ*ಸೈಡ್ – ಮುರಳಿ ಸಾವಿನ ಸುತ್ತ ಅನುಮಾನದ ಹುತ್ತ
ಸಂಗನಗೌಡ ಮತ್ತು ಆರೋಪಿಗಳ ಎರಡು ಕುಟುಂಬಗಳ ಮಧ್ಯೆ ಕೆಲವು ವರ್ಷಗಳಿಂದ ವೈಷಮ್ಯ ಇತ್ತು. ಸಿದ್ದೇಶ್ವರ ಜಾತ್ರೆ ವೇಳೆ ರಾಜಕೀಯ ವಿರೋಧಿಗಳ ಮನೆ ಮುಂದೆ ಸಂಗನಗೌಡ ಪಾಟೀಲ್ ಕುಣಿಯುತ್ತಿದ್ದ. ಈ ವೇಳೆ ಮನೆಯ ಮುಂದೆ ಕುಣಿಯಬೇಡ ಎಂದು ಆರೋಪಿಗಳು ಹೇಳಿದ್ದಾರೆ. ಈ ನಡುವೆ ಗಲಾಟೆ ನಡೆದಿದ್ದು, ಬಳಿಕ ಕೊಲೆಗೈಯಲಾಗಿದೆ. ಕುಡಗೋಲು, ಕೊಡಲಿ, ಕಬ್ಬಿಣದ ರಾಡ್ ನಿಂದು ಹೊಡೆದು ಹತ್ಯೆ ಮಾಡಲಾಗಿದೆ.
ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಂಗನಗೌಡ ಪಾಟೀಲ್ ಮೃತಪಟ್ಟಿದ್ದಾರೆ. ದೇಮಪ್ಪ ಬಳಗನ್ನವರ, ಮಂಜುನಾಥ ಬಳಗನ್ನವರ, ರುದ್ರಪ್ಪ, ವಿಜಯ್, ಸೂರಪ್ಪ, ಸಿದ್ದಪ್ಪ, ನಾಗರಾಜ, ಬಸವಂತಪ್ಪ ಬಂಧಿತ ಆರೋಪಿಗಳು.

ನೋಡಿರಿ

