ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ – ಈ ಸೇವೆಗೂ ಬಿತ್ತು ಕತ್ತರಿ!

ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ – ಈ ಸೇವೆಗೂ ಬಿತ್ತು ಕತ್ತರಿ!

ಕೊವಿಡ್ ಬಳಿಕ ಒಟಿಟಿ ಪ್ಲಾಟ್ ಫಾರ್ಮ್ ಗಳು ಸಾಕಷ್ಟು ಜನಪ್ರಿಯವಾಗಿವೆ. ಅಮೆಜಾನ್‌ ಫ್ರೈಮ್‌, ನೆಟ್‌ಫ್ಲಿಕ್ಸ್‌, ವೂಟ್‌ ಹೀಗೆ ಯಾವುದಾದರೊಂದು ಆ್ಯಪ್ ಡೌನ್ ಲೋಡ್ ಮಾಡಿ ಸಿನಿಮಾ, ವೆಬ್ ಸೀರಿಸ್ ಗಳನ್ನು ಜನರು ವೀಕ್ಷಿಸುತ್ತಿದ್ದರು. ಅಲ್ಲದೇ ತಮ್ಮ ಖಾತೆಯ ಪಾಸ್‌ವರ್ಡ್‌ ಅನ್ನು ಮಿತಿಗೆ ಅನುಗುಣವಾಗಿ ತಮ್ಮ ಸ್ನೇಹಿತರಿಗೆ ಕುಟುಂಬದವರೊಟ್ಟಿಗೆ ಹಂಚಿಕೊಳ್ಳುತ್ತಿದ್ದರು. ಇದೀಗ ನೆಟ್‌ಫ್ಲಿಕ್ಸ್‌ ತನ್ನ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಯಾವ ಮಾರ್ಗದಲ್ಲಿ ಸಂಚಾರ ಗೊತ್ತಾ..!?

ಆದಾಯವನ್ನು ಹೆಚ್ಚಿಸಲು ಮತ್ತು ಚಂದಾದಾರರನ್ನು ಪಡೆಯಲು, ನೆಟ್‌ಫ್ಲಿಕ್ಸ್‌ ಇತ್ತೀಚೆಗೆ ಆಯ್ದ ಮಾರುಕಟ್ಟೆಗಳಲ್ಲಿ ಜಾಹೀರಾತು-ಬೆಂಬಲಿತ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿತ್ತು. ಇದೀಗ ಹೆಚ್ಚುವರಿಯಾಗಿ, ಒಂದೇ ಅಕೌಂಟ್‌ ಪಾಸ್‌ವರ್ಡ್‌ನಲ್ಲಿ ಸ್ನೇಹಿತರು, ಸಂಬಂಧಿಕರೆಲ್ಲರೂ ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಪ್ರವೇಶಿಸುವುದಕ್ಕೆ ಇದ್ದ ಅವಕಾಶಕ್ಕೂ ಬ್ರೇಕ್ ಹಾಕುವುದಾಗಿ  ನೆಟ್ ಫ್ಲಿಕ್ಸ್ ನ ಹೊಸ ಸಿಇಒ ಗ್ರೆಗ್ ಪೀಟರ್ಸ್ ಮತ್ತು ಟೆಡ್ ಸರಂಡೋಸ್, ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್ನುಮುಂದೆ ಒಬ್ಬರ ಪಾಸ್‌ವರ್ಡ್‌ ಅನ್ನು ಇನ್ನೊಬ್ಬರು ಬಳಸಲು ಸಾಧ್ಯವಿಲ್ಲ. ನೀವು ನೆಟ್‌ಫ್ಲಿಕ್ಸ್‌ ಅಕೌಂಟ್‌ ಬಳಸಬೇಕಾದರೆ ನಿಮ್ಮದೇ ಸ್ವಂತ ಅಕೌಂಟ್‌ ಹೊಂದುವುದು ಅನಿವಾರ್ಯವಾಗಲಿದೆ. ನೆಟ್‌ಫ್ಲಿಕ್ಸ್ ಬಳಸಲು ಸ್ನೇಹಿತರು ಮತ್ತು ಇತರರನ್ನು ಅವಲಂಬಿಸಿರುವ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಶೀಘ್ರದಲ್ಲೇ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಚಂದಾದಾರರ ಸಂಖ್ಯೆಯ ಕುಸಿತವನ್ನು ತಡೆಗಟ್ಟಲು ನೆಟ್‌ಫ್ಲಿಕ್ಸ್‌ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಈ ನಿಯಮವನ್ನು ಅಧಿಕೃತವಾಗಿ ಜಾರಿಗೆ ತಂದರೆ 15-20 ಮಿಲಿಯನ್ ಚಂದಾದಾರರು ಹೆಚ್ಚಾಗುತ್ತಾರೆ ಎಂದು ಸಿಇಒ ಗ್ರೆಗ್ ಪೀಟರ್ಸ್ ತಿಳಿಸಿದ್ದಾರೆ.

ನೆಟ್‌ಫ್ಲಿಕ್ಸ್ ಹೊಸ ಪಾಸ್‌ವರ್ಡ್ ಶೇರ್‌ ಶುಲ್ಕದ ಆಯ್ಕೆಯನ್ನು ಕೋಸ್ಟಾ ರಿಕಾ, ಚಿಲಿ, ಪೆರು ಮತ್ತು ಇನ್ನೂ ಕೆಲವು ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಪರೀಕ್ಷಿಸುತ್ತಿದೆ. ಈ ದೇಶಗಳಲ್ಲಿ ಸ್ನೇಹಿತರ ನೆಟ್‌ಫ್ಲಿಕ್ಸ್ ಖಾತೆಯನ್ನು ಬಳಸಲು ಬಯಸುವ ಜನರು $3 (ಅಂದಾಜು 250ರೂ) ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಇದೇ ವಿಧಾನ ಭಾರತದಲ್ಲಿಯೂ ಕೂಡ ಜಾರಿಗೆ ಬರಲಿದ್ದು, ಇಲ್ಲಿ ಪ್ರತಿ ಪ್ರೊಫೈಲ್‌ಗೆ ಎಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ ಅನ್ನೋದು ಇನ್ನು ಬಹಿರಂಗವಾಗಿಲ್ಲ. ಉನ್ನತ ಮಾಹಿತಿಗಳ ಪ್ರಕಾರ ನೆಟ್‌ಫ್ಲಿಕ್ಸ್ ಮಾರ್ಚ್ 2023 ರಿಂದ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಪಾಸ್‌ವರ್ಡ್ ಹಂಚಿಕೆ ಸೇವೆ  ಕೊನೆಗೊಳಿಸಲಿದೆ.

suddiyaana