ಅಮೆರಿಕಾ – ಇರಾನ್ ಕದನ ವಿರಾಮ ಬೆನ್ನಲ್ಲೇ ತೈಲ ಬೆಲೆಯಲ್ಲಿ ಭಾರಿ ಕುಸಿತ!

ಅಮೆರಿಕಾ – ಇರಾನ್ ಕದನ ವಿರಾಮ ಬೆನ್ನಲ್ಲೇ ತೈಲ ಬೆಲೆಯಲ್ಲಿ ಭಾರಿ ಕುಸಿತ!

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಮಧ್ಯಪ್ರಾಚ್ಯ ಯುದ್ದಕ್ಕೆ ಈಗ ಕೊಂಚ ಬ್ರೇಕ್‌ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಮೇಲಿನ ದಾಳಿಗೆ 2 ವಾರಗಳ ವಿರಾಮ ಘೋಷಣೆ ಮಾಡಿದ್ದಾರೆ. ಇದೀಗ ಕದನ ವಿರಾಮದ ಬೆನ್ನಲ್ಲೇ ತೈಲಗಳ ಬೆಲೆ ಕೂಡ ಇಳಿಕೆ ಕಂಡಿದೆ.

ಇದನ್ನೂ ಓದಿ: ಸೆಕೆ ಎಂದು ಬಾಗಿಲು ತೆರೆದಿಟ್ಟು ಮಲಗಿದ ಮಹಿಳೆ! – ಬೆಳಗ್ಗೆ ಏಳುವಾಗ ಮಾಂಗಲ್ಯಸರ, 2 ಫೋನ್‌ ಮಾಯ!

ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಗೆ ಎರಡು ವಾರಗಳ ವಿರಾಮ ಘೋಷಿಸಿದ ನಂತರ ಹೊರ್ಮುಜ್ ಜಲಸಂಧಿ ಓಪನ್‌ ಆಗಿದೆ. ಈ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 109.77 ಡಾಲರ್‌ನಿಂದ 95.068 ಡಾಲರ್‌ಗೆ ತೀವ್ರವಾಗಿ ಕುಸಿದಿದೆ. ಅಲ್ಲದೆ ಅಮೆರಿಕ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ಕಚ್ಚಾ ತೈಲ ಕೂಡ ಬ್ಯಾರೆಲ್‌ಗೆ 20 ಡಾಲರ್‌ನಷ್ಟು ಇಳಿದಿದೆ.

ಫೆಬ್ರವರಿ 28ರಿಂದ ಇರಾನ್ ಮೇಲೆ ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ದಾಳಿಯ ನಂತರ ಟೆಹರಾನ್ ಜಲಸಂಧಿಯನ್ನು ಮುಚ್ಚಿತು. ಟ್ಯಾಂಕರ್‌ಗಳು ಸಮುದ್ರದಲ್ಲೇ ಬಾಕಿಯಾದವು. ವಿಮಾ ವೆಚ್ಚಗಳು ಹೆಚ್ಚಾದವು. ಇದರಿಂದ ಮಾರ್ಚ್‌ನಲ್ಲಿ ತೈಲ ಬೆಲೆಗಳನ್ನು ಶೇಕಡಾ 50ಕ್ಕಿಂತ ಜಾಸ್ತಿ ಹೆಚ್ಚಾಯಿತು.

ತೈಲ ಬೆಲೆ ಏರಿಕೆಯು ದೇಶಾದ್ಯಂತ ಹಣದುಬ್ಬರದ ಭೀತಿಯನ್ನು ಹೆಚ್ಚಿಸಿತ್ತು. ಇರಾನ್ ಜತೆಗಿನ ದೀರ್ಘಾವಧಿಯ ಶಾಂತಿ ಒಪ್ಪಂದವು ಪ್ರಗತಿಯಲ್ಲಿದೆ. ಇಸ್ಲಾಮಿಕ್ ರಾಷ್ಟ್ರದ 10 ಅಂಶಗಳ ಪ್ರಸ್ತಾಪವು ಕಾರ್ಯಸಾಧ್ಯವೆಂದು ತೋರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಪ್ರತಿಯಾಗಿ, ದಾಳಿಗಳು ನಿಂತರೆ ಎರಡು ವಾರಗಳವರೆಗೆ ಜಲಸಂಧಿಯ ಮೂಲಕ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಇರಾನ್ ಹೇಳಿದೆ. ಈ ಹೇಳಿಕೆಯಿಂದ ವ್ಯಾಪಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

Shwetha M