ಸುಪ್ರೀಂನಲ್ಲೂ ಕನ್ನಡದಲ್ಲಿ ತೀರ್ಪು ಲಭ್ಯ – ಸ್ಥಳೀಯ ಭಾಷೆಗಳಿಗೆ ಆದ್ಯತೆ
ನವದೆಹಲಿ: ಸರ್ವೋಚ್ಚ ನ್ಯಾಯಾಲಯದ 1,268 ತೀರ್ಪುಗಳನ್ನುಕನ್ನಡ ಸೇರಿ 13 ಸ್ಥಳೀಯ ಭಾಷೆಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಒದಗಿಸುವ ಮಹತ್ವದ ಸೇವೆಗೆ ಇಂದಿನಿಂದ ಚಾಲನೆ ನೀಡಲಾಗುತ್ತದೆ.
ಈ ಬಗ್ಗೆ ಮಾತನಾಡಿದ ಸಿಜೆಐ ನ್ಯಾ| ಚಂದ್ರಚೂಡ್, ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ವಿವಿಧ ಸ್ಥಳೀಯ ಭಾಷೆಗಳಲ್ಲಿ ಉಚಿತವಾಗಿ ಒದಗಿಸುವ ಸೇವೆಯನ್ನು ಎಲೆಕ್ಟ್ರಾನಿಕ್ – ಸುಪ್ರೀಂ ಕೋರ್ಟ್ ರಿಪೋರ್ಟ್ಸ್(ಇ-ಎಸ್‌ಸಿಆರ್)ನ ಭಾಗವಾಗಿ ಗುರುವಾರ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಏರ್ ಶೋಗೆ ಮುಹೂರ್ತ ಫಿಕ್ಸ್ – ಈ ಬಾರಿ ಹೇಗಿರುತ್ತೆ ಗೊತ್ತಾ ವಿಮಾನಗಳ ಚಮತ್ಕಾರ?
ಇ-ಎಸ್‌ಸಿಆರ್ ನಲ್ಲಿ ಸುಮಾರು 34 ಸಾವಿರ ತೀರ್ಪುಗಳನ್ನು ಒಳಗೊಂಡಿದೆ. ಅವುಗಳಲ್ಲಿ ಸುಮಾರು 1,091 ತೀರ್ಪುಗಳು ಸ್ಥಳೀಯ ಭಾಷೆಗಳಲ್ಲಿ ಒದಗಿಸಲಾಗಿದ್ದು, ಕನ್ನಡದಲ್ಲಿ 17 ತೀರ್ಪುಗಳು ಸಾರ್ವಜನಿಕವಾಗಿ ಲಭ್ಯವಾಗಲಿದೆ. ಈ ಸೇವೆ ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್, ಮೊಬೈಲ್ ಆ್ಯಪ್ ಮತ್ತು ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (ಎನ್‌ಜೆಡಿಜಿ)ನ ಜಡ್ಜ್ ಮೆಂಟ್ ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ. ಈ ತೀರ್ಪುಗಳನ್ನು ಉಚಿತವಾಗಿ ಓದಬಹುದು ಎಂದು ನ್ಯಾ| ಚಂದ್ರಚೂಡ್ ಹೇಳಿದ್ದಾರೆ.
ಏನಿದು ಇ–ಎಸ್ಸಿಆರ್?
ದೇಶಾದ್ಯಂತ ವಕೀಲರು ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ಸಂದರ್ಭ “ಸುಪ್ರೀಂ ಕೋರ್ಟ್ ರಿಪೋರ್ಟ್ಸ್’ ಮತ್ತಿತರ ಅಧಿಕೃತ ಕಾನೂನು ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ತೀರ್ಪುಗಳನ್ನು ಉಲ್ಲೇಖಿಸುತ್ತಾರೆ. ಇ-ಎಸ್‌ಸಿಆರ್ ಇವೇ ತೀರ್ಪುಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್‌ನ ಸಹಾಯದಿಂದ ಡಿಜಿಟಲ್ ತೀರ್ಪುಗಳ ಈ ವಿಶಾಲ ಸಂಗ್ರಹದಲ್ಲಿ ಬೇಕಾದ ತೀರ್ಪನ್ನು ಸುಲಭವಾಗಿ ಹುಡುಕುವುದಕ್ಕಾಗಿ ಸರ್ಚ್ ಎಂಜಿನ್ ಕೂಡ ಒದಗಿಸಿದೆ. ಇದರ ಮೂಲಕ ಇ-ಎಸ್‌ಸಿಆರ್‌ನಲ್ಲಿ ಉಚಿತ ಟೆಕ್ಸ್ಟ್ ಸರ್ಚ್, ಸರ್ಚ್ ವಿದಿನ್ ಸರ್ಚ್, ಪ್ರಕರಣದ ವಿಧ ಮತ್ತು ವರ್ಷ ಆಧಾರಿತ ಸರ್ಚ್, ನ್ಯಾಯಮೂರ್ತಿ ಆಧಾರಿತ ಸರ್ಚ್ ಇತ್ಯಾದಿಯಾಗಿ ಶೋಧ ನಡೆಸಬಹುದಾಗಿದೆ.
ಸ್ಥಳೀಯ ಭಾಷೆಗಳ ಪೈಕಿ ತಮಿಳಿನಲ್ಲಿ ಅತೀ ಹೆಚ್ಚು, ಅಂದರೆ 52 ತೀರ್ಪುಗಳಿವೆ. ಮರಾಠಿಯಲ್ಲಿ 14, ಮಲಯಾಳಂ ನಲ್ಲಿ 29, ಅಸ್ಸಾಮಿ ಮತ್ತು ಪಂಜಾಬಿ ಭಾಷೆಗಳಲ್ಲಿ ನಾಲ್ಕು, ಮರಾಠಿಯಲ್ಲಿ 14, ಒರಿಯಾದಲ್ಲಿ 21, ತೆಲುಗಿನಲ್ಲಿ 28, ಉರ್ದುವಿನಲ್ಲಿ ಮೂರು ತೀರ್ಪುಗಳಿವೆ. 17 ತೀರ್ಪುಗಳು ಕನ್ನಡದಲ್ಲಿ ಲಭ್ಯವಿವೆ.