ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ – ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ?

ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಹಾಗಿದ್ರೆ ಬೆಕ್ಕು ಅಡ್ಡ ಬಂದ್ರೆ ಒಳ್ಳೆಯದ್ದ ಕೆಟ್ಟದ ಅನ್ನೋದ್ದನ್ನ ನೋಡೋಣ.
ಶುಭ ಕಾರ್ಯಗಳಿಗೆ, ಹೊಸ ಕೆಲಸಗಳಿಗೆ, ಹೊಸ ವಾಹನ ಖರೀದಿಗೆ ಅಥವಾ ವಿವಾಹದ ವಿಷಯಗಳಿಗೆ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ಅದು ಕಲಹಗಳು, ಗಲಾಟೆಗಳು ಮತ್ತು ಮನಸ್ಸಿನಲ್ಲಿ ವಿಕೃತ ಭಾವನೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದು ಪ್ರಾಣಹಾನಿಯ ಸೂಚನೆಯಲ್ಲ, ಆದರೆ ಮಾನಸಿಕ ಒತ್ತಡ ಮತ್ತು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸಬಹುದು. ಕಪ್ಪು ಬೆಕ್ಕು ರಾಹು ಗ್ರಹದ ಸಂಕೇತವಾಗಿದೆ. ಕಪ್ಪು ಬೆಕ್ಕಿನ ಕಣ್ಣುಗಳು ಕೇತು ಗ್ರಹದ ಸಂಕೇತವೆಂದು ಹೇಳಲಾಗುತ್ತದೆ, ಇದರಿಂದಾಗಿ ರಾಹು ಮತ್ತು ಕೇತು ಎರಡೂ ಅಂಶಗಳು ಕಪ್ಪು ಬೆಕ್ಕಿನಲ್ಲಿ ಇರುತ್ತವೆ ಎಂಬ ನಂಬಿಕೆಯಿದೆ. ಪುರಾಣಗಳ ಪ್ರಕಾರ, ಬೆಕ್ಕು ರಾಹು ಗ್ರಹದ ವಾಹನವೂ ಹೌದು.
ಇದನ್ನೂ ಓದಿ: ನಿದ್ದೆ ಸರಿ ಬರ್ತಾ ಇಲ್ವಾ- ವಿಶ್ವ ಆರೋಗ್ಯದಿನದಂದೇ ತಿಳಿಯಿರಿ ಆರೋಗ್ಯ ಕಾಪಾಡೋ ಯೋಗ ಗುಟ್ಟು
ಹಾವೋ ಅಡ್ಡ ಬಂದರೆ ಕೆಲವೊಮ್ಮೆ ಶುಭವೆಂದು ಪರಿಗಣಿಸಿದರೆ, ಗೋವು ಅಡ್ಡ ಬರುವುದು ಬಹಳ ಶುಭವೆಂದು ಹೇಳಲಾಗುತ್ತದೆ. ಆದರೆ, ನಾಯಿ ಗೋಳಾಡುವುದು ಅಥವಾ ಅಳುವುದು ಯಾವುದೋ ಪ್ರಾಣಹಾನಿಯ ಸೂಚನೆ ಎಂದು ಹಿರಿಯರು ಹೇಳುತ್ತಾರೆ. ಅದೇ ರೀತಿ, ಕಪ್ಪು ಬೆಕ್ಕು ಅಡ್ಡ ಬರುವುದು ಅಪಾಯದ ಸೂಚನೆ. ಇದು ನಿಮ್ಮ ಮೇಲೆ ದಾಳಿ, ಗಲಾಟೆ, ಅಥವಾ ಕಲಹಗಳಿಗೆ ದಾರಿ ಮಾಡಿಕೊಡಬಹುದು. ಅಲ್ಲದೆ, ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ವಿಳಂಬಗಳು ಮತ್ತು ಅಪೂರ್ಣ ಕೆಲಸಗಳಿಗೆ ಕಾರಣವಾಗಬಹುದು. ಮನಸ್ಸಿನ ಸ್ಮೃತಿ ಪಟಲದ ಮೇಲೆ ಇದರ ಪ್ರಭಾವ ನೇರವಾಗಿ ಬೀಳುತ್ತದೆ ಎಂದು ಹೇಳಲಾಗುತ್ತದೆ.
ಯಾವುದೇ ದಿನ, ವಾರ, ಅಥವಾ ಕಾಲ ಎಂದು ಪರಿಗಣಿಸದೆ, ಒಳ್ಳೆಯ ಮನಸ್ಸಿನಿಂದ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ತಕ್ಷಣಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಇದರ ಪರಿಹಾರವಾಗಿ, ಸ್ವಲ್ಪ ಸಮಯ ಕಾಯುವುದು ಉತ್ತಮ. ನಿಮ್ಮ ಕಾರಿನಲ್ಲಿ ನೀರಿದ್ದರೆ, ನೀರನ್ನು ಕುಡಿಯಿರಿ. ಒಂದೆರಡು ನಿಮಿಷ ಇಳಿದು ಓಡಾಡಿ ಅಥವಾ ಟ್ರಾಫಿಕ್ನಲ್ಲಿ ಸಿಲುಕಿದ್ದರೆ ರಸ್ತೆಯ ಬದಿಯಲ್ಲಿ ನಿಲ್ಲಿಸಿ. ಈ ರೀತಿಯಾಗಿ ಸ್ವಲ್ಪ ವಿರಾಮ ತೆಗೆದುಕೊಂಡು ಮುಂದೆ ಸಾಗುವುದು ಒಳ್ಳೆಯದು .

ನೋಡಿರಿ

