RCBಗೆ ಬ್ಯಾಕ್ ಟು ಬ್ಯಾಕ್ LUCK – ಅದೇ ಟೀಂ.. ಅದೇ ಕಿಚ್ಚು.. ಮತ್ತೆ ಕಪ್?
ಟ್ರೋಫಿ ಡಿಫೆನ್ಸ್ ಗೆ ಇಲ್ಲಿದೆ 5 ಕಾರಣ!

2026ರ ಐಪಿಎಲ್‌ನಲ್ಲಿ ಟ್ರೋಫಿ ಡಿಫೆನ್ಸ್ ಟಾರ್ಗೆಟ್ನೊಂದಿಗೆ ಅಖಾಡಕ್ಕೆ ಇಳ್ದಿರೋ ಬೆಂಗಳೂರು ಟೀಂ ಡೇಂಜರಸ್ ಆಗಿ ಕಾಣ್ತಿದೆ. ಕಂಪ್ಲೀಟ್ ಟೀಂ ಬ್ಯಾಲೆನ್ಸ್ಡ್ ಆಗಿದೆ. ಸೋ ಬ್ಯಾಕ್ ಟು ಬ್ಯಾಕ್ ಕಪ್ ಗೆಲ್ಲೋ ಫೇವರೆಟ್ ಟೀಂ ಕೂಡ ಹೌದು. ಅಷ್ಟೇ ಅಲ್ಲದೆ ಬೆಂಗಳೂರು ತಂಡಕ್ಕೆ ಐಪಿಎಲ್ ಟ್ರೋಫಿಯನ್ನ ಉಳಿಸಿಕೊಳ್ಳೋಕೆ ಸಾಲಿಡ್ ರೀಸನ್ಸ್ ಕೂಡ ಇದೆ.
ಇದನ್ನೂ ಓದಿ : CSKಯಲ್ಲಿ ಸದ್ದೇ ಮಾಡ್ತಿಲ್ಲ ಸಂಜು – 3 ಮ್ಯಾಚ್.. 22 ರನ್ಸ್.. ಏನಾಯ್ತು?
ಆರ್ಸಿಬಿಗೆ ಫಸ್ಟ್ ಐಪಿಎಲ್ ಟ್ರೋಫಿ ಗೆಲ್ಲೋಕೆ 18 ವರ್ಷ ಬೇಕಾಯ್ತು. ಆದ್ರೆ 2ನೇ ಕಪ್ ಗೆಲ್ಲೋದು ಅಷ್ಟ ಕಷ್ಟ ಏನಲ್ಲ. ರೆಡ್ ಆರ್ಮಿ ಕ್ಯಾಂಪ್ನಲ್ಲಿರೋ ಆಟಗಾರರ ಆರ್ಭಟ ನೋಡಿದ್ರೆ ಈ ಸಲ ಕೂಡ ಕಪ್ ನಮ್ದೇ ಅನ್ನೋ ಥರ ಪರ್ಫಾಮ್ ಮಾಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದ್ರಲ್ಲೂ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಈಗಾಗ್ಲೇ ಈ ಸೀಸನ್ನಲ್ಲಿ 2 ಪಂದ್ಯಗಳನ್ನ ಆಡಿದ್ದು ಎರಡೂ ಪಂದ್ಯಗಳಲ್ಲೂ ದಾಖಲೆಯ ಗೆಲುವು ಸಾಧಿಸಿದ್ದಾರೆ. ಹ್ಯಾಟ್ರಿಕ್ ವಿಕ್ಟರಿಯ ಟ್ರ್ಯಾಕ್ನಲ್ಲಿರೋ ಆರ್ಸಿಬಿಗೆ ಈ ಸೀಸನ್ನಲ್ಲಿ ಟ್ರೋಫಿ ಡಿಫೆನ್ಸ್ ಮಾಡಿಕೊಳ್ಳೋಕೆ ಇರೋ ಐದು ಅಡ್ವಾಂಟೇಜಸ್ ಇದೆ.
ನಂಬರ್ 1
ವಿರಾಟ್ ಕೊಹ್ಲಿ ಫಾರ್ಮ್ ಮತ್ತು ಅವ್ರ ಗೈಡೆನ್ಸ್!
ಆರ್‌ಸಿಬಿ ತಂಡದ ಐಕಾನಿಕ್ ಪ್ಲೇಯರ್ ವಿರಾಟ್ ಕೊಹ್ಲಿ ಇರೋದೇ ಫ್ರಾಂಚೈಸಿಗೆ ಒಂದು ದೊಡ್ಡ ಅಡ್ವಾಂಟೇಜ್. ಅವ್ರ ಬ್ಯಾಟಿಂಗ್ ಅಷ್ಟೇ ಅಲ್ಲದೆ ಎಕ್ಸ್ಪೀರಿಯನ್ಸ್, ಗೈಡೆನ್ಸ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಬ್ಯಾಟಿಂಗ್ನಲ್ಲಿ ತಂಡಕ್ಕೆ ಬ್ಯಾಕ್ ಬೋನ್ ಆಗುವಂಥ ಸ್ಟಾರ್ ಪ್ಳೇಯರ್. ಲಾಸ್ಟ್ ಸೀಸನ್ನಂತೆಯೇ ಈ ಸೀಸನ್ನಲ್ಲೂ ಆರ್‌ಸಿಬಿ ಪರ ಬಿಗ್ ಸ್ಕೋರ್ ಕಲೆ ಹಾಕೋ ಹಿಂಟ್ ಕೊಟ್ಟಿದ್ದಾರೆ. ಕಳೆದ ಬಾರಿ 15 ಪಂದ್ಯಗಳಲ್ಲಿ 54.75 ರ ಸರಾಸರಿಯಲ್ಲಿ 657 ರನ್ಸ್ ಬಂದಿತ್ತು. 8 ಬಾರಿ ಅರ್ಧಶತಕ ದಾಖಲಿಸಿ ನೆಕ್ಸ್ಟ್ ಬ್ಯಾಟರ್ಸ್ ಗೆ ಪ್ರೆಶರ್ ಫ್ರೀ ಮಾಡಿಕೊಟ್ಟಿದ್ರು. ಈ ಸೀಸನ್ನಲ್ಲೂ ಅದೇ ಫಾರ್ಮ್ ನಲ್ಲಿ ಬ್ಯಾಟ್ ಬೀಸ್ತಿರೋ ಕೊಹ್ಲಿ ಹೈದ್ರಾಬಾದ್ ವಿರುದ್ಧ ಫಸ್ಟ್ ಮ್ಯಾಚಲ್ಲಿ 8 ಎಸೆತಗಳಲ್ಲಿ 69* ರನ್ಸ್ ಕಲೆ ಹಾಕಿದ್ರು. ಚೆನ್ನೈ ವಿರುದ್ಧ 28 ರನ್ಸ್ ಗಳಿಸಿದ್ರೂ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಕೊಹ್ಲಿ ಕ್ರೀಸ್ನಲ್ಲಿ ಇರೋವರೆಗೂ ಎದುರಾಳಿ ಪಡೆಗೆ ಡವಡವ ಇದ್ದದ್ದೇ. ಸೋ ಬ್ಯಾಟಿಂಗ್ನಲ್ಲಿ ಸ್ಟ್ರೆಂತ್ ಆಗೋದಷ್ಟೇ ಅಲ್ದೇ ಅವ್ರಲ್ಲಿರೋ ಎಕ್ಸ್ಪೀರಿಯನ್ಸ್ ತಂಡಕ್ಕೆ ಮುಖ್ಯ ಆಗುತ್ತೆ. ತಂಡಕ್ಕೆ ರಜತ್ ಪಾಟಿದಾರ್ ಕ್ಯಾಪ್ಟನ್ ಆಗಿದ್ರೂ ಯಾರ ಕೈಗೆ ಬಾಲ್ ಕೊಡ್ಬೇಕು ಎಲ್ಲಿ ಫೀಲ್ಡಿಂಗ್ ಸೆಟ್ ಮಾಡ್ಬೇಕು, ಮೊಮೆಂಟಮ್ ಎಲ್ಲಿ ಚೇಂಜ್ ಮಾಡ್ಬೇಕು ಅನ್ನೋದನ್ನೆಲ್ಲಾ ಕೊಹ್ಲಿಯೇ ಗೈಡ್ ಮಾಡೋದ್ರಿಂದ ತಂಡದ ಗೆಲುವಿಗೆ ಪ್ಲಸ್ ಆಗ್ತಿದೆ.
ನಂಬರ್ 2
ಡೆತ್ ಓವರ್ ಗಳಲ್ಲಿ ಆರ್ ಸಿಬಿ ಪರ ಅದ್ಭುತ ಫಿನಿಶಿಂಗ್!
ಆರ್ ಸಿಬಿ ಕಳೆದ ಎರಡು ಪಂದ್ಯಗಳಲ್ಲೂ ಬ್ಯಾಟಿಂಗ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅದ್ರಲ್ಲೂ ಡೆತ್ ಓವರ್‌ಗಳಲ್ಲಿ ಬೆಂಗಳೂರು ಪರ ಬಿಗ್ ಸ್ಕೋರ್ ಬರ್ತಿದೆ. ಸೋ ಇದು ಇಡೀ ಗೇಮ್ ಮೊಮೆಂಟಮ್ ಚೇಂಜ್ ಮಾಡ್ತಿದೆ. ಚೆನ್ನೈ ವಿರುದ್ಧದ ಮ್ಯಾಚಲ್ಲಿ 19ನೇ ಓವರ್ನಲ್ಲೇ 30 ರನ್ಸ್ ಬಂದಿತ್ತು. ಟಿಮ್ ಡೇವಿಡ್ ಅಂತೂ ಡೇವಿಡ್ 25 ಎಸೆತಗಳಲ್ಲಿ 280 ಸ್ಟ್ರೈಕ್ ರೇಟ್ ನಲ್ಲಿ ಔಟಾಗದೆ 70 ರನ್ ಗಳಿಸಿದರು. ಡೆತ್ ಓವರ್‌ಗಳಲ್ಲಿ ಅವರು ಗಳಿಸಿದ 68 ರನ್‌ಗಳು ಐಪಿಎಲ್ ಇನ್ನಿಂಗ್ಸ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್‌ನಿಂದ ಅತಿ ಹೆಚ್ಚು ಡೆತ್ ಓವರ್ ರನ್ ಗಳಿಸಿದ ದಾಖಲೆಯಾಗಿದೆ. ಸೋ ಇಲ್ಲಿ ಟಿಮ್ ಡೇವಿಡ್ ಬೊಂಬಾಟ್ ಆಗಿ ಬ್ಯಾಟ್ ಬೀಸಿದ್ರು ನಿಜ. ಆದ್ರೆ ಬ್ಯಾಟಿಂಗ್ ಡೆಪ್ತ್ ಇಷ್ಟಕ್ಕೇ ನಿಂತಿಲ್ಲ. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡೋ ಜಿತೇಶ್ ಶರ್ಮಾ ಇದ್ದಾರೆ, ಬಿಗ್ ಹಿಟ್ಟರ್ ರೊಮ್ಯಾರಿಯೋ ಶೆಫರ್ಡ್ ಇದ್ದಾರೆ ಹಾಗೇ ಕ್ರೂಶಿಯಲ್ ಇನ್ನಿಂಗ್ಸ್ ಆಡೋ ಕೃನಾಲ್ ಪಾಂಡ್ಯನೂ ಇದ್ದಾರೆ. ಸೋ ನಂಬರ್ 1 ಟು 8ವರೆಗೂ ಬ್ಯಾಟಿಂಗ್ ಲೈನಪ್ ಬೆಂಕಿಯಾಗಿದೆ.
ನಂಬರ್ 3
ಕಳೆದ ಎರಡು ಪಂದ್ಯಗಳಲ್ಲೂ ದಾಖಲೆಯ ಗೆಲುವು!
ಆರ್‌ಸಿಬಿ ಈ ಸೀಸನ್ನಲ್ಲಿ 2 ಮ್ಯಾಚ್ಗಳನ್ನ ಆಡಿದ್ದು ಎರಡ್ರಲ್ಲೂ ದಾಖಲೆಯ ಗೆಲುವು ಸಾಧಿಸಿದೆ. ಫಸ್ಟ್ ಮ್ಯಾಚಲ್ಲಿ ದಾಖಲೆಯ ಚೇಸಿಂಗ್.. ಸೆಕೆಂಡ್ ಮ್ಯಾಚಲ್ಲಿ ದಾಖಲೆಯ ಟಾರ್ಗೆಟ್ ಸೆಟ್ ಮಾಡಿದ್ರು. ಹೈದ್ರಾಬಾದ್ ವಿರುದ್ಧ 202 ರನ್ಗಳ ಟಾರ್ಗೆಟ್ ಬೆನ್ನಟ್ಟಿ ಕೇವಲ 15.4 ಓವರ್ಗಳಲ್ಲೇ ರೀಚ್ ಆಗಿದ್ರು. ಸೋ ಇದು ಐಪಿಎಲ್ ಇತಿಹಾಸದಲ್ಲಿ 200ಪ್ಲಸ್ ಟಾರ್ಗೆಟ್ನ ಫಾಸ್ಟೆಸ್ಟ್ ಚೇಸ್ ಆಗಿತ್ತು. ಌಂಡ್ ಏಪ್ರಿಲ್ 5ಕ್ಕೆ ಚೆನ್ನೈ ವಿರುದ್ಧ 251 ರನ್ಗಳ ಟಾರ್ಗೆಟ್ ಸೆಟ್ ಮಾಡಿದ್ದು ಚೆನ್ನೈ ವಿರುದ್ಧದ ಮ್ಯಾಚಲ್ಲಿ ತಂಡವೊಂದು ಗಳಿಸಿದ ಹೈಸ್ಕೋರ್ ಆಗಿತ್ತು. ಹೀಗಾಗಿ ಈ ಎರಡೂ ಪಂದ್ಯಗಳ ರಿಸಲ್ಟ್ ಆರ್ಸಿಬಿಗೆ ಪಾಸಿಟಿವ್ ಆಗಿ ಕಾಣ್ತಿದ್ದು ಡಿಫೆನ್ಸಿಂಗ್ ಚಾಂಪಿಯನ್ಸ್ಗೆ ಬೂಸ್ಟ್ ನೀಡ್ತಿದೆ. ಅವೇ ಪಿಚ್ನಲ್ಲೂ ಅಂಥದ್ದೇ ಪರ್ಫಾಮೆನ್ಸ್ ಬಂದ್ರೆ ಟಾಪ್ 4ಗೆ ಸೆಲೆಕ್ಟ್ ಆಗೋದನ್ನ ತಡೆಯೋಕೆ ಸಾಧ್ಯನೇ ಇಲ್ಲ. ಲಾಸ್ಟ್ ಸೀಸನ್ನಲ್ಲಿ ಹೊರಗಿನ ಪಿಚ್ಗಳಲ್ಲಿ 7ಕ್ಕೆ ಏಳೂ ಪಂದ್ಯಗಳನ್ನೂ ಗೆದ್ದಿದ್ರು.
ನಂಬರ್ 4
ಚಾಂಪಿಯನ್ ಬೌಲಿಂಗ್ ಯುನಿಟ್ ನಲ್ಲಿ ಬದಲಾವಣೆ ಇಲ್ಲ!
ಆರ್‌ಸಿಬಿ ಲಾಸ್ಟ್ ಸೀಸನ್ನಲ್ಲಿ ಟ್ರೋಫಿ ಗೆಲ್ಲೋಕೆ ಮುಖ್ಯ ಕಾರಣವೇ ಬೌಲಿಂಗ್ ಯುನಿಟ್ ಸ್ಟ್ರಾಂಗ್ ಇದ್ದದ್ದು. ಸೋ ಈ ಸೀಸನ್ನಲ್ಲೂ ಅದೇ ಯುನಿಟ್ ಕಂಟಿನ್ಯೂ ಆಗ್ತಿದೆ ಌಂಡ್ ಇನ್ನೂ ಸ್ಟ್ರಾಂಗ್ ಆಗಿದೆ. ಲಾಸ್ಟ್ ಸೀಸನ್ನಲ್ಲಿ ಜೋಶ್ ಹ್ಯಾಜಲ್‌ವುಡ್ 12 ಪಂದ್ಯಗಳಲ್ಲಿ 15.8 ಸರಾಸರಿಯಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದರು. ಹಾಗೇ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಈಗ ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಯುಜ್ವೇಂದ್ರ ಚಾಹಲ್ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ ನಮ್ಮ ಭುವಿ. ಇನ್ನು ಗೇಮ್ ಚೇಂಜರ್ ಕೃನಾಲ್ ಪಾಂಡ್ಯ 15 ವಿಕೆಟ್‌ಗಳನ್ನು ಕಬಳಿಸಿದ್ರು. ಹಾಗೇ ಫೈನಲ್ ಮ್ಯಾಚಲ್ಲಿ 17 ರನ್‌ಗಳನ್ನ ನೀಡಿ 2 ವಿಕೆಟ್ ತೆಗೆದು ಕಪ್ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ರು. ಈ ತ್ರಿವಳಿ ಬೌಲರ್ಸ್ ಈ ಸೀಸನ್ನಲ್ಲೂ ಕಂಟಿನ್ಯೂ ಆಗಿದ್ದಾರೆ. ಌಂಡ್ 2026 ರಲ್ಲಿ ಜಾಕೋಬ್ ಡಫಿ ಕೂಡ ಪಾರ್ಟಿಗೆ ಜಾಯ್ನ್ ಆಗಿದ್ದು ಚೊಚ್ಚಲ ಪಂದ್ಯದಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರು. ಹಾಗೇ ಸಿಎಸ್ಕೆ ವಿರುದ್ಧ ಕೂಡ ಪವರ್ ಪ್ಲೇನಲ್ಲೇ ವಿಕೆಟ್ ತೆಗೆದಿದ್ರು. ಸೋ ಬ್ಯಾಟಿಂಗ್ ಜೊತೆ ಬೌಲಿಂಗ್ ಕೂಡ ಚೆನ್ನಾಗೇ ಇರೋದ್ರಿಂದ ಟ್ರೋಫಿ ಡಿಫೆನ್ಸ್ ಮಾಡಿಕೊಳ್ಳೋಕೆ ಪ್ಲಸ್ ಆಗ್ಬಹುದು.
ನಂಬರ್ 5
ಐಪಿಎಲ್ ನಲ್ಲಿ 2 ತಂಡಗಳು ಮಾತ್ರವೇ ಬ್ಯಾಕ್ ಟು ಬ್ಯಾಕ್ ಕಪ್!
ಇನ್ನು ಐಪಿಎಲ್ ಇತಿಹಾಸವನ್ನ ಕೆದಕಿದ್ರೆ ಎರಡು ತಂಡಗಳು ಮಾತ್ರವೇ ಟ್ರೋಫಿ ಡಿಫೆನ್ಸ್ ಮಾಡಿಕೊಂಡಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 2010 ಮತ್ತು 2011ರಲ್ಲಿ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದಿತ್ತು. ಌಂಡ್ ಮುಂಬೈ ಇಂಡಿಯನ್ಸ್ ತಂಡ 2019 ಮತ್ತು 2020ರಲ್ಲಿ ಬ್ಯಾಕ್ ಟು ಬ್ಯಾಟ್ ಟೈಟಲ್ ವಿನ್ನರ್ಸ್ ಆಗಿದ್ರು. ಸೋ ಈಗ ಆರ್ ಸಿಬಿ ಕೂಡ ಈ ಲಿಸ್ಟ್ಗೆ ಸೇರಬಹುದು. ಯಾಕಂದ್ರೆ ಲಾಸ್ಟ್ ಸೀಸನ್ನ ಪ್ಲೇಯರ್ಗಳೇ ಕಂಟಿನ್ಯೂ ಆಗಿರೋದ್ರಿಂದ ಮತ್ತೆ ಅದೇ ರಿಸಲ್ಟ್ ಎಕ್ಸ್ಪೆಕ್ಟ್ ಮಾಡ್ಬೋದು.
ಐಪಿಎಲ್‌ನಂತಹ ಕಾಂಪಿಟೇಟಿವ್ ಲೀಗ್ಗಳಲ್ಲಿ ಆರಂಭದಲ್ಲೇ ವಿಜೇತರನ್ನ ಊಹೆ ಮಾಡೋದು ಸ್ವಲ್ಪ ಹಾಸ್ಯಾಸ್ಪದ ಅನ್ನಿಸ್ಬೋದು. ಬಟ್ ಆರ್‌ಸಿಬಿ ಇರೋ ಫಾರ್ಮ್ ನೋಡಿದ್ರೆ ಈ ರೀತಿಯಾದಂತ ಊಹೆ ಮಾಡೋದು ಅತಿಶಯೋಕ್ತಿ ಅಥವಾ ಓವರ್ ಥಿಂಕಿಂಗ್ ಅನ್ಸೋದಿಲ್ಲ. ಯಾಕಂದ್ರೆ ತಂಡದಲ್ಲಿ ಮೈನಸ್ ಇದ್ದಾಗ ಒಪ್ಪಿಕೊಳ್ಳೋಕೆ ರೆಡಿ ಇದ್ದೇವೆ ಅಂದಾಗ ಸ್ಟ್ರೆಂಥ್ನೂ ಕೂಡ ಒಪ್ಪಿಕೊಳ್ಳಬೇಕಾಗುತ್ತೆ. ಟೀಂ ಚೆನ್ನಾಗಿದೆ ಪರ್ಫಾಮೆನ್ಸ್ ಕೂಡ ಹಾಗೇ ಬರ್ತಿದೆ. ಫ್ಯಾನ್ಸ್ ಸಪೋರ್ಟ್ ನೆಕ್ಸ್ಟ್ ಲೆವೆಲ್ನಲ್ಲಿದೆ. ಸೋ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಆರ್‌ಸಿಬಿ ಮತ್ತೊಂದು ಚರಿತ್ರೆ ಬರೆಯಲಿ.

ನೋಡಿರಿ

