RCBಗೆ ಈಗ AWAY ಚಾಲೆಂಜ್ – ಮತ್ತೆ ಔಟ್ ಆಫ್ ಔಟ್ ಬರುತ್ತಾ?
RR ವಿರುದ್ಧದ ಫೈಟ್ ನಲ್ಲಿದೆ ಟ್ವಿಸ್ಟ್!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮ್ಯಾಚ್ ಗೆದ್ದಿರೋ ಆರ್ ಸಿಬಿ ಈಗ ಈ ಸೀಸನ್ ನ ಮೊದಲ ಅವೇ ಮ್ಯಾಚ್ ಗಾಗಿ ಗುವಾಹಟಿಗೆ ಹಾರಿದೆ. ರಾಜಸ್ಥಾನ ವಿರುದ್ಧ ಏಪ್ರಿಲ್ 10ಕ್ಕೆ ಪಂದ್ಯ ನಡೆಯಲಿದೆ. ಬೆಂಗಳೂರು ಬಾಯ್ಸ್ ಇರೋ ಫಾರ್ಮ್ ನೋಡಿದ್ರೆ ಹೊರಗಿನ ಮೈದಾನಗಳಲ್ಲೂ ಡಾಮಿನೇಟ್ ಮಾಡೋದು ಪಕ್ಕಾ.
ಇದನ್ನೂ ಓದಿ : CSKಯಲ್ಲಿ ಸದ್ದೇ ಮಾಡ್ತಿಲ್ಲ ಸಂಜು – 3 ಮ್ಯಾಚ್.. 22 ರನ್ಸ್.. ಏನಾಯ್ತು?
2026ರ ಸೀಸನ್ನಲ್ಲಿ ಆರ್ಸಿಬಿ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತೆ. ಇದ್ರಲ್ಲಿ 7 ಹೋಂ ಪಿಚ್ ಹಾಗೇ 7 ಹೊರಗಿನ ಪಿಚ್ಗಳಲ್ಲಿ ಆಡ್ಬೇಕಿತ್ತು. ಬಟ್ ರಾಯ್ಪುರವನ್ನ ತವರು ಮೈದಾನ ಅಂತಾ ಘೋಷಣೆ ಮಾಡಿರೋದ್ರಿಂದ 2 ಪಂದ್ಯಗಳನ್ನ ರಾಯ್ಪುರದಲ್ಲಿ ಆಡುತ್ತೆ. ಅವೂ ಕೂಡ ಹೋಂ ಪಿಚ್ ಅಂತಾನೇ ಕನ್ಸಿಡರ್ ಮಾಡ್ಬೇಕು. ಇನ್ನು ಬೆಂಗಳೂರಲ್ಲಿ ಟೋಟಲ್ 5 ಮ್ಯಾಚಸ್. ಆಲ್ರೆಡಿ 2 ಪಂದ್ಯ ಆಡಿದ್ದಾರೆ. ಇನ್ನು ಮೂರು ಪಂದ್ಯ ಅಷ್ಟೇ ಇರುತ್ತೆ. ಉಳಿದ 7 ಅವೇ ಗೇಮ್ಗಳಲ್ಲಿ ಮೊದಲ ಪಂದ್ಯ ಈಗ ರಾಜಸ್ಥಾನ ವಿರುದ್ಧ ನಡೆಯಲಿದೆ.
2025ರಲ್ಲಿ ಏಳಕ್ಕೆ ಏಳೂ ಪಂದ್ಯಗಳನ್ನ ಗೆದ್ದಿದ್ದ ಬೆಂಗಳೂರು!
ಕಳೆದ ಸೀಸನ್ನಲ್ಲಿ ಆರ್ಸಿಬಿ ಚಿನ್ನಸ್ವಾಮಿಯಲ್ಲಿ ಕೆಲ ಪಂದ್ಯಗಳನ್ನ ಸೋತಿದ್ದು ಬಿಟ್ರೆ ಹೊರಗಿನ ಮೈದಾನಗಳಲ್ಲಿ ಔಟ್ ಆಫ್ ಔಟ್ ಮ್ಯಾಚಸ್ ವಿನ್ ಆಗಿತ್ತು. ಅಂದ್ರೆ ಏಳಕ್ಕೆ ಏಳೂ ಪಂದ್ಯಗಳನ್ನ ಗೆದ್ದು ದಾಖಲೆ ಬರೆದಿದ್ರು. ಐಪಿಎಲ್ ಇತಿಹಾಸದಲ್ಲಿ ಯಾವುದೇ ಟೀಂ ಕೂಡ ಈ ಸಾಧನೆ ಮಾಡಿರಲಿಲ್ಲ. ಕೆಕೆಆರ್, ಚೆನ್ನೈ, ಮುಂಬೈ, ರಾಜಸ್ಥಾನ, ಪಂಜಾಬ್, ಡೆಲ್ಲಿ, ಹಾಗೇ ಲಕ್ನೋ ತಂಡಗಳನ್ನ ಅವ್ರದ್ದೇ ಮೈದಾನದಲ್ಲಿ ಸೋಲಿಸಿ ಮೆರೆದಾಡಿದ್ರು. ಈಗ ಆರ್ಸಿಬಿ ಪ್ಲೇಯರ್ಗಳ ಆರ್ಭಟ ನೋಡಿದ್ರೆ ಈ ಸೀಸನ್ನಲ್ಲೂ ಅಂಥದ್ದೇ ಸಾಧನೆ ಮಾಡೋ ಥರ ಕಾಣ್ತಿದ್ದಾರೆ. ಸದ್ಯ ಇದೇ ಶುಕ್ರವಾರ ರಾಜಸ್ಥಾನ ವಿರುದ್ಧ ಗುವಾಹಟಿಯಲ್ಲಿ ಪಂದ್ಯ ಇದ್ದು ಎಲ್ಲರ ಕಣ್ಣು ಈ ಪಂದ್ಯದ ಮೇಲಿದೆ.
ಹೊರಗಿನ ಮೈದಾನಗಳಲ್ಲಿ ಬೆಂಗಳೂರು ಪಂದ್ಯಗಳು!
ದಿನಾಂಕ ಎದುರಾಳಿ ಸ್ಥಳ ಸಮಯ
ಏ.10 ರಾಜಸ್ಥಾನ್ ರಾಯಲ್ಸ್ ಎಸಿಎ ಸ್ಟೇಡಿಯಂ ಸಂಜೆ 7:30
ಏ.12 ಮುಂಬೈ ಇಂಡಿಯನ್ಸ್ ವಾಂಖೆಡೆ ಸಂಜೆ 7:30
ಏ.27 ದೆಹಲಿ ಕ್ಯಾಪಿಟಲ್ಸ್ ಅರುಣ್ ಜೇಟ್ಲಿ ಸಂಜೆ 7:30
ಏ.30 ಗುಜರಾತ್ ಟೈಟಾನ್ಸ್ ಮೋದಿ ಮೈದಾನ ಸಂಜೆ 7:30
ಮೇ 7 ಲಕ್ನೋ ಸೂಪರ್ ಜೈಂಟ್ಸ್ ಏಕನಾ ಕ್ರೀಡಾಂಗಣ ಸಂಜೆ 7:30
ಮೇ 17 ಪಂಜಾಬ್ ಕಿಂಗ್ಸ್ HPCA ಕ್ರೀಡಾಂಗಣ ಮಧ್ಯಾಹ್ನ 3:30
ಮೇ 22 ಸನ್ ರೈಸರ್ಸ್ ಹೈದರಾಬಾದ್ ರಾಜೀವ್ ಗಾಂಧಿ ಮೈದಾನ ಸಂಜೆ 7.30
ಅಲ್ಲಿಗೆ ಬೆಂಗಳೂರಿನಲ್ಲಿ ಹೈದ್ರಾಬಾದ್ ವಿರುದ್ಧದ ಪಂದ್ಯದ ಮೂಲಕ ಸ್ಟಾರ್ಟ್ ಆಗಿದ್ದ ಆರ್ಸಿಬಿ ಜರ್ನಿ ಮೇ 22ರಂದು ಹೈದರಾಬಾದ್ನಲ್ಲಿ ಅದೇ ಹೈದ್ರಾಬಾದ್ ತಂಡದ ವಿರುದ್ಧದ ರಿವೇಂಜ್ ಮ್ಯಾಚ್ ಮೂಲಕ ಕೊನೆಯಾಗಲಿದೆ. ರಾಯ್ಪುರದಲ್ಲೂ 2 ಮ್ಯಾಚಸ್ ನಡೆದ್ರೂ ಅದು ಹೋಂ ಗ್ರೌಂಡ್ ಅಂತಾ ಘೋಷಣೆ ಮಾಡಿರೋದ್ರಿಂದ ಅವನ್ನ ಅವೇ ಪಿಚ್ ಪಂದ್ಯಗಳಿಗೆ ಕನ್ಸಿಡರ್ ಮಾಡೋಕೆ ಆಗಲ್ಲ.

ನೋಡಿರಿ

